Advertisement
ಅಣಬೆಗಳನ್ನು ಬೇರು ಅಣಬೆ, ದರಗು ಅಣಬೆ ಮತ್ತು ಬರ್ಕಟ್ಟೆ ಅಣಬೆಯಾಗಿ 3 ವಿಧದಲ್ಲಿ ವಿಗಂಡಿಸಬಹುದು. ಬೇರು ಅಣಬೆಯು ಜುಲೈ ತಿಂಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವುಗಳು ಗೆದ್ದಲಿನ ಹುತ್ತ, ಫಲವತ್ತಾದ ಮಣ್ಣಿನಲ್ಲಿ ಹುಟ್ಟುತ್ತವೆ. ಕಿತ್ತಾಗ ಉದ್ದನೆಯ ಬೇರು ಇರುತ್ತದೆ. ಉದಾ: ತುಳುವಿನ ನಾಯಿಂಬ್ರೆ. ಸುಳಿರ್ ಇತ್ಯಾದಿ. ದರಗು ಅಣಬೆ ಗಾತ್ರದಲ್ಲಿ ಸಣ್ಣದಾಗಿರುತ್ತದೆ. ಕಾಫಿ ತೋಟ, ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೊಳೆತ ಎಲೆಗಳ ಮೇಲೆ ಹುಟ್ಟಿಕೊಳ್ಳುವ ಈ ಅಣಬೆಗಳು ತಿನ್ನಲು ಬಲು ರುಚಿಕರ. ಬರ್ಕಟ್ಟೆ ಅಣಬೆಯು ಛತ್ರಿಯಂತೆ ಎದ್ದು ನಿಲ್ಲುತ್ತದೆ. ಒಂದೇ ಕಡೆಯಲ್ಲಿ 10-15 ದಿನಗಳ ಕಾಲ ಹುಟ್ಟುತ್ತದೆ. ತುಳುವಿನಲ್ಲಿ ಸುಳಿರ್ ಅಣಬೆ ಎಂದೂ ಕರೆಯುತ್ತಾರೆ. ಕಲ್ಲಲಂಬು ಅಣಬೆಗೆ ಬೇಡಿಕೆ ಹೆಚ್ಚಿದೆ. ಕೆ.ಜಿ.ಗೆ 150-200 ರೂ.ಗೆ ಮಾರಾಟವಾಗುತ್ತದೆ.
ತಿಳಿಯುವುದು ಹೇಗೆ?
ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಬಹಳಷ್ಟಿವೆ ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು. ಇವುಗಳನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದರೂ ಕೆಲವೊಂದನ್ನು ನೋಡುವಾಗಲೇ ವಿಷಕಾರಿ ಅಣಬೆ ಎಂದು ತಿಳಿದುಕೊಳ್ಳಬಹುದು. ಅಮಾನಿಟಿ ಫೆಲ್ಲಾಯ್‌ಡಿಸ್ ಎನ್ನುವ ಅಣಬೆ ಅತ್ಯಂತ ವಿಷಕಾರಿ. ಇದಕ್ಕೆ ಬೆಳ್ಳಗಿನ ತೊಟ್ಟು ಇರುತ್ತದೆ. ದೊಡ್ಡ ಹಸಿರು ಮಿಶ್ರಿತ ಬಿಳುಪಿನ ವೃತ್ತಾಕಾರದ ಟೋಪಿ ಇದ್ದು, ಅದರಲ್ಲಿರುವ ಪದರಗಳು ಮೊದಲು ಬೆಳ್ಳಗಿರುತ್ತವೆ. ಆನಂತರ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದನ್ನು ಸೇವಿಸಿದರೆ ಹೊಟ್ಟೆನೋವು, ವಾಂತಿ – ಭೇದಿ ಕಾಣಿಸಿಕೊಳ್ಳುತ್ತದೆ. ಚಿಕಿತ್ಸೆ ಪಡೆಯದಿದ್ದರೆ ನಾಲ್ಕೈದು ದಿನಗಳಲ್ಲಿ ಸಾವು ಕೂಡ ಬಂದೀತು. ಕಪ್ಪು ಬಣ್ಣದ ಹಳದಿ ಎಲೆಗಳನ್ನು ಹೊಂದಿದ ಅಮಾನಿಟಿ ಮ್ಯಾಕ್ಸೆರಿಯಾ ಎನ್ನುವ ಅಣಬೆಯೂ ವಿಷಕಾರಿ. ಹಾಗಾಗಿ ಅಣಬೆಗಳನ್ನು ತೆಗೆ ಯುವ ಸಂದರ್ಭ ಜಾಗರೂಕತೆ ವಹಿಸುವುದು ಸೂಕ್ತ. ಅಣಬೆಗಳ ಸೇವನೆಯಿಂದ ಯಾವುದಾದರೂ ತೊಂದರೆ ಕಂಡುಬಂದಲ್ಲಿ ತತ್ ಕ್ಷಣ ವೈದ್ಯರನ್ನು ಸಂಪರ್ಕಿಸಿ.
