Advertisement

ದೇಶದ ಕೈದಿಗಳ ಸಂಖ್ಯೆಯಲ್ಲಿ ಶೇ.28ರಷ್ಟು ಏರಿಕೆ; ಎನ್‌ಸಿಆರ್‌ಬಿಯ ವರದಿಯಲ್ಲಿ ಉಲ್ಲೇಖ

07:25 PM Sep 04, 2022 | Team Udayavani |

ನವದೆಹಲಿ: 2016ಕ್ಕೆ ಹೋಲಿಸಿದರೆ 2021ರಲ್ಲಿ ದೇಶದ ಕೈದಿಗಳ ಸಂಖ್ಯೆಯಲ್ಲಿ ಶೇ.28ರಷ್ಟು ಏರಿಕೆಯಾಗಿದೆ.

Advertisement

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‌ಸಿಆರ್‌ಬಿ)ದ ಇತ್ತೀಚಿನ ವರದಿ ಪ್ರಕಾರ, 2016ರಲ್ಲಿ ದೇಶದಲ್ಲಿ 4.33 ಲಕ್ಷ ಕೈದಿಗಳಿದ್ದರು. 2021ರಲ್ಲಿ ಈ ಸಂಖ್ಯೆ 5.54 ಲಕ್ಷಕ್ಕೆ ಏರಿಕೆಯಾಗಿದೆ.

ಇನ್ನೊಂದೆಡೆ, 2016ಕ್ಕೆ ಹೋಲಿಸಿದರೆ 2021ರಲ್ಲಿ ಅಪರಾಧಿಗಳ ಸಂಖ್ಯೆ ಶೇ. 9.5ರಷ್ಟು ತಗ್ಗಿದೆ. ವಿಚಾರಣಾಧೀನ ಕೈದಿಗಳ ಸಂಖ್ಯೆ ಶೇ. 45.8ರಷ್ಟು ಏರಿಕೆಯಾಗಿದೆ. ನ್ಯಾಯಾಂಗ ವಶದಲ್ಲಿರುವ ಆರೋಪಿಗಳ ಸಂಖ್ಯೆ ಶೇ. 12.3ರಷ್ಟು ಹೆಚ್ಚಿದೆ.

2021ರ ಡಿಸೆಂಬರ್‌ 31ರ ಡೇಟಾ ಪ್ರಕಾರ, ದೇಶದ 5.54 ಲಕ್ಷ ಕೈದಿಗಳ ಪೈಕಿ 4.27 ಲಕ್ಷ ವಿಚಾರಣಾ ಕೈದಿಗಳು, 1.22 ಲಕ್ಷ ಅಪರಾಧಿಗಳು, 3,470 ನ್ಯಾಯಾಂಗ ವಶದಲ್ಲಿರುವ ಆರೋಪಿಗಳು ಹಾಗೂ 547 ಮಂದಿ ಇತರೆ ಆರೋಪಿಗಳು ಸೇರಿದ್ದಾರೆ.

ಧರ್ಮದ ಆಧಾರದಲ್ಲಿ ವಿಗಂಡಿಸುವುದಾದರೆ, ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳ 5.22 ಲಕ್ಷ ಕೈದಿಗಳ ಪೈಕಿ 3.84 ಲಕ್ಷ ಹಿಂದೂಗಳು, 97,650 ಮುಸ್ಲಿಮರು, 22,100 ಸಿಖVರು, 13,118 ಕ್ರೈಸ್ತರು ಹಾಗೂ 4,785 ಮಂದಿ ಇತರೆ ಧರ್ಮಗಳಿಗೆ ಸೇರಿದ ಕೈದಿಗಳು ಇದ್ದಾರೆ.

Advertisement

2020ರಲ್ಲಿ ಶೇ. 72.8ರಷ್ಟಿದ್ದ ಹಿಂದೂ ಕೈದಿಗಳ ಸಂಖ್ಯೆ 2021ರಲ್ಲಿ 73.6ಕ್ಕೆ ಏರಿಕೆಯಾಗಿದೆ. ಆದರೆ ಶೇ. 20.2ರಷ್ಟಿದ್ದ ಮುಸ್ಲಿಂ ಕೈದಿಗಳ ಸಂಖ್ಯೆ ಶೇ. 18.7ಕ್ಕೆ ತಗ್ಗಿದೆ. ಅದೇ ರೀತಿ ಶೇ. 3.4ರಷ್ಟಿದ್ದ ಸಿಖ್‌ ಕೈದಿಗಳ ಸಂಖ್ಯೆ ಶೇ.4.2ಕ್ಕೆ ಏರಿಕೆಯಾಗಿದೆ. ಶೇ. 2.6ರಷ್ಟಿದ್ದ ಕ್ರೈಸ್ತ ಕೈದಿಗಳ ಶೇ. 2.5ಕ್ಕೆ ತಗ್ಗಿದೆ.

2021ರ ಡಿಸೆಂಬರ್‌ 31ರ ಡೇಟಾ
ಒಟ್ಟು ಕೈದಿಗಳು 5,22,042(ಮಹಾರಾಷ್ಟ್ರ ಹೊರತುಪಡಿಸಿ)
ಧರ್ಮ ಕೈದಿಗಳ ಸಂಖ್ಯೆ ಶೇಖಡಾವಾರು
ಹಿಂದೂ 3,84,389 73.6
ಮುಸ್ಲಿಂ 97,650 18.7
ಸಿಖ್‌ 22,100 4.2
ಕ್ರೈಸ್ತ 13,118 2.5
ಇತರರು 4,785 0.9

2020ರ ಡಿಸೆಂಬರ್‌ 31ರ ಡೇಟಾ
ಒಟ್ಟು ಕೈದಿಗಳು 4,62,236(ಮಹಾರಾಷ್ಟ್ರ ಹೊರತುಪಡಿಸಿ)
ಧರ್ಮ ಕೈದಿಗಳ ಸಂಖ್ಯೆ ಶೇಕಡಾವಾರು
ಹಿಂದೂ 3,36,729 72.8
ಮುಸ್ಲಿಂ 93,774 20.2
ಸಿಖ್‌ 15,807 3.4
ಕ್ರೈಸ್ತ 12,046 2.6
ಇತರರು 3,880 0.8

Advertisement

Udayavani is now on Telegram. Click here to join our channel and stay updated with the latest news.

Next