Advertisement

ಸಂಗೀತಕ್ಕಿದೆ ಖನ್ನತೆ ದೂರ ಮಾಡುವ ಶಕ್ತಿ: ಉಮೇಶ್‌

01:40 PM Nov 02, 2021 | Suhan S |

ಶಿವಮೊಗ್ಗ: ಸಂಗೀತದಿಂದ ಖನ್ನತೆ ದೂರವಾಗಿ ಮನಸ್ಸು ಸದಾ ಉತ್ಸಾಹದಿಂದ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ ಹೇಳಿದರು.

Advertisement

ನಗರದ ಮಥುರಾ ಪ್ಯಾರಾಡೈಸ್‌ನಲ್ಲಿ “ಭಾವಗಾನ’ ಸಂಸ್ಥೆಯ ಐದನೇ ವಾರ್ಷಿಕೋತ್ಸವ ಹಾಗೂ ಭಾವಗೀತೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪಾಶ್ಚಿಮಾತ್ಯ ಸಂಗೀತದ ಅಬ್ಬರದಿಂದ ಮೂಲ ಸಂಗೀತಕ್ಕೆ ಧಕ್ಕೆಯಾಗಿದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಗೀತದ ಅಭ್ಯಾಸ ಮಾಡಿಸಬೇಕು. ಸಂಗೀತ ಜ್ಞಾನದ ಜತೆಯಲ್ಲಿ ಮಕ್ಕಳು ಉತ್ತಮ ಗಾಯಕರಾಗಿ ರೂಪುಗೊಳ್ಳುತ್ತಾರೆ ಎಂದರು.

ಸಂಗೀತ ಕಲಿಕೆಯಿಂದ ಉತ್ತಮ ಸಂಸ್ಕಾರಯುತ ಮೌಲ್ಯಗಳನ್ನು ಕಲಿಯಲು ಸಾಧ್ಯವಿದೆ. ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಮಕ್ಕಳಿಗೆ ಸಂಗೀತದ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಮೂಡಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ಭಾವಗಾನ ಸಂಸ್ಥೆಯ ವಾಸುರವರ ಸಂಗೀತಸೇವೆ ಅಪಾರ. ಸಾಹಿತ್ಯ ಪರಿಷತ್‌ಗೆ ಅವರ ನಿಸ್ವಾರ್ಥ ಸೇವೆಅವೀಸ್ಮರಣೀಯ. ಅವರ ಸುಗಮ ಸಂಗೀತ ಗರಡಿಯಲ್ಲಿ ನೂರಾರುಜನ ಉತ್ತಮ ಗಾಯಕರಾಗಿ ಹೊರಹೊಮ್ಮಿದ್ದಾರೆ. ಅವರ ಕುಟುಂಬ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದೆ ಎಂದರು.

ಭದ್ರಾವತಿ ವಾಸು ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಎಲ್ಲರ ಸಹಕಾರ ಮುಖ್ಯ ಕಾರಣ. ಇನ್ನೂ ಹೆಚ್ಚಿನವಿದ್ಯಾರ್ಥಿಗಳನ್ನು ಸಂಗೀತ ಕ್ಷೇತ್ರಕ್ಕೆ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ನಟಸಾರ್ವಭೌಮ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಗೀತ ಸ್ಪರ್ಧೆಯಲ್ಲಿ 25ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಗಾಯಕ, ನಿರೂಪಕ ಜಿ.ವಿಜಯ್‌ಕುಮಾರ್‌, ಭುಜಂಗಪ್ಪ, ವಿಜಯಾ ಸತೀಶ್‌,ಭಾಗ್ಯ, ನಾಗರಾಜ್‌, ಗಂಗಾಧರ್‌, ಆದ್ಯ ಹಾಗೂ ಪದಾಧಿ ಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next