Advertisement

ಮುಸ್ಲಿಮರಿಗೆ ಜನಸಂಖ್ಯಾ ಸ್ಫೋಟದ ಪರಿವೆ ಇಲ್ಲ

01:52 AM Aug 17, 2019 | Team Udayavani |

ನವದೆಹಲಿ: ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದಲ್ಲಿ ಜನಸಂಖ್ಯಾ ನಿಯಂತ್ರಣ ಹಾಗೂ ಒಂದೇ ಬಾರಿಗೆ ಚುನಾವಣೆ ನಡೆಸುವ ಘೋಷಣೆ ಬಗ್ಗೆ ಶಿವಸೇನೆ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ಕಾಶ್ಮೀರದ 370ನೇ ವಿಧಿ ರದ್ದತಿ ಮತ್ತು ತ್ರಿವಳಿ ತಲಾಖ್‌ ರದ್ದತಿ ಮಾಡುವ ಮೂಲಕ ಪ್ರಧಾನಿ ಮೋದಿ ಒಂದು ಸಂದೇಶ ನೀಡಿದ್ದಾರೆ. ಅವರು ಜನಸಂಖ್ಯಾ ಸ್ಫೋಟ ಸಮಸ್ಯೆಯನ್ನು ಖಂಡಿತವಾಗಿಯೂ ಪರಿಹರಿಸುತ್ತಾರೆ. ಸದ್ಯ ಮುಸ್ಲಿಂ ಸಂಪ್ರದಾಯವಾದಿಗಳು ಜನಸಂಖ್ಯಾ ಸ್ಫೋಟದ ಬಗ್ಗೆ ಯಾವ ಕಾಳಜಿಯನ್ನೂ ಹೊಂದಿಲ್ಲ. ‘ನಾವಿಬ್ಬರು, ನಮಗೆ ಇಪ್ಪತ್ತೈದು’ ಎಂಬ ಮನಸ್ಥಿತಿಯಿಂದ ಅವರು ಇನ್ನೂ ಹೊರಬಂದಿಲ್ಲ ಎಂದು ಶಿವಸೇನೆಯ ಮುಖವಾಣಿ ಸಾಮ್ನಾ ದಲ್ಲಿನ ಸಂಪಾದಕೀಯದಲ್ಲಿ ವಿವರಿಸಲಾಗಿದೆ.

ಮೋದಿ ಹೇಳಿಕೆಗೆ ಚಿದಂಬರಂ ಸ್ವಾಗತ: ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸುತ್ತಿದ್ದ ಕಾಂಗ್ರೆಸ್‌ ಮುಖಂಡ ಪಿ.ಚಿದಂಬರಂ, ಕೆಂಪುಕೋಟೆ ಮೇಲೆ ಮೋದಿ ಮಾತನಾಡಿದ ಹಲವು ವಿಷಯಗಳನ್ನು ಸ್ವಾಗತಿಸಿದ್ದಾರೆ. ಜನಸಂಖ್ಯೆ ನಿಯಂತ್ರಣ, ಸಂಪನ್ಮೂಲ ವರ್ಧಿಸುವವರಿಗೆ ಗೌರವ ನೀಡುವುದು, ಬಳಸಿ ಎಸೆಯುವ ಪ್ಲಾಸ್ಟಿಕ್‌ ನಿರ್ಬಂಧ ವಿಚಾರವನ್ನು ಚಿದಂಬರಂ ಬೆಂಬಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next