Advertisement
ಆರೋಗ್ಯಕ್ಕೆ ಒಳ್ಳೆಯದು :– ಅಣಬೆಯಲ್ಲಿ ಪ್ರೊಟೀನ್ ಅಂಶ ಜಾಸ್ತಿ ಇರುತ್ತದೆ ಹಾಗೂ ನಾರಿನಾಂಶ ಜಾಸ್ತಿ ಇರುವುದರಿಂದ ಅಣಬೆ ಸೇವಿಸುವವರ ಕೊಲೆಸ್ಟರಾಲ್ ಹತೋಟಿಗೆ ಬರುತ್ತದೆ.
– ಇದರಲ್ಲಿ ಕ್ಯಾಲೋರಿ ಕಡಿಮೆಯಿದ್ದು ನಾರಿನಾಂಶ ಹೆಚ್ಚಾಗಿರುವುದರಿಂದ ದೇಹವನ್ನು ರೋಗ ಮುಕ್ತವಾಗಿಡುವ ಸಾಮರ್ಥ್ಯವಿದೆ.
– ಅಣಬೆಯಲ್ಲಿ ವಿಟಮಿನ್ ಎ,ಬಿ ಮತ್ತು ಡಿ ಹೊಂದಿರುವುದಲ್ಲದೇ ದೇಹದ ಜೀವಕೋಶ ರಕ್ಷಿಸಲು ಇದು ಸಹಕಾರಿ.
– ಕ್ಯಾನ್ಸರ್ ಮತ್ತಿತರ ರೋಗಗಳನ್ನು ತಡೆಗಟ್ಟಲು ಬೇಕಾಗುವ ಆ್ಯಂಟಿ ಆಕ್ಸಿಡಾಂಟ್‌ಗಳು ಅಣಬೆಯಲ್ಲಿವೆ.
– ಅಣಬೆಯಲ್ಲಿ ಪೊಟ್ಯಾಶಿಯಂ ಇರುವ ಕಾರಣ ಇದು ರಕ್ತದೊತ್ತಡದ ರೋಗಗಳಿಗೆ ಉತ್ತಮ ಆಹಾರವಾಗಿದೆ.
ಮಶ್ರೂಮ್ ಮಂಚೂರಿ ಆಹಾರ ಪ್ರಿಯರ ಮೆಚ್ಚಿನ ತಿಂಡಿಯೂ ಹೌದು.ಸಮಪಾಕದಲ್ಲಿ ತಯಾರಿಸಿದ ಮಶ್ರೂಮ್ ಮಂಚೂರಿಯನ್ನು ಸವಿಯುವುದೇ ನಾಲಗೆಗೆ ಒಂದು ಹಬ್ಬ. ಕೆಲವೊಂದು ಹೊಟೇಲ್‌ಗಳು ಮಶ್ರೂಮ್ ಮಂಚೂರಿಗೆ ಬ್ರಾಂಡ್ ಆಗಿರುವುದು ಇದೆ.ಸರಿಯಾದ ಕ್ರಮ ಗೊತ್ತಿದ್ದಲ್ಲಿ ಮಶ್ರೂಮ್ ಮಂಚೂರಿಯನ್ನು ನೀವು ಮನೆಯಲ್ಲೇ ಸಿದ್ಧ ಪಡಿಸಿ ತಿನ್ನಬಹುದು.ಸಸ್ಯಾಹಾರಿಗಳೂ ಇಷ್ಟಪಡುವ ಮತ್ತು ಆರೋಗ್ಯಕಾರಕ ಮಶ್ರೂಮ್ ಮಂಚೂರಿಯನ್ನು ನೀವೂ ಒಮ್ಮೆ ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
ಮಶ್ರೂಮ್ 4 ಕಪ್,ಬೆಳ್ಳುಳ್ಳಿ-ಶುಂಠಿ ಪೇಸ್ಟ್ 2 ಚಮಚ,ಮೆಣಸಿನ ಪುಡಿ 2 ಚಮಚ,ಕರಿಯಲು ಎಣ್ಣೆ,ರುಚಿಗೆ ಉಪ್ಪು.
