Advertisement

ಮಶ್ರೂಮ್‌ ಮ್ಯಾಜಿಕ್‌

08:54 PM Dec 07, 2020 | Suhan S |

ಕ್ಲಿಂಟ್‌ ಜೋಸೆಫ್, ಮೈಸೂರಿನ ಜೆ.ಎಸ್‌. ಎಸ್‌.ಕಾಲೇಜಿನಲ್ಲಿ ಎಂ.ಎಸ್‌.ಸಿ. ಮೈಕ್ರೋಬಯಾಲಜಿ ಓದುತ್ತಿರುವ ವಿದ್ಯಾರ್ಥಿ. ಇದೇ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿರುವಾಗಅಂತಿಮ ವರ್ಷದ ಪ್ರಾಜೆಕ್ಟ್ ಆಗಿ ಆತ ಅಣಬೆಯಿಂದ ವೈನ್‌ ತಯಾರಿಸುವ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದ. ಮುಂದೆ ಅದೇ ಕಾಲೇಜಿನಲ್ಲಿ ಎಂಎಸ್ಸಿಗೆ ಸೇರಿದವನು, ಅಣಬೆಕೃಷಿ ಕುರಿತ ಆಸಕ್ತಿಯನ್ನು ಉಳಿಸಿಕೊಂಡ. ಆ ಕ್ಷೇತ್ರದ ಪರಿಣಿತರಿಂದ, ಜಾಲತಾಣಗಳಿಂದ ಸಾಕಷ್ಟುಮಾಹಿತಿ ಸಂಗ್ರಹಿಸಿದ. ಅಣಬೆಗಳನ್ನು ಬೆಳೆದು, ಅವನ್ನು ಮಾರುಕಟ್ಟೆಗೆ ತಲುಪಿಸುವಕನಸುಕಂಡ. ಅದನ್ನು ಸಹಪಾಠಿ ಅಜಯ್‌ ಬಳಿ ಹೇಳಿಕೊಂಡ. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಅಜಯ್ ,ಕ್ಲಿಂಟ್‌ನ ಯೋಜನೆಗೆ ಜೊತೆಯಾಗಲು ಹೂಂಗುಟ್ಟಿದ. ಈ ನಡುವೆ ಇವರಿಬ್ಬರ ಸ್ನೇಹಿತ, ಅದೇಕಾಲೇಜಿನ ವಿದ್ಯಾರ್ಥಿ ರಾಜಕಿರಣ ಸಹ ಇವರನ್ನು ಸೇರಿಕೊಂಡ.

Advertisement

ಬಾಡಿಗೆ ರೂಮಿನಲ್ಲಿ ಪ್ರಯೋಗ :  ಮೊದಲಿಗೆ ಈ ಮೂವರೂ ಸೇರಿ 250 ಚದರ ಅಡಿಯ ಪುಟ್ಟ ರೂಂ ಒಂದನ್ನು ಬಾಡಿಗೆಗೆ ಹಿಡಿದರು. ಅಲ್ಲಿಲ್ಲಿ ಓಡಾಡಿ ಹುಲ್ಲು, ಪ್ಲಾಸ್ಟಿಕ್‌ ಚೀಲ, ಅಣಬೆ ಬೀಜ ಸೇರಿಸಿದರು. ಸಿಕ್ಕಸಿಕ್ಕ ಜಾಲತಾಣಗಳನ್ನು ಜಾಲಾಡಿ ಅಣಬೆ ಕೃಷಿಯ ಪಟ್ಟುಗಳನ್ನು ತಿಳಿದು, ಮುನ್ನೂರು ಚೀಲಗಳಲ್ಲಿತಂದ ಸರಕನ್ನೆಲ್ಲ ತುಂಬಿದರು.ಕಾಲಿಡಲೂ ಜಾಗವಿಲ್ಲದ ಆ ಪುಟ್ಟಕೊಠಡಿ ಇವರ ಪ್ರಯೋಗಶಾಲೆಯಾಯಿತು.25ನೇ ದಿನಕ್ಕೆ ಹತ್ತು ಕೆ.ಜಿ.ಯಷ್ಟು ಅಣಬೆ ಫ‌ಲ ನೀಡಿದಾಗ ಅವರಲ್ಲಿಖುಷಿಯೋ ಖುಷಿ. ಮೊದಲ ಯಶಸ್ಸೇನೋಸಿಕ್ಕಿತ್ತು, ಆದರೆ ಆ ಹರ್ಷ ಬಹಳಕಾಲ ಬಾಳಲಿಲ್ಲ.ಇವರುಗಳು ಬೆಳೆಸಿದ್ದ ಸಿಂಪಿ ಅಣಬೆಯ ಜೀವಿತಾವಧಿ ಕೇವಲ ನಾಲ್ಕು ದಿನವಾಗಿದ್ದುದರಿಂದ, ಅಷ್ಟುಕಡಿಮೆ ಸಮಯದಲ್ಲಿ ಅದನ್ನು ಪ್ಯಾಕ್‌ ಮಾಡಿ ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗದೆ ಲಾಸ್‌ ಆಯಿತು.

