Advertisement

ಗೋ ರಕ್ಷಣೆ ಹೆಸರಲ್ಲಿ ಮುಸ್ಲಿಮರ ಹತ್ಯೆ: ಮೆಹಬೂಬ ಮುಫ್ತಿ ಆರೋಪ

06:38 AM Feb 11, 2019 | Team Udayavani |

ಜಮ್ಮು : ‘ದೇಶದಲ್ಲಿ ಗೋ ರಕ್ಷಣೆಯ ನೆಪದಲ್ಲಿ ಇಂದಿಗೂ ಮುಸ್ಲಿಮರನ್ನು ಕೊಲ್ಲಲಾಗುತ್ತಿದೆ’ ಎಂದು ಆರೋಪಿಸಿರುವ ಪಿಡಿಪಿ ಮುಖ್ಯಸ್ಥೆ ಮತ್ತು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರು ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಮೋದಿ ಸರಕಾರವನ್ನು ಟೀಕಿಸುವುದನ್ನು ಮುಂದುವರಿಸಿದ್ದಾರೆ.

Advertisement

ಕೇಂದ್ರದಲ್ಲಿನ ಆಳುವ ಬಿಜೆಪಿ ಸರಕಾರದ ಹಿಂದುತ್ವದ ರಾಜಕಾರಣವನ್ನು ತೀವ್ರವಾಗಿ ಟೀಕಿಸಿರುವ ಮುಫ್ತಿ, ಬಿಜೆಪಿ ಸರಕಾರ ಹಳೇ ನಗರಗಳು ಮತ್ತು ಸ್ಮಾರಕಗಳ ಹೆಸರನ್ನು ಬದಲಿಸುವುದರಲ್ಲಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಮಾತ್ರವೇ ಆಸಕ್ತವಾಗಿದೆ ಎಂದು ಟೀಕಿಸಿದರು. 

ಕರ್ತಾರ್‌ಪುರ್‌ ಕಾರಿಡಾರ್‌ ವಿಷಯದಲ್ಲಿ ಸದ್ಭಾವನೆ ತೋರಿರುವ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತಪಡಿಸಿದ ಮೆಹಬೂಬ, ಪಾಕಿಸ್ಥಾನದಲ್ಲಿ ಅಲ್ಲಿನ ಸರಕಾರ ಹಿಂದೂ ದೇವಾಲಯಗಳನ್ನು ರಕ್ಷಿಸುವ ಕಾಯಿದೆಯನ್ನು ರೂಪಿಸಿದೆ. ಹಾಗೆಯೇ ಒಂದು ಮೀಸಲು ಅರಣ್ಯಕ್ಕೆ ಮತ್ತು ವಿವಿಗೆ ಗುರು ನಾನಕ್‌ ಜೀ ಅವರ ಹೆಸರನ್ನು ಇರಿಸಿದ್ದಾರೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next