Advertisement
ಈಗಾಗಲೇ ಸಮ್ಮೇಳನದ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಖ್ಯಾತ ಸಂಗೀತ ಕಲಾವಿದರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ. ಸಂಗೀತ ಆಲಿಕೆಗಾಗಿ 5 ಸಾವಿರ ಕಲಾಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ ಸಮ್ಮೇಳನ ಸ್ವಾಗತ ಸಮಿತಿ ಅದಕ್ಕಾಗಿ ಸಿದ್ಧತೆ ಮಾಡಿಕೊಂಡಿದೆ.
Related Articles
ಪ್ರಭು ಸಂಸ್ಥಾನದ ಭಕ್ತರು ಹಾಗೂ ಎಲ್ಲ ಸಂಗೀತರಾಸಕ್ತರಿಗೂ ಖುಷಿ ನೀಡಿದೆ.
Advertisement
ಸರ್ವ ಕಲೆಗಳನ್ನು ಕರಗತವಾಗಿಸಿಕೊಂಡಿರುವ ಡಾ| ಜ್ಞಾನರಾಜ ಮಾಣಿಕಪ್ರಭುಗಳು, ಮಾಣಿಕಪ್ರಭು ಸಂಸ್ಥಾನದ ಹಿಂದಿನ ಪೀಠಾಧಿಪತಿ ಸಿದ್ಧರಾಜ ಮಹಾರಾಜ ಹಾಗೂ ಮಾತೆ ಮೀರಾಬಾಯಿ ಅವರ ಹಿರಿಯ ಪುತ್ರರಾಗಿದ್ದಾರೆ. 1958ರ ಡಿಸೆಂಬರ್ 3ರಂದು ಜನನ. ಶ್ರೀಗಳ ಶಿಕ್ಷಣ ಗ್ವಾಲಿಯರ್ನಲ್ಲೇಪೂರ್ಣಗೊಂಡಿದೆ. 1974-75ನೇ ಸಾಲಿನಲ್ಲಿ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಚಿನ್ನದ ಪದಕ ವಿಜೇತರಾಗಿದ್ದಾರೆ. ಪದಕವನ್ನು ಅಂದಿನ ರಾಷ್ಟ್ರಪತಿ ಅವರು ಶ್ರೀಗಳಿಗೆ ಪ್ರದಾನ ಮಾಡಿದ್ದಾರೆ. ಮುಂದೆ ಹಿಂದಿ ತತ್ವಜ್ಞಾನದಲ್ಲಿ ಸ್ನಾತ್ತಕೋತ್ತರ ಪದವಿ ಪೂರೈಸಿರುವ ಶ್ರೀಗಳು ಅತ್ತುತ್ತಮ ಪ್ರವಚನಕಾರರೂ ಹೌದು. ಭಜನೆಯನ್ನು ಅತ್ಯಾಕರ್ಷಕವಾಗಿ ಹಾಡುತ್ತಾರೆ. ತಂದೆ ಸಿದ್ಧರಾಜ ಮಹಾರಾಜರು 2009ರಲ್ಲಿ ಸಂಜೀವಿನಿ ಸಮಾಧಿ ಯಲ್ಲಿ ಐಕ್ಯರಾದ ಬಳಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಸ್ಥಾನದ 6ನೇ ಪೀಠಾ ಧಿಪತಿಯನ್ನಾಗಿ ನೇಮಿಸಿ ಜವಾಬ್ದಾರಿ ವಹಿಸಿಕೊಡಲಾಗಿದೆ. ಸಂಗೀತ ಕಲಾಸಕ್ತರ ಮೆಕ್ಕಾ: ಶತಮಾನದಿಂದ ನಡೆದುಕೊಂಡು ಬರುತ್ತಿರುವ ದತ್ತಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತ ಸಂಗೀತ ಕಲಾವಿದರನ್ನು ಆಹ್ವಾನಿಸಿ, ಸಂಗೀತ ರಸಸ್ವಾದ ಉಣಬಿಡುವ ಪರಂಪರೆ ಹೊಂದಿರುವ ಈ ಸಂಸ್ಥಾನ ಸಂಗೀತ ಕಲಾವಿದರ ಪಾಲಿಗೆ ಮೆಕ್ಕಾದಷ್ಟೇ ಪವಿತ್ರ ಸ್ಥಾನವಾಗಿದೆ. ಪ್ರತಿಯೊಬ್ಬ ಸಂಗೀತ ಕಲಾವಿದ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪ್ರಭು ಸಂಸ್ಥಾನದಲ್ಲಿ ಸಂಗೀತ ಸೇವೆ ಸಲ್ಲಿಸಿದರೇ ಜೀವನ ಸಾರ್ಥಕವಾಗುತ್ತದೆ ಎಂಬ ನಂಬಿಕೆ ಹೊಂದಿರುವುದು ಪ್ರಭು ಸಂಸ್ಥಾನ ಸಂಗೀತ-ಸಾಹಿತ್ಯಕ್ಕೆ ನೀಡಿದ ಮಹತ್ವಕ್ಕೆ ಸಾಕ್ಷಿಯಾಗಿ¨ ಶಶಿಕಾಂತ ಕೆ.ಭಗೋಜಿ