ಸೋಲೇ ಗೆಲುವಿನ ಸೋಪಾನ :  ಮೊದಲ ಪ್ರಯತ್ನದಲ್ಲಿ ಸೋಲಾಯಿತೆಂದು ಈ ಹುಡುಗರು ಅಂಜಲಿಲ್ಲ. ಮತ್ತೂಂದು ಪ್ರಯೋಗಕ್ಕೆ ಮುಂದಾದರು. ಈ ಬಾರಿ ಹತ್ತು ದಿನಗಳವರೆಗೆ ಬಾಳಿಕೆ ಬರಬಲ್ಲ ಹಾಲು ಅಣಬೆ ಬೆಳೆಯಲುನಿರ್ಧರಿಸಿದರು.500 ಚದರ ಅಡಿ ವಿಸ್ತೀರ್ಣದ ಶೆಡ್‌ ವೊಂದನ್ನು ಬಾಡಿಗೆಗೆ ಹಿಡಿದು ಪ್ರಯೋಗಆರಂಭಿಸಿದರು. ಅಣಬೆಯನ್ನು ಪ್ಯಾಕ್‌ಮಾಡಲು ಪರಿಸರ ಸ್ನೇಹಿ ಕೊಟ್ಟೆಯನ್ನೂಹುಡುಕಿಕೊಂಡರು. ಈ ಬಾರಿ ಯಶಸ್ಸು ಇವರನ್ನು ಹುಡುಕಿಕೊಂಡು ಬಂತು.

ಮುಂದೇನು ಎಂಬ ಪ್ರಶ್ನೆ ಇದೀಗ ಹುಡುಗರನ್ನುಕಾಡತೊಡಗಿತು. ಈವರೆಗೆ ತಮ್ಮ ಪಾಕೆಟ್‌ ಮನಿಯಿಂದ ದುಡ್ಡು ಹೊಂದಿಸಿದ್ದರು. ಈ ಪ್ರಯೋಗವನ್ನು ಮುಂದುವರಿಸಿ ಅಣಬೆಯನ್ನು ಮಾರುಕಟ್ಟೆಗೆ ಪರಿಚಯಿಸಲು ಇವರಿಗೆ ಸುಮಾರುಐದು ಲಕ್ಷ ರೂಪಾಯಿಯ ಅಗತ್ಯವಿತ್ತು.ನಮ್ಮ ಕೆಲಸದಲ್ಲಿ ನಮಗೆ ವಿಶ್ವಾಸವಿತ್ತು. ಹೇಗಾದರೂ ದುಡ್ಡಿನ ವ್ಯವಸ್ಥೆ ಮಾಡಿ ಮುಂದುವರಿಯೋಣವೆಂದು ನಿರ್ಧರಿಸಿದೆವು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಶಿಕ್ಷಣದ ಜೊತೆಗೇ ಡೆಲಿವರಿ,ಕ್ಯಾಟರಿಂಗ್‌ನಂಥ ಪಾರ್ಟ್‌ ಟೈಂ ಉದ್ಯೋಗಗಳನ್ನು ಮಾಡಿ,ಕೆಲವೊಮ್ಮೆ ನಮ್ಮ ಆಭರಣಗಳನ್ನೂ ಅಡ ಇಟ್ಟು ಯೋಜನೆಯನ್ನು ಕಾರ್ಯಗತಮಾಡಿದೆವು ಅನ್ನುತ್ತಾರೆ ಕ್ಲಿಂಟ್.

