ಹೊಸದಿಲ್ಲಿ: ದೇಶದಲ್ಲಿ 2023ರಲ್ಲಿ ಅಂದಾಜು 19.7 ಕೋಟಿ ಮುಸ್ಲಿಮರಿದ್ದಾರೆ ಎಂದು ಸಂಸತ್‌ಗೆ ಸರಕಾರ ಮಾಹಿತಿ ನೀಡಿದೆ.
ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಾಲಾ ರಾಯ್ ಅವರು ಕೇಳಿದ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ ಕೇಂದ್ರ ಅಲ್ಪಸಂಖ್ಯಾಕರ ಖಾತೆ ಸಚಿವೆ ಸ್ಮತಿ ಇರಾನಿ, “2011ರ ಜನಗಣತಿ ಪ್ರಕಾರ, ಒಟ್ಟು ಜನಸಂಖ್ಯೆಯಲ್ಲಿ ಶೇ.14.2ರಷ್ಟು ಮುಸ್ಲಿಮರಿದ್ದರು. ಅಂದರೆ ದೇಶದಲ್ಲಿ 17.2 ಕೋಟಿ ಮುಸ್ಲಿಮರಿದ್ದರು ಎಂದು ತಿಳಿಸಿದ್ದಾರೆ.
138.82 ಕೋಟಿ ಭಾರತೀಯರು: “2020ರ ಜುಲೈನಲ್ಲಿ ಜನಸಂಖ್ಯೆ ಪ್ರಕ್ಷೇಪಗಳ ತಾಂತ್ರಿಕ ತಂಡದ ವರದಿಯ ಪ್ರಕಾರ, 2023ರಲ್ಲಿ ದೇಶದ ಜನಸಂಖ್ಯೆ 138.82 ಕೋಟಿ ಆಗಲಿದೆ.
ಇದೇ ವರದಿಯನ್ನು ಪರಿಗಣಿಸಿದರೆ ದೇಶದಲ್ಲಿ ಪ್ರಸ್ತುತ ಅಂದಾ ಜು 19.7 ಕೋಟಿ ಮುಸ್ಲಿಮರು ಇದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಸಾಕ್ಷರತಾ ಪ್ರಮಾಣ ಏರಿಕೆ: ಸಾಂಖೀಕ ಮತ್ತು ಯೋಜನಾ ಅನು ಷ್ಠಾನ ಸಚಿವಾಲಯ 2021-22ರಲ್ಲಿ ನಡೆಸಿದ ಪೀರಿಯಾಡಿಕ್ ಲೇಬರ್ ಫೋರ್ಸ್ ಸರ್ವೆ(ಪಿಎಲ್‌ಎಫ್ಎಸ್) ಪ್ರಕಾರ, ಏಳು ಮತ್ತು ಅದಕ್ಕಿಂತ ಹೆಚ್ಚಿನ ವಯೋಮಾನದ ಮುಸ್ಲಿಮರಲ್ಲಿ ಸಾಕ್ಷರತಾ ಪ್ರಮಾಣವು ಶೇ.77.7ರಷ್ಟಿದೆ. ಅಲ್ಲದೇ ಕಾರ್ಮಿಕ ಬಲದ ಭಾಗವಹಿಸುವಿಕೆ ಪ್ರಮಾಣವು ಶೇ. 35.1ರಷ್ಟಿದೆ.