Advertisement

ಸಿದ್ದಾಪುರದಲ್ಲಿ ಮುಸ್ಲಿಮರಿಂದ  ಅದ್ದೂರಿ ಗಣೇಶೋತ್ಸವ

11:08 PM Sep 01, 2022 | Suhan S |

ಸಿದ್ದಾಪುರ: ಇಲ್ಲಿಗೆ ಸಮೀಪದ ಶ್ರೀರಾಮ ನಗರದಲ್ಲಿ ಮುಸ್ಲಿಂ ಸಮುದಾಯದವರು ಅದ್ದೂರಿ ಯಾಗಿ ಗಣೇಶ ಚತುರ್ಥಿಯನ್ನು ಆಚರಿಸುತ್ತಿದ್ದು, ಆ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

Advertisement

ಇಲ್ಲಿ ಮುಸ್ಲಿಮರು  13 ವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರು, ಪಂಕ್ಚರ್‌ ಅಂಗಡಿ, ಹಾರ್ಡ್‌ವೇರ್‌ ಶಾಪ್‌, ಎಲೆಕ್ಟ್ರಿಕ್‌ ಅಂಗಡಿಯವರು ಸಹಿತ ಸುಮಾರು 40 ಮಂದಿ ಮುಸ್ಲಿಂ ಯುವಕರು, ಹಿರಿಯರು ಸೇರಿ ಗಣೇಶ ಹಬ್ಬವನ್ನು ಭರ್ಜರಿಯಾಗಿ ಆಚರಿಸುತ್ತಾರೆ. ಇವರು ತಮ್ಮ ತಮ್ಮಲ್ಲಿಯೇ ಹಣ ಸಂಗ್ರಹಿಸಿಕೊಂಡು 5 ಅಥವಾ 9 ದಿನಗಳ ವರೆಗೆ  ನಿತ್ಯವೂ ಹಿಂದೂ ಸಂಪ್ರದಾಯದಂತೆ ಗಣೇಶನಿಗೆ ಪೂಜೆ ಸಲ್ಲಿಸಲಾಗುತ್ತದೆ.

ಎಲ್ಲ ಧರ್ಮದವರಿಗೆ ಇರುವ ದೇವರು ಒಬ್ಬನೇ. ಆದರೆ, ಆತನನ್ನು ಕರೆಯುವ ಹೆಸರುಗಳು ಮಾತ್ರ ಬೇರೆ ಬೇರೆಯಾಗಿವೆ. ಮನುಷ್ಯರು ಮೊದಲು ಮಾನವೀಯತೆ ಮರೆತು ಬಾಳುವುದಕ್ಕಿಂತ ಅರಿತು ಬಾಳಿದರೆ ಬಾಳಿಗೊಂದು ಅರ್ಥ ಬರುತ್ತದೆ. ಗಣಪನೆಂದರೆ ನಮಗೂ ಇಷ್ಟ. ಅದೇ ರೀತಿ ಮೊಹರಂ, ರಂಜಾನ್‌ ಎಂದರೆ ಹಿಂದೂಗಳು ಇಷ್ಟಪಡುತ್ತಾರೆ. ಗಣೇಶ ವಿಸರ್ಜನೆ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಅನ್ನ ಸಂತರ್ಪಣೆ ಸಹಿತ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next