Advertisement
ಆದರೂ ನಾವೇನು ಮೀನು ತಿನ್ನುವುದನ್ನು ಕಡಿಮೆ ಮಾಡಿಲ್ಲ. ಇನ್ನೂ ನಿಖರವಾಗಿ ಹೇಳಬೇಕೆಂದರೆ ಇನ್ನು 20 ವರ್ಷಗಳಲ್ಲಿ ಯಾವುದೇ ಸಮು ದ್ರದಲ್ಲಿ ಮೀನೇ ಉಳಿದಿರುವುದಿಲ್ಲ. ಅಲ್ಲಿ ನಮಗೆ ಸಿಗಬಹುದಾದ ಏಕೈಕ ವಸ್ತು ಪ್ಲಾಸ್ಟಿಕ್ ಆಗಿರುತ್ತದೆ. ಮನುಷ್ಯರಾದ ನಾವು ಪ್ರತೀ ವರ್ಷ 400 ಮಿ. ಟನ್ ಪ್ಲಾಸ್ಟಿಕ್ ತಯಾರಿಸಿಕೊಂಡೇ ಬಂದಿದ್ದೇವೆ. ಈ ಸಂಖ್ಯೆ ಇನ್ನು 20 ವರ್ಷಗಳಲ್ಲಿ ಎರಡರಷ್ಟಾಗಲಿದೆ!
Related Articles
Advertisement
ಅದೇ ರೀತಿ 2017ರಲ್ಲಿ ವಿಜ್ಞಾನಿಗಳು ತಂಡವು ಪಾಕಿಸ್ತಾನದ ಸಾಮಾನ್ಯ ನಗರವೊಂದರ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಪ್ಲಾಸ್ಟಿಕ್ ತಿನ್ನುವ ಅಣಬೆಯೊಂದನ್ನು ಪತ್ತೆ ಹಚ್ಚಿದ್ದಾರೆ. ಆಸ್ಪರ್ಗಿಲ್ಲಸ್ ಟ್ಯೂಬಿಂಜೆನ್ಸಿಸ್ ಹೆಸರಿನ ಅಣಬೆಯು ಕೇವಲ ಎರಡು ತಿಂಗಳ ಅವಧಿಯಲ್ಲಿ ಪಾಲಿಯೆಸ್ಟರ್ ಪಾಲಿಯುರೆಥೇನ್ ಅನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಿರುವುದು ಕಂಡುಬಂದಿದೆ.
ಈ ರೀತಿ ಅಣಬೆ ಒಂದು ವಸ್ತುವನ್ನು ಸಂಪೂರ್ಣವಾಗಿ ನಾಶ ಮಾಡಿ ತನ್ನ ಅಸ್ತಿತ್ವವನ್ನು ಸಾಧಿಸಿಕೊಳ್ಳುವುದನ್ನು ಮೈಕೋರೆ ಮಿಡಿಯೇಶನ್ ಎಂದು ಕರೆಯಲಾಗುತ್ತದೆ. ಇದೊಂದು ನೈಸರ್ಗಿಕ ಪ್ರತಿಕ್ರಿಯೆ. ಇತ್ತೀಚಿನ ದಿನಗಳಲ್ಲಿ ಉದ್ದೇಶಪೂರ್ವಕ ವಾಗಿಯೂ ಮೈಕೋರೆಮಿಡಿಯೇಶನ್ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ತ್ಯಾಜ್ಯ ನಿರ್ಮೂಲನೆಗೆ ಸಹಕಾರಿ. ಕಳೆದ ಕೆಲವು ವರ್ಷಗಳಲ್ಲಿ ಸಂಶೋಧಕರು ಇದನ್ನು ಅಮೆಜಾನ್ ಕಾಡುಗಳಲ್ಲಿ ತೈಲ ಸೋರಿಕೆಯನ್ನು ಸ್ವತ್ಛ ಮಾಡಲು, ಡೆನ್‌ಮಾರ್ಕ್‌ನಲ್ಲಿ ಬೋಟ್‌ಗಳಲ್ಲಿ ಬಾಕಿ ಉಳಿದುಬಿಡುವ ತೈಲ ತೆಗೆದು ಶುದ್ಧ ಮಾಡಲು, ಹಾಗೆಯೇ ಕೆಲವು ನದಿಗಳಲ್ಲಿ ಸ್ವಚ್ಛತೆಗೂ ಬಳಸಿದ್ದಾರೆ. ಅಲ್ಲೆಲ್ಲ ಅಣಬೆಗಳನ್ನು ಬೆಳೆಸಿ ತ್ಯಾಜ್ಯ ನಿರ್ಮೂಲನೆ ಮಾಡಲಾಗುತ್ತಿದೆ. ಈ ಮೈಕೋರೆಮಿಡಿಯೇಶನ್‌ನಿಂದ ಭೂಮಿಯ ಫಲವತ್ತತೆಯೂ ಹೆಚ್ಚುವುದರಿಂದ ಈ ಪ್ರಕ್ರಿಯೆ ಹೆಚ್ಚು ಉಪಯುಕ್ತವೆನಿಸಿಕೊಂಡಿದೆ. ಅದರಲ್ಲೂ ಮೊದಲು ಹೇಳಿದ ಆಮ್ಲಜನಕವಿಲ್ಲದೆಯೂ ಬೆಳೆ ಯುವ ಪೆಸ್ಟಲೋಟಿಯೊಪ್ಸಿಸ್ ಮೈಕ್ರೊನ್ಪೊರಾ ವಿಶೇಷ ಪರಿ ಣಾಮ ಬೀರಬಹುದಾಗಿದೆ. ತ್ಯಾಜ್ಯ ಸಂಸ್ಕರಣ ಕೇಂದ್ರಗಳಲ್ಲಿ, ಪ್ರತೀ ಮನೆಗಳಲ್ಲೂ ಗೊಬ್ಬರ ತಯಾರಿಕೆಗೆ ಬಳಸಬಹುದು.
