ಹೊಸದಿಲ್ಲಿ: ಯುಎಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ಮುಸ್ಲಿಮರ ವಿಷಯದ ಕುರಿತಾಗಿ ನೀಡಿದ ಉತ್ತರಗಳನ್ನು ಸಮರ್ಥಿಸಿಕೊಂಡಿದ್ದು,ಟೀಕೆಗಾಗಿ ವಿಪಕ್ಷಗಳು ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ಕಿಡಿ ಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ, ಚುನಾವಣಾ ಸೋಲಿನ ಮುಖಾಂತರ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು, ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿದರು. ಒಬಾಮಾ ಅವರ ಆಡಳಿತದಲ್ಲಿ ಆರು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದನ್ನು ನೆನಪಿಸಿ ಭಾರತೀಯ ಮುಸ್ಲಿಮರ ಬಗ್ಗೆ ಅವರ ಹೇಳಿಕೆಗಳನ್ನು ಪ್ರಶ್ನಿಸಿದರು.
ದೇಶದ ಪ್ರಧಾನಿಯಾಗಿ ಮೋದಿ ಅವರಿಗೆ ದೊರೆತ 13 ಪ್ರಶಸ್ತಿಗಳಲ್ಲಿ 6 ಪ್ರಶಸ್ತಿಗಳನ್ನು ಮುಸ್ಲಿಮರು ಬಹುಸಂಖ್ಯಾತರಾಗಿರುವ ದೇಶಗಳು ನೀಡಿವೆ ಎಂದರು.
ಸಿಎನ್‌ಎನ್‌ಗೆ ನೀಡಿದ ಸಂದರ್ಶನಕ್ಕಾಗಿ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿದ ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿಯವರೊಂದಿಗೆ ಭಾರತೀಯ ಮುಸ್ಲಿಮರ ವಿಷಯವನ್ನು ಪ್ರಸ್ತಾಪಿಸಲು ನೋಡುವುದಾಗಿ ಹೇಳಿದರು. ನಾನು ಆಘಾತಕ್ಕೊಳಗಾಗಿದ್ದೇನೆ. ಪ್ರಧಾನಿ ಮೋದಿ ಭಾರತದ ಕುರಿತು ಯುಎಸ್‌ನಲ್ಲಿರುವಾಗ, ಪ್ರಚಾರ ಎಂದರೆ ಭಾರತದ ಬಗ್ಗೆ ಮಾತನಾಡುವುದು. ಯುಎಸ್ ಮಾಜಿ ಅಧ್ಯಕ್ಷರು ಭಾರತೀಯ ಮುಸ್ಲಿಮರ ಬಗ್ಗೆ ಮಾತನಾಡುತ್ತಿದ್ದಾರೆ.ನಾನು ಇದನ್ನು ಸಂಯಮದಿಂದ ಹೇಳುತ್ತಿದ್ದೇನೆ. ಏಕೆಂದರೆ ಅದು ಇನ್ನೊಂದು ದೇಶವನ್ನು ಒಳಗೊಂಡಿರುತ್ತದೆ. ನಾವು ಯುಎಸ್ ಜತೆ ಸ್ನೇಹವನ್ನು ಬಯಸುತ್ತೇವೆ. ಆದರೆ, ಅಲ್ಲಿಯೂ ನಾವು ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಟೀಕೆಗಳನ್ನು ಪಡೆಯುತ್ತೇವೆ. ಒಬ್ಬ ಮಾಜಿ ಅಧ್ಯಕ್ಷ, ಅವರ ಆಳ್ವಿಕೆಯಲ್ಲಿ ಆರು ಮುಸ್ಲಿಂ ಬಹುಸಂಖ್ಯಾತ ದೇಶಗಳಲ್ಲಿ 26,000 ಕ್ಕೂ ಹೆಚ್ಚು ಬಾಂಬ್ ದಾಳಿ ಮಾಡಲಾಯಿತು. ಜನರು ಅವರ ಆರೋಪಗಳನ್ನು ಹೇಗೆ ನಂಬುತ್ತಾರೆ?” ಎಂದು ಕಿಡಿ ಕಾರಿದರು.
ಗೌರವಾನ್ವಿತ ಪ್ರಧಾನ ಮಂತ್ರಿಗಳು ಸ್ವತಃ ಯುಎಸ್ ನ ಪತ್ರಿಕಾಗೋಷ್ಠಿಯಲ್ಲಿ, ನಮ್ಮ ಸರ್ಕಾರವು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ತತ್ವದ ಮೇಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಜನರು ಈ ಚರ್ಚೆಯಲ್ಲಿ ಸೇರಿಕೊಂಡಾಗ ಮತ್ತು ಒಂದು ರೀತಿಯಲ್ಲಿ ಸಮಸ್ಯೆಗಳಲ್ಲದ ಸಮಸ್ಯೆಗಳನ್ನು ಎತ್ತಿ ತೋರಿಸಿದಾಗಲೂ ಸತ್ಯ ಉಳಿಯುತ್ತದೆ”ಎಂದು ನಿರ್ಮಾಲಾ ಸೀತಾರಾಮನ್ ಹೇಳಿದರು.