ಪ್ರಶಸ್ತಿಯೂ ಸಿಕ್ಕಿತು! :  ಈ ಪರಿಶ್ರಮ ಬಹುದೊಡ್ಡ ಫ‌ಲಿತಾಂಶಕ್ಕೆಮುನ್ನುಡಿ ಬರೆದಿದೆ. ಫ‌ಂಗೋ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯವಾಗಿರುವ ಈಹುಡುಗರು ಬೆಳೆದ ಅಣಬೆಗಳು ಗ್ರಾಹಕರ ವಿಶ್ವಾಸ ಗಳಿಸಿವೆ. ಸದ್ಯಕ್ಕೆ ಮೂರು ತಿಂಗಳಿಗೆ ಸುಮಾರು ಒಂದು ಟನ್‌ ಅಣಬೆ ಮಾರುಕಟ್ಟೆಗೆಬರುತ್ತಿದೆ. ಅಂತಾರಾಷ್ಟ್ರೀಯಸ್ವಾವಲಂಬನಾ ಯೋಜನೆಗಳ ವಾರ್ಷಿಕಸ್ಪ ರ್ಧೆಯಲ್ಲಿ ಈ ಹುಡುಗರ ಸಾಹಸಕ್ಕೆ ಪ್ರಥಮ ರನ್ನರ್‌ ಅಪ್‌ ಪ್ರಶಸ್ತಿ ಕೂಡ ದೊರಕಿದೆ. ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬಳಸಲ್ಪಡುವ ಬಟನ್‌ ಅಣಬೆಯ ತಯಾರಿಕೆಯಲ್ಲಿ ರಾಸಾಯನಿಕಗಳ ಬಳಕೆಯಾಗುತ್ತದೆ. ಆದರೆ ಹಾಲು ಅಣಬೆ ಸಂಪೂರ್ಣವಾಗಿ ಸಾವಯವವಾಗಿದೆ. ಹೆಚ್ಚಿನ ಜನರಿಗೆ ಇದರ ಬಗ್ಗೆ ಅರಿವಿಲ್ಲ. ಜೊತೆಗೆ, ಬಟನ್‌ಅಣಬೆಗೆ ಹೋಲಿಸಿದರೆ, ಹಾಲು ಅಣಬೆ ಗಾತ್ರದಲ್ಲಿ ದೊಡ್ಡದಿದೆ. ಈ ಅಣಬೆಗಳನ್ನುಕೊಳ್ಳಲು ಮೊದಲಿಗೆ ಗ್ರಾಹಕರು ಹಿಂಜರಿದರು. ಕೆಲವು ಹೋಟೆಲ್‌ನವರಂತೂ ಇದು ಹೈಬ್ರಿಡ್‌ ತಳಿ ಇರಬಹುದೆಂದು ಭಾವಿಸಿ ಇದನ್ನುಕೊಳ್ಳಲು ಒಪ್ಪಲೇಇಲ್ಲ. ಆಗ ಲಾಭವನ್ನು ಬಿಟ್ಟು, ಹೆಚ್ಚಿನ ರಿಯಾಯಿತಿ ಕೊಟ್ಟುಮಾರಬೇಕಾಯಿತು. ಒಮ್ಮೆ ಬಳಸಿದ ನಂತರ ಜನರು ಮತ್ತೆ ಇದನ್ನೇ ಹುಡುಕಿಕೊಂಡು ಬಂದರು.

Advertisement

ಹೀಗೆ ಶುರುವಾಯ್ತು ನಮ್ಮ ಯಶಸ್ಸಿನ ಪಯಣ. ಕೆಲವೇ ತಿಂಗಳುಗಳಲ್ಲಿ ಹಾಕಿದಬಂಡವಾಳ ವಾಪಸ್ಸು ಬಂತು. ಇದೀಗ ಲಾಭವನ್ನು ಲಕ್ಷಗಳಲ್ಲಿ ಎಣಿಸುತ್ತಿದ್ದೇವೆ. ಹೆಚ್ಚಿನ ಪರಿಶ್ರಮ ಮತ್ತು ಜಾಗರೂಕತೆಯನ್ನುಈ ಕೃಷಿ ಬೇಡುತ್ತದೆ. ಸದ್ಯಕ್ಕೆ ವಿದ್ಯಾಭ್ಯಾಸ ಮುಂದುವರಿಸುತ್ತ ನಾವಷ್ಟೇ ಇಲ್ಲಿಯೂ ದುಡಿಯುತ್ತ ಹೇಗೊ ಸಂಭಾಳಿಸುತ್ತಿದ್ದೇವೆ. ಮುಂದೆ ತಯಾರಿಕಾ ಘಟಕವನ್ನು ವಿಸ್ತರಿಸಿ ಹೆಚ್ಚಿನ ಗ್ರಾಹಕರನ್ನು ತಲುಪುವ, ಅಣಬೆಯ ವೈನ್‌ ನಂತಹ ವಿನೂತನ ಉತ್ಪನ್ನಗಳನ್ನು ತಯಾರಿಸುವ ಉದ್ದೇಶವಿದೆ. ಗುಣಮಟ್ಟವನ್ನು ಕಾಯ್ದುಕೊಂಡರೆ ಗ್ರಾಹಕ ಕೈಬಿಡುವುದಿಲ್ಲ ಎಂಬ ವಿಶ್ವಾಸವೂ ಇದೆ ಎನ್ನುತ್ತಾರೆ ಕ್ಲಿಂಟ್.

 

– ಸುನೀಲ್‌ ಬಾರ್ಕೂರ್‌

 

Advertisement

Udayavani is now on Telegram. Click here to join our channel and stay updated with the latest news.

Next