ಪ್ಲಾಸ್ಟಿಕ್‌ನಲ್ಲೇ ಬೆಳೆದದ್ದನ್ನು ನಾವೂ ತಿನ್ನಬಹುದು!
ಈ ರೀತಿ ಪ್ಲಾಸ್ಟಿಕ್ ಮೇಲೆಯೇ, ಅದನ್ನೇ ಬಳಸಿಕೊಂಡು ತಿನ್ನುವ ಅಣಬೆ ಮನುಷ್ಯನಿಗೆ ತಿನ್ನಲು ಯೋಗ್ಯವೇ ಎನ್ನುವ ಪ್ರಶ್ನೆ ಬರುವುದು ಸಾಮಾನ್ಯ. ಪ್ರಪಂಚದಲ್ಲಿ ಲಕ್ಷಾಂತರ ಬಗೆಯ ಅಣಬೆ ಗಳಿವೆ ಆದರೂ ಅದರಲ್ಲಿ ತಿನ್ನಲು ಯೋಗ್ಯ ಎನಿಸಿಕೊಂಡವು ಎಲ್ಲೋ ಕೆಲವು ಮಾತ್ರ. ಅದರಲ್ಲಿ ಈ ಪ್ಲಾಸ್ಟಿಕ್ ಮೇಲೆ ಬೆಳೆದ ಅಣಬೆಗಳೂ ಸೇರಿವೆ. ಉಜ್ರೆಕ್ಟ್ ವಿಶ್ವವಿದ್ಯಾಲಯ ಮಾಡಿದ ಸಂಶೋಧನೆಯ ಪ್ರಕಾರ ಪಿ-ಮೈಕ್ರೊನ್ಪೊರಾ ಅಣಬೆಯನ್ನು ಜನ ಸಾಮಾನ್ಯರು ಸೇವಿಸಬಹುದು. ಹಾಗೆಯೇ ಡಿಸೈನರ್ ಕ್ಯಾಥರೀನಾ ಉಂಗರ್ ಅವರು ಬೆಳೆಸಿದ ಎರಡು ಅಣಬೆ ಮಿಶ್ರಿತ ಅಣಬೆಯು ಸಿಹಿಯಾಗಿರುತ್ತದೆ ಮತ್ತು ನಾವು ಬಳಸುವ ಸೋಂಪು ಅಥವಾ ಮದ್ಯದ ವಾಸನೆಯನ್ನು ಹೊಂದಿರುತ್ತದೆಯಂತೆ. ಅದಕ್ಕೆ ನಿರ್ದಿಷ್ಟ ಒತ್ತಡ ನೀಡಿದರೆ ಮತ್ತಷ್ಟು ಸುವಾಸನೆಯನ್ನು ಅದರಲ್ಲಿ ಕಾಣಬಹುದು ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿಯೂ ಈ ಬಗ್ಗೆ ಸಂಶೋಧನೆ, ಅಧ್ಯಯನಗಳು ನಡೆದಿವೆ. ರಾಜಸ್ಥಾನ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಪ್ಲಾಸ್ಟಿಕ್ ತಿನ್ನುವ ಅಣಬೆಗಳು ಕೆಲವೊಮ್ಮೆ ಹೆಚ್ಚು ಮಾಲಿನ್ಯಗಳನ್ನು ಹೀರಿಕೊಳ್ಳುವುದರಿಂದ ವಿಷಕಾರಿಯಾಗಿರುವ ಸಾಧ್ಯತೆಯೂ ಇದೆ. ಅದೇನೇ ಇರಲಿ, ಈ ಕುರಿತಾಗಿ ಇನ್ನಷ್ಟು ಅಧ್ಯಯನಗಳು ನಡೆದು, ಪ್ಲಾಸ್ಟಿಕ್ ಮೇಲೆ ಬೆಳೆಯುವ ಅಣಬೆಯ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದೇ ಆದರೆ ಅದರಿಂದ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಂತೆ ಆಗುತ್ತದೆ. ಮೊದಲ ನೆಯದು ತ್ಯಾಜ್ಯದ ಸಮಸ್ಯೆ ಎರಡನೆಯದು ಆಹಾರ ಕೊರತೆ.