Related Articles
ಅಣಬೆಗಳಲ್ಲಿ ಸಕ್ಕರೆ, ಕೊಬ್ಬಿನ ಅಂಶಗಳು ಕಡಿಮೆ ಇರುವುದರಿಂದ ಮಧುಮೇಹಿಗಳು, ಹೃದ್ರೋಗ ಮೊದಲಾದ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಧಾರಾಳ ನ್ನಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಆಹಾರ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಮಕ್ಕಳ ಬೆಳವಣಿಗೆಯಲ್ಲಿ ಅಣಬೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
Advertisement
ಕೃತಕ ಅಣಬೆಗಿಂತಲೂ ನೈಸರ್ಗಿಕವಾಗಿ ಸಿಗುವ ಈ ಅಣಬೆಗಳು ರುಚಿಕರ ಮತ್ತು ಆರೋಗ್ಯಕರ. ಅಣಬೆಗಳಿಂದ ಬಗೆಬಗೆಯ ಖಾದ್ಯಗಳನ್ನು ತಯಾರು ಮಾಡಬಹುದು. ಮುಖ್ಯವಾಗಿ ಅಣಬೆ ಮಸಾಲ, ಅಣಬೆ ಗಸಿ, ಅಣಬೆ ಪುಳಿಪುಂಚಿ, ಅಣಬೆ ಪದಾರ್ಥ, ಅಣಬೆ ಪಲ್ಯ, ಅಣಬೆ ಸುಕ್ಕ, ಅಣಬೆ ಸಾಂಬಾರ್ ಇತ್ಯಾದಿ. ಅಣಬೆಯೊಂದಿಗೆ ಹಲಸಿನ ಕಾಯಿ ಬೀಜವನ್ನು ಗುದ್ದಿ ತಯಾರಿಸಿದ ಖಾದ್ಯ ಬಲು ರುಚಿಕರ. ಅಣಬೆಯನ್ನು ಹೆಚ್ಚಾಗಿ ಸೌತೆಕಾಯಿಯ ಮಿಶ್ರಣದೊಂದಿಗೆ ಪದಾರ್ಥ ಮಾಡುತ್ತಾರೆ.
ಅಣಬೆ ಬುಡದಲ್ಲಿ ಹಾವು!ಅಣಬೆಗಳನ್ನು ಕೀಳುವಾಗ ಎಚ್ಚರ ವಹಿಸಬೇಕು. ರಾಶಿರಾಶಿಯಾಗಿ ಹುಟ್ಟುವ ಅಣಬೆಯನ್ನು ಒಬ್ಬರೇ ಕೀಳುವುದು ಅಪಾಯಕಾರಿ. ಅಣಬೆಗಳ ಮಧ್ಯೆ ನಾಗರಹಾವು ವಾಸಿಸುತ್ತದೆ. ಮುಟ್ಟ ಅಲಂಬು (ರಾಶಿ ಅಣಬೆ) ಕಂಡರೆ ಅಕ್ಕಪಕ್ಕದವರನ್ನು ಕೂಗಿ ಕರೆದು ಎಲ್ಲರೂ ಹೋಗಿ ಕೀಳುತ್ತಾರೆ. ಇದು ತುಳುವರ ನಂಬಿಕೆಯಾದರೂ ಇದರ ಹಿಂದೆ ಜಾಗೃತಿಯ ಅರಿವು ಇದೆ. ಅಣಬೆಯನ್ನು ಹೆಚ್ಚಾಗಿ ಕ್ರಿಮಿಕೀಟಗಳು ತಿನ್ನುತ್ತವೆ. ಈ ಕೀಟಗಳನ್ನು ತಿನ್ನಲು ಹಾವುಗಳು ಅಣಬೆಯ ಬುಡದಲ್ಲಿ ಬಂದು ವಾಸಿಸುತ್ತವೆ. ಒಬ್ಬರೇ ಹೋಗಿ ಸದ್ದಿಲ್ಲದೆ ಅಣಬೆ ಕೀಳುವ ಬದಲು ಗುಂಪಾಗಿ ಹೋದರೆ ಹಾವುಗಳು ಹೆದರಿ ಓಡಿ ಹೋಗುತ್ತವೆ. ಅಣಬೆಯ ಪದಾರ್ಥಕ್ಕೆ ಬೆಂಕಿ ಯಲ್ಲಿ ಕಾಯಿಸಿದ ಕಬ್ಬಿಣವನ್ನು ಮುಳುಗಿಸಿ ತೆಗೆದರೆ ರುಚಿ ಹೆಚ್ಚುತ್ತದೆ ಎನ್ನುವ ಪ್ರತೀತಿಯೂ ಇದೆ.