Advertisement
ಸಂಗೀತಕ್ಕೆ ಪ್ಲಾಟ್‌ಫಾರ್ಮ್ ಬೇಕು. ಅಲ್ಲಿ ಹಾಡಬೇಕು. ಜನ ಅಲ್ಲಿಗೆ ಬಂದು ಕೇಳಬೇಕು, ಚಪ್ಪಾಳೆ ತಟ್ಟಬೇಕು- ಹಾಡೋರಿಗೆ ಹೀಗೆಲ್ಲಾ ಕನಸಿರುತ್ತದೆ. ಇದನ್ನು ಉಲ್ಟಾ ಮಾಡಿದವರು ಗಾಯಕ ವಾಸು ದೀಕ್ಷಿತ್. ಇವರೇ ಜನರ ಮಧ್ಯೆ ನಿಂತು, “ರಾಗೀ ತಂದಿರಾ ಭಿಕ್ಷಕೆ ರಾಗೀ ತಂದೀರಾ’ ಅಂತ ಹಾಡಿ ನಿಬ್ಬೆರಗು ಮೂಡಿಸಿದರು. ಆರಂಭದಲ್ಲಿ “ಇದೇನಪ್ಪಾ, ಹೀಗೂ ಉಂಟೇ ?’ ಅಂತ ಅನ್ನೋ ಹೊತ್ತಿಗೆ ವಾಸು ಎಲ್ಲಾ ದಿಕ್ಕನ್ನು ತನ್ನ ಕಡೆಗೆ ಸೆಳೆದುಕೊಂಡರು.
Related Articles
Advertisement
ವಾಸು ಮೇನ್‌ಸ್ಟಿಮ್ ಸಂಗೀತದಿಂದ ದೂರ. ಸಾಮಾನ್ಯವಾಗಿ ಇಂಥ ಹಾಡುಗಳನ್ನು ಕೇಳ್ಳೋದು ಕಡಿಮೆ. ಹೀಗಾಗಿ ಇವರ ಮನೆಯ ಟಿವಿಯಲ್ಲಿ ಯಾವುದೇ ಚಿತ್ರಸಂಗೀತದ ಹಾಡುಗಳನ್ನು ಕೇಳ್ಳೋದಿಲ್ಲ. ನಾನು ಮೇನ್‌ಸ್ಟಿàಮ್‌ನಿಂದ ದೂರ ನಿಂತಿರುವುದು ಕೂಡ ನನ್ನ ಹಾಡಿನ ಭಿನ್ನ ಶೈಲಿಗೆ ಕಾರಣ ಇರಬಹುದು. ನಾನು ಪ್ಲೇಬ್ಯಾಕ್ ಸಿಂಗರ್ ಅಲ್ಲ. ನನ್ನ ಹಾಡಿಗೆ ನಾನೇ ಟ್ಯೂನ್ ಮಾಡಿ, ನಾನೇ ಹಾಡಬೇಕು. ಆಗ ನನ್ನ ಎಕ್ಸ್‌ಪ್ರೆಷನ್ ಚೆನ್ನಾಗಿರುತ್ತದೆ.
ಬೇರೆಯವರ ಸಂಗೀತಕ್ಕೆ ನಾನು ಹಾಡುವುದು ತಕ್ಷಣಕ್ಕೆ ಆಗೋಲ್ಲ. ಸಂಗೀತ ಅನ್ನೋದು ಅಂತರಂಗದ ಕಾರ್ಖಾನೆಯಿಂದ ಬರಬೇಕು ಅಲ್ವೇ? ಅಂತಾರೆ ವಾಸು. ಎಲ್ಲರದೂ ಒಂದು ದಾರಿ, ನಿಮ್ಮದು ಇನ್ನೊಂದು ದಾರಿ. ಈ ದಾರಿಯಲ್ಲಿ ನಡೆಯೋದು ಕಷ್ಟವಾಗೋಲ್ವೇ? ಎಂದು ಕೇಳಿದ್ದಕ್ಕೆ- “ಕಳೆದ ಹತ್ತು ವರ್ಷದಿಂದ ಬ್ಯಾಂಡ್ ನಂಬಿ ಬದುಕ್ತಿದ್ದೇನೆ.
ಜನಕ್ಕೆ ಈಗ ನನ್ನ ಹಾಡು, ಅದರ ಮಾಧುರ್ಯ ಎರಡೂ ಅರ್ಥವಾಗಿದೆ. ಎಲ್ಲ ಕಡೆ ಕರೆಯುತ್ತಿದ್ದಾರೆ. ಆದರೆ ಎಂದೂ ಸಂಗೀತ ನನ್ನನ್ನು ಉಪವಾಸ ಕೆಡವಿಲ್ಲ. ನನಗೆ ರಾತ್ರೋರಾತ್ರಿ ಹೆಸರು ಗಳಿಸಬೇಕು ಅನ್ನೋ ನಿರೀಕ್ಷೆ ಕೂಡ ಇಲ್ಲ. ಸಂಗೀತ ಹಾಡಬೇಕು, ಅದೂ ನನ್ನ ಶೈಲಿಯಲ್ಲಿ ಅನ್ನೋದಷ್ಟೇ ನನ್ನ ಗುರಿ’ ಎನ್ನುತ್ತಾರೆ ವಾಸು.