ಹೈದರಾಬಾದ್: ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಪಾರದರ್ಶಕ ನ್ಯಾಯ ಮತ್ತು ಸಮಾನ ಗೌರವದ ಯಾವುದೇ ರಾಜಿಗೆ ತಯಾರಿದ್ದೇವೆ ಎಂದು ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಮಂಡಳಿ ಈ ನಿರ್ಧಾರ ಪ್ರಕಟಿಸಿದ್ದು, ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಘೋಷಿಸಲಾಗಿದೆ.
ಒಮ್ಮೆ ಮಸೀದಿ ಎಂದಾಗಿರುವುದು ಎಂದಿಗೂ ಮಸೀದಿಯಾಗಿಯೇ ಇರಬೇಕು. ಈಗ ನ್ಯಾಯಾಲಯ ಪ್ರಕರಣವನ್ನು ಕೇವಲ ಭೂಮಿ ವ್ಯಾಜ್ಯ ಎಂದು ಪರಿಗಣಿಸಿ ವಿಚಾರಣೆ ನಡೆಸಲು ನಿರ್ಧರಿಸಿದೆ ಎಂದು ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ವಲಿ ರೆಹಮಾನಿ
ಹೇಳಿದ್ದಾರೆ.
ಅಲ್ಲದೆ, ಶರಿಯಾ ಕಾನೂನು ಪ್ರಕಾರ ಒಮ್ಮೆ ಮಸೀದಿಗೆ ಮೀಸಲಿಟ್ಟ ಜಾಗವನ್ನು ಮಾರಾಟ ಮಾಡಲಾಗದು, ಉಡುಗೊರೆ ನೀಡಲಾಗದು ಎಂದಿದ್ದಾರೆ. ಈ ಹಿಂದೆ ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಬೆಂಗಳೂರಿನಲ್ಲಿ ಸುನ್ನಿ ವಕ್ಫ್ ಮಂಡಳಿ, ಎಐಎಂಪಿಎಲ್‌ಬಿ ಹಾಗೂ ಇತರ ಮುಸ್ಲಿಂ ಮುಖಂಡರ ಜತೆ ಮಾತುಕತೆ ನಡೆಸಿದ್ದು, ಕೋರ್ಟ್‌ನ ಹೊರಗೆ ರಾಜಿ ಮಾಡಿಕೊಳ್ಳಲು ಮುಸ್ಲಿಂ ಮುಖಂಡರು ಸಮ್ಮತಿಸಿದ್ದಾರೆ ಎನ್ನಲಾಗಿತ್ತು.