Advertisement

ಸಂಗೀತ ದೈವಿಕ ವಿದ್ಯೆ,ಜೀವನಕ್ಕೆ ಹೊಸ ದೃಷ್ಟಿ ಕೊಡುತ್ತೆ

06:10 AM Jan 27, 2018 | Team Udayavani |

ಮೈಸೂರು: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಶಾಸ್ತ್ರಗಳಲ್ಲಿ ಖ್ಯಾತರೆನಿಸಿರುವ ಮೈಸೂರಿ
ನ ರಾ.ಸತ್ಯನಾರಾಯಣ ಅವರು ಭಾರತ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮಶ್ರೀ ಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆಗೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

Advertisement

ನನ್ನ ಅಣ್ಣ-ತಮ್ಮಂದಿರು ಸಂಗೀತ ಕಲಿಯುತ್ತಿದ್ದರು. ನಾನು ಶಾಸ್ತ್ರ ಅಭ್ಯಾಸ ಮಾಡಿದೆ. ಭಾರತೀಯ ಸಂಗೀತ ಎಷ್ಟು ವಿಶಾಲವಾದುದು ಎಂದು ವಿಶ್ವ ದೃಷ್ಟಿಯನ್ನು ಕೊಟ್ಟವರು ನನ್ನ ತಾಯಿ, ಇದು ನನ್ನ ಕಲಿಕೆಗೆ ಅನುಕೂಲವಾಯ್ತು. ಭಾರತೀಯ ಸಂಗೀತ ಕುರಿತು ಮೈಸೂರಿನಲ್ಲಿ ಏನು ಕಲೆ ಇದೆ? ಪ್ರಪಂಚದ ಸಂಗೀತ ಯಾವ ರೀತಿ ಇದೆ ಎಂದು ಅಧ್ಯಯನ ಮಾಡುವ ಆಸೆ ತುಂಬಾ ಇತ್ತು, ಈ ಆಸಕ್ತಿಯಿಂದ ಚೈನೀಸ್‌, ಪಾಶ್ಚಾತ್ಯ ಸಂಗೀತಗಳನ್ನೂ ಅಭ್ಯಾಸ ಮಾಡಲು ಅನುಕೂಲವಾಯಿತು. ಪ್ರಾಚೀನ ಸಂಗೀತದ ಜತೆಗೆ ಆಧುನಿಕ ಸಂಗೀತವೂ ಬೆಳೆದುಬಂದಿದೆ.

ಭಾರತದಲ್ಲಿ ಸಂಗೀತಕ್ಕೆ ಅತ್ಯದ್ಭುತವಾದ ಬೆಲೆಯಿದೆ. ಪ್ರಪಂಚದ ಇನ್ಯಾವ ದೇಶದಲ್ಲೂ ಸಂಗೀತ ಇಷ್ಟು ಬೆಳೆದಿಲ್ಲ. ವಿದೇಶಗಳಲ್ಲಿ ಸಂಗೀತವನ್ನು ಭೋಗದ ದೃಷ್ಟಿಯಿಂದ ಕಾಣಲಾಗುತ್ತದೆ.

ಭಾರತೀಯರು ಸಂಗೀತವನ್ನು ಮೋಕ್ಷದ ದೃಷ್ಟಿಯಿಂದ ಕಾಣುತ್ತಾರೆ. ಭಾರ ತೀಯ ಸಂಗೀತದಲ್ಲಿ ಸಂಪೂರ್ಣ ದೃಷ್ಟಿ ಇದೆ. ಸಂಗೀತ ಕಲಿಯಲು ಬರುವ ಯುವಪೀಳಿಗೆ ಯವರು ಹೊಸ ದೃಷ್ಟಿ ಪಡೆಯಬೇಕು ಎನ್ನುತ್ತಾರೆ ಸತ್ಯನಾರಾಯಣ.

ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಆದರೆ, ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ.
– ರಾ.ಸತ್ಯನಾರಾಯಣ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು

Advertisement
Advertisement

Udayavani is now on Telegram. Click here to join our channel and stay updated with the latest news.

Next