ಸಾಧಕ ಬಾಧಕಗಳೇನು? :
ಅಣಬೆಗಳಿಂದ ಪ್ಲಾಸ್ಟಿಕ್ ಜೀರ್ಣ ಮಾಡಬಹುದು ಎನ್ನುವುದು ಇದೀಗ ತಿಳಿದುಬಂದಿದೆಯಾದರೂ ಅದು ಅಷ್ಟು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಜಲಚರಗಳಂತೆ ನೀರಿನೊಳಗೆ ತುಂಬಿಕೊಂಡಿರುವ ಪ್ಲಾಸ್ಟಿಕ್ ಮೇಲೆ ಅಣಬೆ ಬೆಳಸುವುದು ಹೇಗೆ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸುತ್ತದೆ. ರಾಜಸ್ಥಾನ ವಿವಿ ಹೇಳಿದಂತೆ ಅಣಬೆ ವಿಷಕಾರಿಯಾಗಿ, ಅದರ ಅರಿವಿಲ್ಲದೆ ಮಾನವ ಸೇವಿಸಿಬಿಡುವ ಸಾಧ್ಯತೆಯೂ ಇದೆ.
ಈ ವಿಧಾನ ಎಲ್ಲ ರೀತಿಯಲ್ಲೂ ಧನಾತ್ಮಕ ಪರಿಣಾಮ ಬೀರಿದ್ದೇ ಆದರೆ ನಮ್ಮ ಪ್ರಪಂಚಕ್ಕೆ ಅಂಟಿರುವ ಬಹುದೊಡ್ಡ ಸಮಸ್ಯೆಗೆ ಒಂದೊಳ್ಳೆ ದಾರಿ ಸಿಕ್ಕಂತಾಗುತ್ತದೆ. ವಾರಗಳು ಅಥವಾ ತಿಂಗಳುಗಳಲ್ಲಿ ಅಣಬೆಗಳು ಪ್ಲಾಸ್ಟಿಕ್ ಅನ್ನು ತಿಂದು ಮುಗಿ ಸುವುದರಿಂದಾಗಿ ಎಲ್ಲ ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ಅಣಬೆ ಬೆಳೆಸಿ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬಹುದು. ಅದಕ್ಕಿಂತ ಒಂದು ಹೆಜ್ಜೆ ಮುಂದುಹೋಗಿ ಪ್ರತೀ ಮನೆಯ ಪ್ಲಾಸ್ಟಿಕ್ ತ್ಯಾಜ್ಯದ ಮೇಲೂ ಮನೆಯಲ್ಲೇ ಈ ರೀತಿ ಅಣಬೆ ಬಳಸಿ, ಅದನ್ನು ಮನೆಯ ಅಡುಗೆಗೇ ಬಳಸಿಕೊಳ್ಳಬಹುದು.
ಸರಕಾರ ಮತ್ತು ವಿಜ್ಞಾನಿಗಳು ಇದರ ಬಗ್ಗೆ ಹೆಚ್ಚಿನ ಗಮನ ಕೊಡುವ ಅಗತ್ಯ ಇದೆ. ಹಾಗೆಯೇ ಯಾವುದೇ ಸವಾಲಿಗೂ ಸಿದ್ಧವೆನ್ನುವ ಈಗಿನ ಯುವ ಸಮಾಜ ಇದರತ್ತ ದೃಷ್ಟಿ ಹರಿಸಿ, ತ್ಯಾಜ್ಯ ನಿರ್ಮೂಲನೆಗೆ ಹೊಸ ಮಾರ್ಗವನ್ನು ಹುಡುಕುವ ಆವ ಶ್ಯಕತೆಯೂ ಇದೆ.
-ಮನೇಕಾ ಗಾಂಧಿ