Advertisement

UV Fusion: ಸಂಗೀತ- ಮಾನವ ಭಾವನೆ ಮೀರುವ ವಿಷಯ

04:10 PM Nov 20, 2023 | Team Udayavani |

ಸಂಗೀತವು ನಮ್ಮ ಜಗತ್ತಿನ ಸುಂದರ ಕಲೆಗಳಲ್ಲಿ ಒಂದು. ಇಂದು ನಾವು ಸಂಗೀತವನ್ನು ಎಲ್ಲಾ ಕಡೆಗಳಲ್ಲೂ ಕಾಣುತ್ತೇವೆ. ಅಷ್ಟರಮಟ್ಟಿಗೆ ಬೆಳೆದು ನಿಂತಿದೆ. ಅಷ್ಟೇ ಅಲ್ಲದೆ ಇಂದು ನಾನಾ ರೀತಿಯ ಸಂಗೀತ ಹುಟ್ಟಿಕೊಂಡಿದೆ. ಸಂಗೀತವನ್ನು ಕೇಳದೆ ಇರುವವರು ಇಂದು ಎಲ್ಲೂ ಕಾಣ ಸಿಗುವುದಿಲ್ಲ. ಮಾನವನ ಇತಿಹಾಸದುದ್ದಕ್ಕೂ ಸಂಗೀತವು ಯಾವಾಗಲು ಪ್ರಮುಖ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಂಶವಾಗಿದೆ.

Advertisement

ಸಂಗೀತವು ಎಲ್ಲ ಮಾನವ ಭಾವನೆಗಳನ್ನು ಮೀರುವ ಒಂದು ವಿಷಯವಾಗಿದೆ. ವ್ಯಕ್ತಿಯ ಮನಸ್ಥಿತಿ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಸಂಗೀತದ ಚಿಕಿತ್ಸೆಯನ್ನು ಅನಾದಿ ಕಾಲದಿಂದಲೂ ರೋಗಿಗಳನ್ನು ಗುಣಪಡಿಸಲು ಬಳಸಲಾಗುತ್ತಿತ್ತು. ಜನರ ತಮ್ಮ ದೈನಂದಿನ ಜೀವನದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಮಾಡುತ್ತದೆ. ಇದು ವ್ಯಕ್ತಿಯ ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಇತರರೊಂದಿಗೆ ಉತ್ತಮ ಸಂವಹನ ನಡೆಸಲು ಸಹಾಯಕಾರಿಯಾಗಿದೆ. ಸಂಗೀತವು ಗಾಯಕರ ಒಂದು ಭಾಗವಾಗಿದೆ ಇದರಿಂದ ಅವರು ಸಂತೋಷವನ್ನು ಪಡುತ್ತಾರೆ. ಸಂಗೀತವನ್ನು ಕೇಳುವಾಗ ಕೆಲವೊಮ್ಮೆ ನಮ್ಮನ್ನು ನಾವೇ ಮರೆಯುತ್ತೇವೆ.

ದೈಹಿಕವಾಗಿ ದಣಿದ ದೇಹಕ್ಕೆ ದೇಹವನ್ನು ಸುಧಾರಿಸಿಕೊಳ್ಳಲು ಸಂಗೀತವು ಉತ್ತಮವಾಗಿದೆ. ನಮ್ಮ ಸುತ್ತಮುತ್ತಲಿನ ಪರಿಸರ ಮತ್ತು ಜನರ ಮೇಲೆ ಹೊಂದಿರಬಹುದಾದ ಕೆಟ್ಟ ಭಾವನೆಯನ್ನು ಸಂಗೀತವು ಬದಲಾಯಿಸಬಹುದು.

ಪುರಾಣದಲ್ಲಿ ಸಂಗೀತವು ಆತ್ಮಕ್ಕೆ ಮುಲಾಮು ಎಂದು ಸೂಚಿಸುವ ದಂತ ಕಥೆಗಳಿವೆ. ರಾಜ ಸೌಲನ ದಬ್ಟಾಳಿಕೆಗಳ ವಿರುದ್ಧ ತನ್ನ ಹತಾಶೆಯನ್ನು ನಿವಾರಿಸಲು ಡೇವಿಡ್‌ ಹೇಗೆ ವೀಣೆಯನ್ನು ನುಡಿಸಿದನು ಎಂಬುದನ್ನು ನಾವು ಇತಿಹಾಸದಲ್ಲಿ ತಿಳಿಯಬಹುದಾಗಿದೆ.

ಇತಿಹಾಸದ ಶ್ರೇಷ್ಠ ಚಿಂತಕರಲ್ಲಿ ಒಬ್ಬರಾದ ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲ್‌ ಕೂಡ ಸಂಗೀತವನ್ನು “ಆತ್ಮದ ಔಷಧ” ಎಂದು ಉಲ್ಲೇಖೀಸಿದ್ದಾರೆ. ಆಧುನಿಕ ಸಂಗೀತ ಚಿಕಿತ್ಸೆಯು 20ನೇ ಶತಮಾನದ ಆವಿಷ್ಕಾರ ಆಗಿರಬಹುದು ಆದರೆ ಗ್ರೀಕ್‌ ತತ್ವಜ್ಞಾನಿಗಳು ಸಂಗೀತವನ್ನು ಚಿಕಿತ್ಸಕವಾಗಿ ಬಳಸುತ್ತಿದ್ದರು. ರೋಗಿಗಳಿಗೆ ಶಾಂತವಾದ ಕೊಳಲನ್ನು ನುಡಿಸಿ ಚಿಕಿತ್ಸೆ ನೀಡುತ್ತಿದ್ದರು.

Advertisement

ಅಸ್ತಮಾ, ಮೆದುಳಿನ ಅಸ್ವಸ್ಥೆಗಳಂತಹ ಪರಿಸ್ಥಿತಿಯಲ್ಲಿ ವೈದ್ಯರು ಸಂಗೀತದ ಚಿಕಿತ್ಸೆಯನ್ನು ಬಳಸುತ್ತಾರೆ. ಸಂಗೀತದ ಮೂಲಕ ರೋಗಿಯ ಸಮಸ್ಯೆಯನ್ನು ತಿಳಿದುಕೊಂಡು ಗುಣಪಡಿಸಬಹುದಾಗಿದೆ. ಮಾನಸಿಕ ಖನ್ನತೆಗೆ ಒಳಗಾದವರಿಗೆ ಖನ್ನತೆಯಿಂದ ಹೊರಬರಲು ಸಂಗೀತವು ಸಹಾಯ ಮಾಡುತ್ತದೆ.

ಸಂಗೀತ ದೇಹದ ಇಂದ್ರಿಯವನ್ನು ಉತ್ತೇಜಿಸುತ್ತದೆ ಇದು ನಮ್ಮ ಉಸಿರಾಟ, ಹೃದಯಬಡಿತ, ದೈಹಿಕ ಕಾರ್ಯದ ಮೇಲೆ ಪ್ರಭಾವ ಬೀರುತ್ತದೆ. ಪಿಎಸ್‌ಟಿಡಿ, ಆಘಾತ, ಅನೇಕ ಮಾನಸಿಕ ರೋಗಗಳಿಗೆ ಸಂಗೀತ ಚಿಕಿತ್ಸೆಯು ಪ್ರಯೋಜನ ಕಾರಿಯಾಗಿದೆ ಎಂದು ಸಂಶೋಧನೆ ಹೇಳುತ್ತದೆ.

-ಪಲ್ಲವಿ ಹೆಗಡೆ

ಬಪ್ಪನಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next