Advertisement

ವ್ರೂಮ್ ವ್ರೂಮ್ : ಎಲೆಕ್ಟ್ರಿಕ್ ಕಾರಿಗೆ ಸಂಗೀತ ಸಂಯೋಜನೆ

03:00 PM May 04, 2020 | Suhan S |

ಜಗತ್ತು ಪರಿಸರಸ್ನೇಹಿ ಸಮಾಜವನ್ನು ಅಪ್ಪಿಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಹವಾಮಾನ ವೈಪರೀತ್ಯವನ್ನು ತಹಬದಿಗೆ ತರುವ ಪ್ರಯತ್ನದಲ್ಲಿ, ದೇಶಗಳು ತೊಡಗಿಸಿಕೊಳ್ಳಲಿವೆ. ಎಲೆಕ್ಟ್ರಿಕ್‌ ವಾಹನಗಳಿಂದಲೇ ಈ ಕೆಲಸ ಆರಂಭವಾಗಲಿದೆ.

Advertisement

ಭಾರತದಲ್ಲಿ, ಎಲೆಕ್ಟ್ರಿಕ್‌ ವಾಹನಗಳ ತಯಾರಿಗೆ ಪ್ರೋತ್ಸಾಹಕರ ವಾತಾವರಣ ಇದೆ. ಆ ಕಾರಣಕ್ಕೆ, ಕಳೆದ ಒಂದೆರಡು ವರ್ಷದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆಯಲ್ಲಿ ಏರಿಕೆ ಕಂಡಿವೆ. ಸೌಂಡ್‌ ಮುಖ್ಯ ಪೆಟ್ರೋಲ್/ ಡೀಸೆಲ್‌ ವಾಹನಗಳಿಗೂ, ಎಲೆಕ್ಟ್ರಿಕ್‌ ವಾಹನಗಳಿಗೂ ಅಜಗಜಾಂತರ. ಈ ವ್ಯತ್ಯಾಸಗಳಲ್ಲಿ ಮುಖ್ಯವಾದುದು, ವಾಹನದ ಸದ್ದು. ಪೆಟ್ರೋಲ್, ಡೀಸೆಲ್‌ ಎಂಜಿನ್‌ಗಳು ಹೊರಡಿಸುವ ಸದ್ದನ್ನು ಎಲೆಕ್ಟ್ರಿಕ್‌ ಕಾರು ಹೊರಡಿಸುವುದಿಲ್ಲ. ಒಳ್ಳೆಯದೇ ಆಯ್ತಲ್ಲ ಎಂದು ಮೊದಲ ನೋಟಕ್ಕೆ ಅನ್ನಿಸಬಹುದು. ಆದರೆ, ವಾಹನ ಚಾಲನೆ ಮಾಡುವಾಗ, ಶಬ್ದ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ, ಚಾಲಕರಿಗೆ ಕಾರು ಯಾವ ವೇಗದಲ್ಲಿ ಚಲಿಸುತ್ತಿದೆ ಎಂಬುದನ್ನು ಸುಲಭವಾಗಿ, ಸ್ಪೀಡೋಮೀಟರ್‌ ನೋಡದೆಯೇ ತಿಳಿಸುವುದು ಶಬ್ದ. ವಾಹನದ ಶಬ್ದ, ಚಾಲಕರಿಗೆ ಮಾತ್ರವಲ್ಲ, ಪಾದಾಚಾರಿಗಳಿಗೂ ವಾಹನದ ಬರುವಿಕೆಯನ್ನು ತಿಳಿಯಲು ಸಹಕಾರಿ. ಹೀಗಾಗಿ, ಎಲೆಕ್ಟ್ರಿಕ್‌ ವಾಹನಗಳಿಗೆ ಫೇಕ್‌ ಶಬ್ದವನ್ನು ಅಳವಡಿಸುವ ಪರಿಪಾಠ ಪ್ರಾರಂಭವಾಯಿತು.

ಫೇಕ್‌ ಶಬ್ದ ಅಂತಾರಾಷ್ಟ್ರೀಯ ಮಟ್ಟದ ಆಟೊಮೊಬೈಲ್‌ ಸಂಸ್ಥೆಗಳಾದ ಫೆರಾರಿ, ನಿಸ್ಸಾನ್‌, ತಮ್ಮ ಎಲೆಕ್ಟ್ರಿಕ್‌ ಕಾರುಗಳಲ್ಲಿ ನಕಲಿ ಶಬ್ದ ಅಳವಡಿಸುವ ಪ್ರಯೋಗಗಳನ್ನು ಕೈಗೊಂಡಿವೆ. ಈ ಸಾಲಿಗೆ ಬಿಎಂಡಬ್ಲ್ಯೂ ಕೂಡಾ ಸೇರಿದೆ. ಆದರೆ, ಬಿಎಂಡಬ್ಲ್ಯೂ ಮಿಕ್ಕ ಸಂಸ್ಥೆಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ಅದು ತನ್ನ ಕಾನ್ಸೆಪ್ಟ್ ಕಾರೊಂದಕ್ಕೆ, ಹಾಲಿವುಡ್‌ನ‌ ಪ್ರಖ್ಯಾತ ಸಂಗೀತ ಸಂಯೋಜಕ ಹ್ಯಾನ್ಸ್ ಝಿಮ್ಮರ್‌ ಅವರಿಂದ ಶಬ್ದ ಸಂಯೋಜನೆ ಮಾಡಿಸಿದೆ. ಕಾನ್ಸೆಪ್ಟ್ ಕಾರು ಎಂದರೆ, ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿರುವ ಮಾದರಿ ಕಾರು ಎಂದರ್ಥ. ಹ್ಯಾನ್ಸ್ ಝಿಮ್ಮರ್‌ ಅವರು, ವೈಜ್ಞಾನಿಕ- ಕಾಲ್ಪನಿಕವೂ ಆದ ಸಿನೆಮಾಗಳ ಸಂಯೋಜಕರಾಗಿ ಹೆಸರು ಮಾಡಿದವರು. ಈಗ ಭವಿಷ್ಯದ ಕಾರುಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿರುವುದು ಅಚ್ಚರಿಯೇ ಸರಿ. ಕಾರು ಸಂಗೀತದ ಕೊಂಡಿ- inyurl.com/yb3scqsh.

Advertisement

Udayavani is now on Telegram. Click here to join our channel and stay updated with the latest news.

Next