Advertisement
ಕೇರಳದ ತ್ರಿಪುಣಿತ್ತುರದ ತಮಿಳು ಕುಟುಂಬದಲ್ಲಿ ಜನಿಸಿದ ಅವರು ಸಂಗೀತ ಶಿಕ್ಷಣ ಪಡೆದದ್ದು ತನ್ನ ತಂದೆ ಮತ್ತು ಸೋದರಮಾವ ವಿಶ್ವನಾಥ ಅಯ್ಯರ್ ಅವರಿಂದ. ಗೋಪಾಲಕೃಷ್ಣ ಅಯ್ಯರ್ ಮೂಲತಃ ವೇಣುವಾದಕರಾದರೂ ಅಷ್ಟೇ ಪ್ರಾವೀಣ್ಯವನ್ನು ಹಾಡುಗಾರಿಕೆಯಲ್ಲೂ ಹೊಂದಿದ್ದವರು. ಹೀಗಾಗಿ ಕೊಳಲು, ಹಾಡುಗಾರಿಕೆ ಎರಡನ್ನೂ ಅವರು ಕಲಾನಿಕೇತನದಲ್ಲಿ ಕಲಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಅವರು ಸ್ವಂತ ಕೈಬರಹದಲ್ಲಿ ಅಚ್ಚುಕಟ್ಟಾದ ಕನ್ನಡ ಸ್ವರಲಿಪಿ ಬಳಸಿ ಪಾಠಗಳನ್ನು ಬರೆದು ಕೊಡುತ್ತಿದ್ದರು. ಸಾಹಿತ್ಯ, ತಾಳ, ಕಾಲ, ಸ್ಥಾಯಿ ಎಲ್ಲವನ್ನೂ ಕರಾರುವಾಕ್ಕಾಗಿ ಹೊಂದಿರುತ್ತಿದ್ದ ಸ್ವರಲಿಪಿಯಿಂದಾಗಿ ಅಭ್ಯಾಸ ಮಾಡುವಾಗ ಪಾಠಗಳು ಟೇಪ್ ರೆಕಾರ್ಡರಿನಿಂದ ಹೊಮ್ಮಿದಂತೆ ಯಥಾವತ್ತಾಗಿ ಮೂಡಿಬರುತ್ತಿದ್ದವು. ಎಷ್ಟೇ ವಿದ್ಯಾರ್ಥಿಗಳಿದ್ದರೂ ಅವರವರ ಕಲಿಕೆಯ ಹಂತಕ್ಕೆ ಹೊಂದಿಕೊಂಡು ಬೇರೆ ಬೇರೆಯಾಗಿಯೇ ಹೇಳಿ ಕೊಡುವುದು ಅವರ ಪದ್ಧತಿಯಾಗಿತ್ತು.
Related Articles
Advertisement
ಚಿದಂಬರ ಕಾಕತ್ಕರ್, ಮಂಗಳೂರು