Advertisement

ಕೋಟೆ ನಗರಿಗೆ ಸಂಗೀತ ಕಾರಂಜಿ ಮೆರುಗು

03:46 PM Nov 20, 2020 | Suhan S |

ಚಿತ್ರದುರ್ಗ: ಐತಿಹಾಸಿಕ ಜಿಲ್ಲೆ ಚಿತ್ರದುರ್ಗ ನಗರ ಹೊಸ ಮೆರುಗು ಪಡೆಯಲು ಅಣಿಯಾಗಿದೆ. ಹಲವುವರ್ಷಹಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆಗಳ ವಿಸ್ತೀರ್ಣ, ಅಭಿವೃದ್ಧಿ ಒಂದು ಕಡೆಯಾದರೆ, ನಗರಕ್ಕೆ ಹೊಸ ನೋಟ ಸಿಗುವಂತೆ ಮಾಡಲು ಹಲವು ವೃತ್ತಗಳು ಪುನರುಜ್ಜೀವನಗೊಳ್ಳುತ್ತಿವೆ.

Advertisement

ವಿವಿಧ ಅನುದಾನಗಳಲ್ಲಿ ನಗರದ ಪ್ರಮುಖ ರಸ್ತೆಗಳು ವಿಸ್ತೀರ್ಣಗೊಂದು ಇಂದಿನ ಜನಸಂಖ್ಯೆಗೆ ಅನುಗುಣವಾಗಿ ನಿರ್ಮಾಣವಾಗುತ್ತಿರುವುದು ನಗರ ಹಾಗೂ ಜಿಲ್ಲೆಯ ಜನರಿಗೆ ಸಂತಸದ ಸಂಗತಿಯಾಗಿದೆ. ಇದರೊಟ್ಟಿಗೆ ಮಹಾ ಪುರುಷರ ಹೆಸರಿನವೃತ್ತಗಳಿಗಳನ್ನು ಅಲಂಕರಿಸುವ ಮೂಲಕ ನಗರಕ್ಕೆಹೊಸ ಮೆರುಗು ನೀಡಲು ನಗರಸಭೆ ಮುಂದಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲೇ ಇರುವ ಒನಕೆ ಓಬವ್ವ ವೃತ್ತವನ್ನು ವಿಶೇಷವಾಗಿ ನಿರ್ಮಿಸುತ್ತಿದ್ದು, ಆಕರ್ಷಕವಾಗಿ ಕಾಣುವಂತೆ ನೋಡಿಕೊಳ್ಳಲಾಗುತ್ತಿದೆ. 22 ಲಕ್ಷ ರೂ. ವೆಚ್ಚದಲ್ಲಿ ಸಂಗೀತ ಕಾರಂಜಿನಿರ್ಮಿಸಲಾಗುತ್ತಿದೆ. ವೃತ್ತದ ಪಕ್ಕದಲ್ಲೇ ಇರುವ ಉದ್ಯಾನವನ ಕೂಡಾ ಅಭಿವೃದ್ಧಿ ಮಾಡಿ ಹೊಸ ಲುಕ್‌ ನೀಡಲು ತಯಾರಿ ನಡೆದಿದೆ.

