Advertisement

ಫ್ಲೈಓವರ್‌ ತಳಭಾಗದಲ್ಲಿ ಸಂಗೀತ ಕಛೇರಿ

11:05 AM Mar 30, 2018 | |

ಮಹಾನಗರ: ಫ್ಲೈಓವರ್‌ ಕೆಳಭಾಗ ಎಂದಾಕ್ಷಣ ವಾಹನ ಪಾರ್ಕಿಂಗ್‌, ಗೂಡಂಗಡಿ, ಕಸಕಡ್ಡಿಗಳ ರಾಶಿ ಕಣ್ಣಮುಂದೆ ಬರುತ್ತದೆ. ಆದರೆ ಈ ಫ್ಲೈಓವರ್‌ ಇದಕ್ಕೆ ತದ್ವಿರುದ್ದ. ಇದು ನೋಡಿದಾಕ್ಷಣ ಪಾರ್ಕ್‌ಗಿಂತಲೂ ಸುಂದರವಾಗಿ ಕಾಣುತ್ತದೆ.

Advertisement

ನಗರದ ಹೊರಭಾಗದ ಸುರತ್ಕಲ್‌ ನಲ್ಲಿರುವ ಫ್ಲೈಓವರ್‌ನ್ನು ನಾಗರಿಕ ಸಲಹಾ ಸಮಿತಿಯು ವಿವಿಧ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸುಂದರಗೊಳಿಸಿತ್ತು. ಇದೀಗ ಸಂದರಗೊಂಡಿರುವ ಆ ಜಾಗ ಸದ್ಬಳಕೆಯಾಗಬೇಕು, ಯುವ ಕಲಾವಿದರಿಗೆ ಅವಕಾಶ ದೊರೆಯಬೇಕು ಹಾಗೂ ಪರಿಸರದಲ್ಲಿ ಸಂಗೀತದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ನಾಗರಿಕ ಸಲಹಾ ಸಮಿತಿಯು ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಸಹಯೋಗದಲ್ಲಿ ಉದಯರಾಗ ಎಂಬ ಸಂಗೀತ ಕಾರ್ಯಕ್ರಮವನ್ನು ಎ. 1ರಿಂದ ಫ್ಲೈಓವರ್‌ ಕೆಳಗೆ ಆರಂಭಿಸಲಿದೆ.

ಎ. 1ರಂದು ಬೆಳಗ್ಗೆ 6ರಿಂದ 7ರವರೆಗೆ ಒಂದು ಗಂಟೆ ಅವಧಿಯ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಫ್ಲೈಓವರ್‌ ಕೆಳಭಾಗದಲ್ಲಿ ಆಯೋಜಿಸಲಾಗಿದ್ದು, ಮೊದಲ ಕಾರ್ಯಕ್ರಮವನ್ನು ಸುರತ್ಕಲ್‌ನ ಎಳೆಯ ಕಲಾವಿದರಾದ ಶರಣ್ಯಾ ಹಾಗೂ ಸುಮೇಧಾ ನಡೆಸಿ ಕೊಡಲಿದ್ದಾರೆ. ಇವರಿಗೆ ಧನ್ಯಾ ಶ್ರೀ ಶಬರಾಯ ವಯಲಿನ್‌ ನಲ್ಲಿ ಮತ್ತು ಸುಮುಖ ಕಾರಂತ್‌ ಮೃದಂಗದಲ್ಲಿ ಸಹಕರಿಸಲಿರುವರು.

ಉದ್ಘಾಟನೆ ಬಳಿಕ ತಿಂಗಳಿನ ಮೊದಲ ರವಿವಾರ ಫ್ಲೈಓವರ್‌ ಕೆಳಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಗೀತ ಕಾರ್ಯಕ್ರಮದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳಲಿದ್ದು, ಅವರ ಪ್ರತಿಭೆ ಅನಾವರಣಕ್ಕೆ ಉತ್ತಮ ವೇದಿಕೆ ದೊರೆಯಲಿದೆ.

ಉದಯೋನ್ಮುಖ ಕಲಾವಿದರಿಗೆ ಅವಕಾಶ
ಸುಂದರಗೊಂಡಿರುವ ಫ್ಲೈಓವರ್‌ ಕೆಳಭಾಗದ ಸದ್ಭಳಕೆ ಹಾಗೂ ಉದಯೋನ್ಮುಖ ಕಲಾವಿದರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾಗವನ್ನು ಸುಂದರ ಮಾಡಿದ ಬಳಿಕ ನೆನೆಗುಂದಿಗೆ ಬೀಳಬಾರದು ಎನ್ನುವ ದೃಷ್ಟಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
-ನಿತ್ಯಾನಂದ ರಾವ್‌,
ಕಾರ್ಯಕ್ರಮ ಸಂಯೋಜಕ

Advertisement
Advertisement

Udayavani is now on Telegram. Click here to join our channel and stay updated with the latest news.

Next