Advertisement

ಹಿಜಬ್‌ ಧರಿಸಿದ್ದ ಮುಸ್ಲಿಂ ಮಹಿಳೆಗೆ ಅವಮಾನ

10:58 AM May 15, 2017 | Team Udayavani |

ನ್ಯೂಯಾರ್ಕ್‌: ಮುಸ್ಲಿಂ ಮಹಿಳೆಯೊಬ್ಬಳು ಹಿಜಬ್‌ ಧರಿಸಿದ್ದಳೆಂಬ ಕಾರಣಕ್ಕೆ ಬ್ಯಾಂಕಿನಿಂದ ಆಕೆಯನ್ನು ಹೊರಗಟ್ಟಿದ ಘಟನೆ ಅಮೆರಿಕದಲ್ಲಿ ಶುಕ್ರವಾರ ನಡೆದಿದೆ. ಬ್ಯಾಂಕ್‌ನಲ್ಲಿ ಅಪಮಾನಕ್ಕೀಡಾದ ಅಮೆರಿಕನ್‌ ಮುಸ್ಲಿಂ ಮಹಿಳೆ ಜಮೀಲಾ ಮಹಮ್ಮದ್‌ ಈ ಕುರಿತು ಫೇಸ್‌ಬುಕ್‌ನಲ್ಲಿ ವೀಡಿಯೋ ಹರಿಬಿಟ್ಟಿದ್ದಾರೆ. 

Advertisement

ವಿಡಿಯೋದಲ್ಲಿ ಜಮೀಲಾ ಹೀಗೆ ಹೇಳಿದ್ದಾರೆ, ‘ವಾಷಿಂಗ್ಟನ್‌ನ ಬ್ಯಾಂಕೊಂದಕ್ಕೆ ನನ್ನ ಕಾರಿನ ಕಂತು ಕಟ್ಟಲು ಹೋಗಿದ್ದಾಗ, ಹಿಜಬ್‌ ತೆಗೆಯದಿದ್ದರೆ ಬ್ಯಾಂಕ್‌ ಒಳಗೆ ಪ್ರವೇಶ ನೀಡುವುದಿಲ್ಲವೆಂದು ಬ್ಯಾಂಕ್‌ ಸಿಬ್ಬಂದಿ ತಾಕೀತು ಮಾಡಿದರು. ಅಲ್ಲದೇ ಬ್ಯಾಂಕ್‌ನಿಂದ ಹೊರಗೆ ದೂಡಿ ನನ್ನನ್ನು ನಿಂದಿಸಿದರು ಎಂದಿದ್ದಾರೆ. ‘ಶುಕ್ರವಾರದಂದು ಮುಸ್ಲಿಮರೆಲ್ಲರೂ ಪ್ರಾರ್ಥನೆ ಮಾಡುತ್ತೇವೆ, ಆ ದಿನ ನಾವು ಕಡ್ಡಾಯವಾಗಿ ಹಿಜಬ್‌ ಧರಿಸುತ್ತೇವೆ. ನಾನೂ ಕೂಡ ಧರಿಸಿದ್ದೆ. ಆದರೆ ಬ್ಯಾಂಕ್‌ನವರು ನನ್ನ ಜೊತೆ ಅಮಾನುಷವಾಗಿ ನಡೆದುಕೊಂಡರು’ ಎಂದಿದ್ದಾರೆ. ಅಲ್ಲದೇ ಬ್ಯಾಂಕ್‌ನಲ್ಲಿ ನಡೆದ ಘಟನೆಯನ್ನು ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಕಡೆಗೆ ಬ್ಯಾಂಕ್‌ ಜಮೀಲಾಗೆ ಕ್ಷಮೆ ಯಾಚಿಸಿದೆ.
 

Advertisement

Udayavani is now on Telegram. Click here to join our channel and stay updated with the latest news.

Next