Advertisement

ಸಂಗೀತಕ್ಕಿದೆ ಜೀವನ ಬದಲಾಯಿಸುವ ಶಕ್ತಿ

03:04 PM Nov 08, 2021 | Shwetha M |

ಮೋರಟಗಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಹಾವಳಿಯಿಂದ ಗ್ರಾಮೀಣ ಭಾಗದಲ್ಲಿಯೂ ಸುಗಮ ಸಂಗೀತ, ಸಂಸಾರಿಕ ನಾಟಕಗಳು ಆಟಗಳು ಕಣ್ಮರೆಯಾಗಿವೆ ಎಂದು ತಾಪಂ ಮಾಜಿ ಸದಸ್ಯ ಗುರುಪಾಡಪ್ಪ ನೆಲ್ಲಗಿ ಹೇಳಿದರು.

Advertisement

ಗ್ರಾಮದ ವೀರಭದ್ರೇಶ್ವರ ದೇವಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೋರಟಗಿ ಶ್ರೀ ಅಮೋಘಸಿದ್ದೆಶ್ವರ ಸಂಸ್ಕೃತಿಕ ಕಲಾ ಸಂಘದಿಂದ ಹಮ್ಮಿಕೊಂಡ ಸಪ್ತಸ್ವರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಗೀತಕ್ಕೆ ಮನುಷ್ಯನ ಜೀವನದ ಹಾದಿ ಬದಲಾಯಿಸುವ ಶಕ್ತಿ ಇದೆ. ಕೆಟ್ಟು ಹೋಗಿರುವ ಕೆಲವಂದು ಸಂಸಾರಗಳು ವಗ್ಗಟ್ಟಿಸುವ ಶಕ್ತಿ ನಾಟಕಗಳ ಕತೆಗಳಲ್ಲಿದೆ ಪಾಲಕರು ತಮ್ಮ ಮಕ್ಕಳಿಗೆ ಪುರಾಣ ಸಂಗೀತ ನಾಟಕಗಳ ಚರಿತ್ರೆ ಇರುವ ಪುಸ್ತಕಗಳು ಓದುವ ಹವ್ಯಾಸ ಕಲಿಸಿ ಆ ಪುಸ್ತಕಗಳು ಓದುವುದರಿಂದ ನಿಮ್ಮ ಮಕ್ಕಳು ಉತ್ತಮ ಸಂಸ್ಕಾರ ಕಲಿಯುತ್ತವೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಬಸಲಿಂಗಪ್ಪ ಬೋನಾಳ, ಪ್ರಕಾಶ ಅಡಗಲ್‌, ರೇವಣಸಿದ್ಧ ಮಸಳಿ, ಶರಣು ಕೊಳಕುರ, ಪ್ರಕಾಶ ನೆಲ್ಲಗಿ, ಭೂತಾಳಿ ಖಾನಾಪುರ, ಗಾಯಕರುಗಳಾದ ಗುರುಲಿಂಗಯ್ಯ ಮಾಠಪತಿ, ಗುರಣ್ಣ ವಿಶ್ವಕರ್ಮ, ಭೀಮಾಶಂಕರ್‌ ವಿಭೂತಿ, ಭಲಭೀಮ, ಮಂದೆವಾಲ್‌, ಈರಯ್ಯ ಹಿರೇಮಠ್, ಅಲ್ಲಭಕ್ಷ ಭಾಗವನ್‌, ಲಕ್ಷ್ಮಣ್‌ ಕಟ್ಟಿಮನಿ, ಶ್ರೀಶೈಲ್‌ ಹರನಾಳ, ಮಲ್ಲಿಕಾರ್ಜುನ್‌ ವಿಭೂತಿ ಸೇರಿದಂತೆ ಹಲವರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next