ಹುಮನಾಬಾದ: ನಗರದಲ್ಲಿ 49ವರ್ಷಗಳನ್ನು ಪೂರ್ಣಗೊಳಿಸಿ 50ರ ಸಂಭ್ರಮದಲ್ಲಿರುವ ಹಳೆ ಅಡತ್ ಬಜಾರ ಗಣೇಶ ಉತ್ಸವ ಸಮಿತಿ, ಅತ್ಯಾಕರ್ಷಕ ಮಂಟಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಅಂತಾರಾಷ್ಟ್ರೀಯ ಕಲಾವಿದರಿಂದ ಸಂಗೀತೋತ್ಸವ, ನಿತ್ಯ ಚಂಡಿ ಹವನ, ಪ್ರವಚನ ಇತ್ಯಾದಿ ಕಾರ್ಯಕ್ರಮ ಆಯೋಜಿಸಿ ಭಕ್ತರಿಗೆ ರಸದೌತಣ ನೀಡುತ್ತಿದೆ.
ಆಟದಿಂದ ಪೀಠಕ್ಕೆ: 1969ರಲ್ಲಿ ಇಲ್ಲಿನ ಹಳೆ ಅಡತ್ ಬಜಾರ ಭಗೋಜಿ ನಿವಾಸ ಓಣಿ ಜನರಿಗೆಲ್ಲ ದೇಶಿ ಆಟಗಳ ಕ್ರೀಡಾಂಗಣವಾಗಿತ್ತು. ಆ ವೇಳೆ ಆ ಪರಿವಾರ ಪ್ರತಿಷ್ಠಾಪಿಸಿದ ನಂತರ ಬಣ್ಣ ಹೋಗಿದ್ದ ಗೌರೀಗಣೇಶ ಪ್ರತಿಮೆ ಅಂಗಳದಲ್ಲಿ ಆಡುತ್ತಿದ್ದ 10-12 ವರ್ಷದ ಬಾಲಕರ ಗುಂಪಿನ ಕೈಗಿತ್ತಿದ್ದರು.
50ನೇ ವರ್ಷಾಚರಣೆಯ ಈ ಶುಭ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಗೆ ಈ ಬಾರಿ ಬೆಂಗಳೂರಿನ ಖ್ಯಾತ ಮೂರ್ತಿ ಶಿಲ್ಪಿ ಧರ್ಮೇಂದ್ರಾಚಾರ್ಯ ಅವರು ಪಂಚಲೋಹದ 5.5ಅಡಿ ಅಡಿ ಎತ್ತರದ ಅತ್ಯಾಕರ್ಷಕ ಮೂರ್ತಿಯನ್ನು 3ತಿಂಗಳಲ್ಲಿ ಸಿದ್ಧಪಡಿಸಿ ಕೊಟ್ಟಿದ್ದಾರೆ.
ಮಹಾದ್ವಾರ ಮಂಟಪ: ಬಸವೇಶ್ವರ ವೃತ್ತದ ಬಲಬದಿಗೆ ಹೈದರಾಬಾದ್ ಬಿರ್ಲಾ ಮಂದಿರ ಮಾದರಿ ಮಹಾದ್ವಾರ ಸಿದ್ಧಪಡಿಸಲಾಗಿದೆ. 300ಉದ್ದ 60ಅಡಿ ಅಗಲ ಮಂಟಪದಲ್ಲಿ ಪ್ರೇಕ್ಷರಿಗಾಗಿ 1000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಆ ಪೈಕಿ ಅತೀ ಗಣ್ಯ, ಗಣ್ಯ ಮತ್ತು ಮಾಧ್ಯಮದವರಿಗೆ ಪ್ರತ್ಯೇಕ ಸೌಲಭ್ಯವಿದೆ. ಆಕಸ್ಮಾತಾಗಿ ಮಳೆ ಬಂದರೂ ಪ್ರೇಕ್ಷಕರು ಮತ್ತು ಕಲಾವಿದರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮ ನಡೆಯಲು ಅಗತ್ಯ
ವ್ಯವಸ್ಥೆ ಮಾಡಲಾಗಿದೆ. ಈ ಮಂಟಪ ಕಾರ್ಯವನ್ನು 30ಜನರು 15 ದಿನಗಳಲ್ಲಿ ನಿರ್ವಹಿಸಿದ್ದಾರೆ.
ಪ್ರವಚನ, ಸಂಗೀತ ರಸದೌತಣ: ಸೆ.14ರಿಂದ ಸೆ.21ರ ವರೆಗೆ ಪ್ರತಿನಿತ್ಯ ಪ್ರವಚನ ಮತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು. ಕಾರ್ಯಕ್ರಮಗಳ ವಿವರ ಇಂತಿದೆ. ರಾಜೇಶ್ವರ ಶಿವಾಚಾರ್ಯರ ಪ್ರವಚನ, ಸಂಗೀತ ವಿದೂಷಿ ಸಂಗೀತಾ ಕುಲಕರ್ಣಿ(ಕಟ್ಟಿ), ಚಿದಂಬರಾಶ್ರಮ ಶಿವಕುಮಾರ ಸ್ವಾಮೀಜಿ ಪ್ರವಚನ, ಕಾರ್ತಿಕ ಎಲ್.ಎಸ್. ಅವರಿಂದ ವಾದ್ಯ ಸಂಗೀತ, ಸಿದ್ಧಲಿಂಗ ಶಿವಾಚಾರ್ಯರಿಂದ ಪ್ರವಚನ, ಶಶಿಧರ ಕೋಟೆ ತಂಡದಿಂದ ಸಂಗೀತ ಸಂಭ್ರಮ, ಶಂಭು ಬಳಿಗಾರ ಅವರಿಂದ ಜನಪದ ಹಾಸ್ಯೋತ್ಸವ, ರಿಚರ್ಡ್ ಲೂಯಿಸ್ ಅವರಿಂದ ಹರಟೆ, ಶಿವಲಿಂಗೇಶ್ವರ ಸ್ವಾಮೀಜಿ ಪ್ರವಚನ, ಉಸ್ತಾದ ಫಯಜಖಾನ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಡಿ.ಅಜೇಂದ್ರ ಸ್ವಾಮೀಜಿ ಅವರಿಂದ ಪ್ರವಚನ, ಜಯರ್ತೀಥ ಮೇವುಂಡಿ ಹಿಂದೂಸ್ಥಾನಿ ಸಂಗೀತ, ಡಾ| ಜ್ಞಾನರಾಜಶ್ರೀ ಪ್ರವಚನ, ರವಿ ಮೂರೂರ ಸುಗಮ ಸಂಗೀತ, ಹಾರಕೂಡ ಡಾ| ಚನ್ನವೀÃರಶಿವಾಚಾರ್ಯ ಸ್ವಾಮೀಜಿ ಅವರಿಂದ ಪ್ರವಚನ, ಬೆಂಗಳೂರಿನ ಸ್ವರ ಲಹರಿ ತಂಡದಿಂದ ಚಲನಚಿತ್ರ ರಸಸಂಜೆ ಹಮ್ಮಿಕೊಳ್ಳಲಾಗಿದೆ. ಆಧ್ಯಾತ್ಮ ಹಾಗೂ ಸಂಗೀತ ದಾಸೋಹವೇ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ನಾಗರಾಜ ಜಿ.ರಘೋಜಿ ಹೇಳುತ್ತಾರೆ.