ಕಲಬುರಗಿ: ಇಂದಿನ ಒತ್ತಡ ಮತ್ತು ಕಲುಷಿತ ವಾತಾವರಣದ ಜೀವನದಲ್ಲಿ ಸಂಗೀತ ಮನಸ್ಸಿನ ಆರೋಗ್ಯವನ್ನು ಕಾಪಾಡುತ್ತದೆ. ಆದ್ದರಿಂದ ಮನಸ್ಸಿನ ಆರೋಗ್ಯಕ್ಕೆ ಸಂಗೀತವೇ ಮದ್ದು ಸತ್ಯಂ ಕಾಲೇಜ್ ಪ್ರಾಚಾರ್ಯ ಬಿ.ಎಚ್. ನೀರಗುಡಿ ವ್ಯಾಖ್ಯಾನಿಸಿದರು.
ನಗರದ ಅನ್ನಪೂರ್ಣ ಕ್ರಾಸ್ ಬಳಿ ಇರುವ ಕಲಾ ಮಂಡಳದಲ್ಲಿ ಭಾನುವಾರ ಸಂಜೆ ನಡೆದ ಕಲಾ ಸೌರಭ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಪ್ರಶಸ್ತಿ ಪ್ರಧಾನ ಮತ್ತು ಸಂಗೀತ ವಚನೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಗೀತ ಕೇಳಬೇಕು ಎಂದರೆ, ದಿನಪೂರ್ತಿ ಫೇಸಬುಕ್, ವಾಟ್ಸಾಫ್‌ಗಳಲ್ಲಿ ರುವ ಸಂದೇಶಗಳನ್ನು ಮತ್ತು ಇತರೆ ವಿಡಿಯೋಗಳನ್ನು ಕೇಳುವುದು ಅಲ್ಲ. ಅವುಗಳಿಂದ ಮನೋವ್ಯಾದಿ ಶುರುವಾಗುತ್ತದೆ. ಆದ್ದರಿಂದ ಅತ್ಯಂತ ಸುಶ್ರಾವ್ಯವಾಗಿ ಹಾಡುವಂತಹ ಕಲಾವಿದರ ಕಂಠದ ಹಾಡುಗಳನ್ನು, ಸಂಗೀತವನ್ನು ಕೇಳಬೇಕು ಎಂದು ಕಿವಿಮಾತು ಹೇಳಿದರು.
ಆತಿಥಿ ಬಾಬುರಾವ್ ಕೊಬಾಳ ಮಾತನಾಡಿ, ಈ ಕಲಾ ಸೌರಭ ಪ್ರತಿಷ್ಠಾಣವು ಕಳೆದ 12 ವರ್ಷಗಳಿಂದ ಯಾವುದೇ ರೀತಿಯ ಅಡೆತಡೆ ಇಲ್ಲದೆ ಕಾರ್ಯ ನಿರ್ವಹಿಸುತ್ತ ಬಂದಿರುವುದು ಹೆಮ್ಮೆಯ ವಿಷಯ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಕೂಡ ಸಂತೋಷದ ಸಂಗತಿ ಎಂದು ಹೇಳಿದರು.
ಕಲಬುರಗಿಯ ಬ್ರಹ್ಮಪೂರ ವಿಶ್ವಕರ್ಮ ಏಕದಂಡಗಿಮಠದ ಸುರೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಾಚನ ನೀಡಿದರು. ಪತ್ರಿಕೋದ್ಯಮ ಮತ್ತು ಸಾಹಿತ್ಯ ಸಾಮಾಜಿಕ ಕ್ಷೇತ್ರ ಶರಣಗೌಡ ಪಾಟೀಲ ಪಾಳಾ, ಶಿಲ್ಪಿ ಕಲಾವಿದರಾದ ಎಂ.ನಟರಾಜ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಪ್ರತಿಭಾ ಎಮ್. ಹುಲಿ ಪ್ರಾರ್ಥನಾ ಗೀತೆ ಹಾಡಿದರು. ಅಣ್ಣರಾಯ ಮತ್ತಿಮೂಡ, ಪ್ರಶಾಂತ ಗೋಲ್ಡ್ ಸ್ಮಿತ್, ಪ್ರಶಾಂತ ಕಂಬಾರ, ನಾಗೇಶ್ರೀ ಕೋಣೆ, ಲವಕುಶ ಪಾಳಾ ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ಶಿವುಕುಮಾರ್ ಬಾಳಿ, ಸುಭಾಷ ಚಂದ್ರ ಹೊಟ್ಟೆ,ವೀರಣ್ಣ ಕಂಬಾರ ಮತ್ತಿತರರು ಉಪಸ್ಥಿತರಿದ್ದರು. ಪ್ರಾಣೇಶ ವಿಶ್ವಕರ್ಮ ನಿರೂಪಿಸಿ, ವಂದಿಸಿದರು.