Advertisement

ಯಕ್ಷಗಾನದಲ್ಲಿ  ಮುಸ್ಲಿಂ ಸಮುದಾಯ ಅವಹೇಳನ ಆರೋಪ 

11:40 AM Jan 12, 2018 | Team Udayavani |

ಮಂಗಳೂರು: ಯಕ್ಷಗಾನ ಪ್ರದರ್ಶನವೊಂದರಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪಿಸಿ, ಇದಕ್ಕೆ ವಿರೋಧ ವ್ಯಕ್ತಪಡಿಸುವಂತೆ ಮುಸ್ಲಿಂ ಸಂಘಟನೆಗಳಿಗೆ ಅನಾಮ ಧೇಯ ವ್ಯಕ್ತಿಗಳು ಕರೆ ನೀಡುವ ಬರಹಗಳು ಸಾಮಾಜಿಕ ಜಾಲ ತಾಣಗಳಲ್ಲಿ ರವಾನೆಯಾಗುತ್ತಿವೆ.

Advertisement

ಈ ಯಕ್ಷಗಾನ ಪ್ರಸಂಗದ ವಿರುದ್ಧ ಭಾರೀ ವಿರೋಧ ವ್ಯಕ್ತಪಡಿಸು ವಂತೆ ಜಾಲತಾಣಗಳಲ್ಲಿ ಬರಹ ಪ್ರಕಟಿಸ ಲಾಗಿದ್ದು, “ಯಕ್ಷಗಾನ ಪ್ರದರ್ಶನವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ಅಭಿನಯಿಸಿದ ಕಲಾವಿದರು ದಾರಿ ಹೆಣವಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಬೆದರಿಕೆ ಹಾಕಲಾಗಿದೆ. ಆದರೆ  ಹೆಸರನ್ನು ಉಲ್ಲೇಖೀಸಲಾಗಿಲ್ಲ.

ಸಾಲಿಗ್ರಾಮ  ಮೇಳದವರ  ಪ್ರಸಂಗ ಇದಾಗಿದ್ದು, ಇದು ಹಳೆಯ ಪ್ರಸಂಗದ ವಿಡಿಯೋ ತುಣುಕು ಎಂದು ಹೇಳಲಾಗಿದೆ. “ಈ ಯಕ್ಷಗಾನದಲ್ಲಿ ಮುಸ್ಲಿಂ ಸಮುದಾಯ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಅವಮಾನಿಸುವ ರೀತಿಯಲ್ಲಿ ಮಾತನಾಡಲಾಗಿದೆ. ಮುಸ್ಲಿಮರು ಎಲ್ಲಿಂದಲೋ ಬಂದ ವರು ಎಂದು ಉಲ್ಲೇಖೀಸಲಾಗಿದೆ ಎಂದು ಆರೋಪಿಸಲಾಗಿದ್ದು, ಮುಸ್ಲಿಂ ಸಂಘಟನೆಗಳು ಇದನ್ನು ಗಮನಿಸ ಬೇಕು ಹಾಗೂ ಕೇಸು ದಾಖಲಿಸ ಬೇಕು’ ಎಂದು  ಬರೆಯಲಾಗಿದೆ.

ಕಮಿಷನರ್‌ ಹೇಳಿಕೆ: ಇದು ಹಳೆಯ ವಿಡಿಯೋ ಆಗಿದ್ದು, ಈ ರೀತಿ ಕೋಮು ಭಾವನೆ ಕೆರಳಿಸುವ ಸಂದೇಶ ರವಾನೆ ಸರಿಯಲ್ಲ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next