Advertisement

ಜೈ ಶ್ರೀರಾಮ್‌ ಘೋಷಣೆ ಕೂಗಿ ಮುಸ್ಲಿಂ ಕುಟುಂಬದ ಮೇಲೆ ಬಲವಂತವಾಗಿ ಹೋಳಿ ಬಣ್ಣ ಎಸೆದ ಯುವಕರು

02:53 PM Mar 24, 2024 | Team Udayavani |

ಲಕ್ನೋ: ಮುಸ್ಲಿಂ ಕುಟುಂಬವೊಂದನ್ನು ಅಡ್ಡಗಟ್ಟಿ ಅವರ ಮೇಲೆ ಬಲವಂತವಾಗಿ ಹೋಳಿ ಬಣ್ಣವನ್ನು ಹಾಕಿರುವ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ಮಾರ್ಚ್‌ 20 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಬೈಕ್‌ ನಲ್ಲಿ ಸಾಗುತ್ತಿದ್ದ ಮುಸ್ಲಿಂ ಕುಟುಂಬವನ್ನು ಕೆಲ ಅಪರಿಚಿತರು ಅಡ್ಡಗಟ್ಟಿದ್ದಾರೆ. ಆ ಬಳಿಕ ಅವರ ಮೇಲೆ ಬಲವಂತವಾಗಿ ಬಣ್ಣದ ನೀರನ್ನು ಎಸೆದಿದ್ದಾರೆ. ಜೈಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಾ ಕುಟುಂಬದ ಮೇಲೆ ಬಣ್ಣವನ್ನು ಎಸೆಯಲಾಗಿದೆ.

ನೊಂದ ಕುಟುಂಬವನ್ನು ಸಂಪರ್ಕಿಸಿ ಅವರಿಂದ ಹೇಳಿಕೆ ಪಡೆದು ಎಫ್‌ ಐಆರ್‌ ದಾಖಲಿಸುವಂತೆ ಸೂಚಿಸಲಾಗಿದೆ. ಬಿಜ್ನೋರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಈ ವ್ಯಕ್ತಿಗಳನ್ನು ಗುರುತಿಸುತ್ತಿದ್ದಾರೆ ಎಂದು ಎಸ್‌ಎಸ್‌ಪಿ  ನೀರಜ್ ಜಾದುವಾನ್ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next