ಇನ್ನೂ ಚಿತ್ರದುರ್ಗ ಅಂದಾಕ್ಷಣ ಥಟ್ಟನೆ ನೆನಪಾಗುವ ರಾಜವೀರ ಮದಕರಿ ನಾಯಕರ ಹೆಸರಿಗೆ ತಕ್ಕಂತೆ ಹಳೆಯ ನಗರಸಭೆ ಕಚೇರಿ ಬಳಿ ಬಿ.ಡಿ. ರಸ್ತೆಯಲ್ಲಿ ಮದಕರಿ ನಾಯಕರ ದೊಡ್ಡ ಪ್ರತಿಮೆ ಇದ್ದು, ಇಲ್ಲಿಯೂ ವೃತ್ತವನ್ನು ವಿಸ್ತರಿಸಿ ಕಾರಂಜಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ 27 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ. ಶಿವಮೊಗ್ಗ ಅಥವಾ ಹೊಳಲ್ಕೆರೆ ಭಾಗದಿಂದ  ಸಿಗುವ ಕನಕದಾಸರ ಸುಂದರ ಪ್ರತಿಮೆ ಇರುವ ಕನಕ ವೃತ್ತದಲ್ಲಿ ಕೂಡಾ 4 ಲಕ್ಷ ರೂ. ವೆಚ್ಚದಲ್ಲಿ ಕಾರಂಜಿ ನಿರ್ಮಾಣವಾಗಲಿದೆ.

ಇನ್ನೂ ನಗರ ಪೊಲೀಸ್‌ ಠಾಣೆ ಬಳಿ ಇರುವ ಅಂಬೇಡ್ಕರ್‌ ವೃತ್ತದ ಆವರಣ ಸಾಕಷ್ಟು ಕಿರಿದಾಗಿದ್ದು, ಇಲ್ಲಿಯೂ ಕೂಡಾ ವೃತ್ತವನ್ನು ವಿಸ್ತರಿಸಿ ಹೊಸದಾಗಿ ಗ್ರಿಲ್‌ ಅಳವಡಿಸಲು 5 ಲಕ್ಷ ರೂ. ಮೀಸಲಿಡಲಾಗಿದೆ ಎಂದು ನಗರಸಭೆ ಇಂಜಿನಿಯರ್‌ ಮನೋಹರ್‌ ತಿಳಿಸಿದ್ದಾರೆ.

Advertisement

ಈಗಾಗಲೇ ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ಬಿ.ಡಿ. ರಸ್ತೆ ಅಗಲೀಕರಣ ಹಾಗೂಅಭಿವೃದ್ಧಿ ನಡೆಯುತ್ತಿದ್ದು, ಹೊಳಲ್ಕೆರೆ ರಸ್ತೆಯಲ್ಲಿ ಕೂಡಾ ಕಾಮಗಾರಿ ಆಗಿದೆ. ತುರುವನೂರು ರಸ್ತೆಯ ಅಗಲೀಕರಣ ಕಾಮಗಾರಿ ಕೂಡಾ ಭರದಿಂದ ಸಾಗುತ್ತಿದೆ. ಎಲ್ಲ ಕಾಮಗಾರಿಗಳು ಆದಷ್ಟು ಬೇಗ ಮುಗಿದರೆ ಐತಿಹಾಸಿಕ ಜಿಲ್ಲೆ ಚಿತ್ರದುರ್ಗಕ್ಕೆ ಹೊಸ ರೂಪ ಸಿಗುವುದರಲ್ಲಿ ಅನುಮಾನವಿಲ್ಲ

ಚಿತ್ರದುರ್ಗದ ಇತಿಹಾಸದಲ್ಲಿ ಛಾಪು ಮೂಡಿಸಿರುವ ವೀರ ಮದಕರಿ ನಾಯಕರು, ವೀರ ವನಿತೆ ಒನಕೆ ಓಬವ್ವ, ಸಂತ ಕನಕದಾಸರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತಗಳನ್ನುವಿಶೇಷವಾಗಿ ಕಾರಂಜಿಗಳ ಮೂಲಕಅಲಂಕರಿಸುವ ಮೂಲಕ ಮಹಾತ್ಮರಿಗೆ ಗೌರವ ಸಲ್ಲಿಸುವುದು ಹಾಗೂ ನಗರಕ್ಕೆ ಹೊಸ ರೂಪ ಕೊಡುವ ಉದ್ದೇಶವಿದೆ. – ಜಿ.ಎಚ್‌. ತಿಪ್ಪಾರೆಡ್ಡಿ, ಚಿತ್ರದುರ್ಗ.

 

-ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next