ಹಿಟ್ಟು ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಮೈದಾ ಅರ್ಧ ಕಪ್,ಕಾನ್ ಫ್ಲೋರ್ 1/4 ಕಪ್,ಅಕ್ಕಿ ಹಿಟ್ಟು 3 ಚಮಚ,ಮೆಣಸಿನ ಪುಡಿ 1 ಚಮಚ,ರುಚಿಗೆ ಉಪ್ಪು.
ಸಾಸ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಬೆಳ್ಳುಳ್ಳಿ 8 ಎಳಸು,ಚಿಲ್ಲಿ ಸಾಸ್ 3 ಚಮಚ ,ಶುಂಠಿ 1 ಚಮಚ,ಈರುಳ್ಳಿ 2 ,ಎಣ್ಣೆ 2 ಚಮಚ ,ಮೆಣಸಿನ ಪುಡಿ ಸ್ವಲ್ಪ, ಟೊಮೆಟೋ ಸಾಸ್ 4 ಚಮಚ,ಸೋಯಾ ಸಾಸ್ 1 ದೊ.ಚಮಚ
ಗ್ರೇವಿ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
ಕಾನ್ ಫ್ಲೋರ್ 2 ದೊ.ಚಮಚ,ನೀರು 2ಕಪ್,ಕೊತ್ತಂಬರಿ ಸೊಪ್ಪು. ಮಾಡುವ ವಿಧಾನ
ಬೆಳ್ಳುಳ್ಳಿ,ಶುಂಠಿ ಪೇಸ್ಟ್ ,ಉಪ್ಪು,ಮೆಣಸಿನ ಪುಡಿಯನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮಶ್ರೂಮ್ ನೆನೆಸಿ 10 ರಿಂದ 15 ನಿಮಿಷ ಇಡಿ.
ಗ್ರೇವಿ ತಯಾರಿಸಲು : ಮೈದಾ, ಕಾನ್ ಫ್ಲೋರ್,ಅಕ್ಕಿ ಹಿಟ್ಟು,ಮೆಣಸಿನ ಪುಡಿ,ಉಪ್ಪು,ಸ್ವಲ್ಪ ನೀರನ್ನು ಹಾಕಿ ತಳ್ಳಗೆ ಮಾಡಿ. ನೆನೆಸಿಟ್ಟ ಮಶ್ರೂಮ್ ಅನ್ನು ಇದರಲ್ಲಿ ಒಂದೊಂದೇ ಮುಳುಗಿಸಿ ತೆಗೆದು ಎಣ್ಣೆಯಲ್ಲಿ ಕರಿದು ಬದಿಗಿಡಿ.
ಸಾಸ್ ತಯಾರಿಸಲು : ಎಣ್ಣೆ, ಬಿಸಿ ಮಾಡಿ ಮೊದಲು ಬೆಳ್ಳುಳ್ಳಿ ಹಾಕಿ ಕೆಂಪಗೆ ಹುರಿಯಿರಿ.ನಂತರ ಮೆಣಸಿನ ಕಾಯಿ,ಶುಂಠಿ,ಈರುಳ್ಳಿ ಸೇರಿಸಿ 2 ನಿಮಿಷ ಹುರಿಯಿರಿ.ತದನಂತರ ಚಿಲ್ಲಿ ಸಾಸ್,ಟೊಮೆಟೋ ಸಾಸ್,ಸೋಯಾ ಸಾಸ್,ರುಚಿಗೆ ಬೇಕಾಗುವಷ್ಟು ಉಪ್ಪು ಸೇರಿಸಿ. ಕರಿದಿಟ್ಟ ಮಶ್ರೂಮ್ ಸೇರಿಸಿ ಚೆನ್ನಾಗಿ ಬೆರೆಸಿ ಇಳಿಸಿ.ಮೇಲಿನಿಂದ ಆಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿದರೆ ರುಚಿ-ರುಚಿಯಾದ ಮಶ್ರೂಮ್ ಮಂಚೂರಿಯನ್ ಸವಿಯಲು ಸಿದ್ಧ.