Advertisement

ವಿನೂತನ ಪರಿಕಲ್ಪನೆ ಮನೆ –ಮನದಲಿ ಸಂಗೀತ

06:03 PM Jul 25, 2019 | mahesh |

ಖ್ಯಾತ ಹಿಂದೂಸ್ಥಾನಿ ಶೈಲಿಯ ಗಾಯಕ ವಿ| ಶಂಕರ್‌ ಶಾನುಭಾಗ್‌ ಕೆಲ ಸಮಯದ ಹಿಂದೆ ಸೀಮಿತ ಸಂಗೀತಾಸಕ್ತರಿಗೆ ತಮ್ಮ ಸಂಗೀತದ ಗುರುಕುಲದ ಮುಖಾಂತರ ಉಚಿತ ಸಂಗೀತ ಶಿಕ್ಷಣವನ್ನು ನೀಡುವ ಪರಿಕಲ್ಪನೆ ಆರಂಭಿಸಿ ಸಫ‌ಲರಾಗಿದ್ದಾರೆ. ಇದೀಗ ವಿನೂತನ “ಮನೆ-ಮನದಲಿ ಸಂಗೀತ’ ಎನ್ನುವ ಪರಿಕಲ್ಪನೆ ಆರಂಭಿಸಿದ್ದಾರೆ.ಹಿಂದಿನ ಕಾಲದಲ್ಲಿ ಸಂಜೆಯ ಹೊತ್ತಿನಲ್ಲಿ ಭಜನೆ/ಸಂಕೀರ್ತನೆ ಸಾಮಾನ್ಯ ವಾಗಿತ್ತು. ಆದರೆ ಇಂದು ಕಾಲ ಬದಲಾಗಿದೆ. ಸಾಂಸ್ಕೃತಿಕ ಅಧಃಪತನ, ಪಾಶ್ಚಾéತೀಕರಣ, ಆಧುನಿಕತೆ ಇನ್ನಿ ತರ ಕಾರಣಗಳಿಂದ ಭಜನಾ ಸಂಪ್ರದಾಯ ಮರೆಯಾಗುತ್ತಿದೆ. ಈ ಸತ್‌ ಸಂಪ್ರದಾಯದ ಪುನರುತ್ಥಾನವೇ ಈ ಪರಿಕಲ್ಪನೆಯ ಮೂಲೋದ್ದೇಶ.

Advertisement

“ಮನೆ-ಮನೆಯಲಿ ಭಜನೆ, ಮನ-ಮನದಲಿ ಭಜನೆ’ ಎಂಬುದು ಈ ಸಂಗೀತ ಅಭಿಯಾನದ ಘೋಷಾ ವಾಕ್ಯ. ಈ ಅಭಿಯಾನದಡಿ ಶಂಕರ್‌ ಶಾನ್‌ಭಾಗ್‌ ಸಂಗೀತಾಸಕ್ತರ ಕೋರಿಕೆ ಮೇರೆಗೆ ಮನೆಗೆ ಬಂದು ಸಂಗೀತಾರಾಧನೆಗೈಯ್ಯಲಿದ್ದಾರೆ. ದಾಸ ಸಾಹಿತ್ಯ, ಮರಾಠಿ ಅಭಂಗ್‌, ಭಕ್ತಿಗೀತೆ, ವಚನ ಇವೆಲ್ಲವುಗಳು ಈ ಆರಾಧನೆಯಲ್ಲಿ ಸೇರಿಕೊಂಡಿವೆ. ನವಕಲಾಕಾರರಿಗೂ ಇಲ್ಲಿ ಅವಕಾಶವಿದೆ.

ಈ ಅಭಿಯಾನ ಈಚೆಗೆ ಆರಂಭಿಸಿದ್ದು, ಪ್ರತಿ ವಾರಾಂತ್ಯದಲ್ಲಿ ಸಂಜೆ ಸಂಗೀತ ಸೇವೆ ನಡೆಯಲಿದೆ. ವೈಶಿಷ್ಟ್ಯಪೂರ್ಣವಾಗಿ ಮತ್ತು ವೈವಿಧ್ಯಮಯವಾಗಿ ಮೂಡಿಬರುತ್ತಿದೆ.

ಸಂದೀಪ್‌ ನಾಯಕ್‌ ಸುಜೀರ್‌

Advertisement

Udayavani is now on Telegram. Click here to join our channel and stay updated with the latest news.

Next