Advertisement

Alvas Virasat ವಿಜಯ ಪ್ರಕಾಶ್‌, ಪ್ರವೀಣ್‌ ಗೋಡ್ಖಿಂಡಿ ಸಂಗೀತ ಮಾಧುರ್ಯ

11:29 PM Dec 17, 2023 | Team Udayavani |

ಮೂಡುಬಿದಿರೆ: ಅಲ್ಲಿ ತಾಳವಾದ್ಯ ಸಂಗೀತವಿತ್ತು; ಸಂಗೀತ ರಸಸಂಜೆಯ ಸಂಭ್ರಮವಿತ್ತು. ಒಟ್ಟಿನಲ್ಲಿ ಸಂಗೀತ ಮಾಧುರ್ಯದೊಂದಿಗೆ 29ನೇ ವರ್ಷದ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಂಪನ್ನಗೊಂಡಿತು.

Advertisement

ರವಿವಾರ ಸಂಜೆ ಈ ಬಾರಿಯ ವಿರಾಸತ್‌ ಪ್ರಶಸ್ತಿ ಸ್ವೀಕರಿಸಿದ ಸಂಗೀತ ಕ್ಷೇತ್ರದ ದಿಗ್ಗಜರೆನಿಸಿದ ಡಾ| ಮೈಸೂರು ಮಂಜುನಾಥ್‌, ಡಾ| ಪ್ರವೀಣ್‌ ಗೋಡ್ಖಿಂಡಿ ಹಾಗೂ ವಿಜಯ ಪ್ರಕಾಶ್‌ ಬಳಗದವರು ಮನಸ್ಸು ತುಂಬಿ ಸಂಗೀತ ಸುಧೆಯನ್ನು ಹರಿಸಿದರು. ತಾಳ ವಾದ್ಯ ಸಂಗೀತದಲ್ಲಿ ಮೈಸೂರು ಮಂಜುನಾಥ್‌ ವಯೋಲಿನ್‌ನಲ್ಲಿ ಮತ್ತು ಪ್ರವೀಣ್‌ ಗೋಡ್ಖಿಂಡಿ ಕೊಳಲಿನಲ್ಲಿ ಹಂಸಧ್ವನಿ ರಾಗದಲ್ಲಿ ವಾತಾಪಿ….ಪ್ರಸ್ತುತಪಡಿಸಿದರು.

ಮಂಗಳೂರು ಮೂಲದ ಅನುರಾಧಾ ಭಟ್‌ ಕೂಡ ಹಲವು ಹಾಡುಗಳನ್ನು ಹಾಡಿದರು. ಡಾ| ಆಳ್ವರಿಗೆ ಗಾಯನದ ನಮನ: ವಿಜಯಪ್ರಕಾಶ್‌ ಅವರು ಬೊಂಬೆ ಹೇಳುತೈತೆ…ಮತ್ತೆ ಹೇಳುತೈತೆ ಹಾಡುತ್ತ “ಹೊಸ ಬೆಳಕೊಂದು ಹೊಸಿಲಿಗೆ ಬಂತೂ ……ಮೂಡುಬಿದಿರೆ ಹೇಳು ತೈತೆ, ಕರ್ನಾಟಕ ಹೇಳುತೈತೆ, ಭಾರತ ಹೇಳುತೈತೆ ನೀನೇ ರಾಜ ಕುಮಾರಾ…ಎಂದು ಹಾಡಿನ ಸೊಲ್ಲನ್ನು ಕೊಂಚ ಮಾರ್ಪಡಿಸಿ ಡಾ| ಮೋಹನ ಆಳ್ವರಿಗೆ ಹಾಡಿನ ಗೌರವ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next