Advertisement

ಟೆಸ್ಟ್‌ ಕೀಪಿಂಗ್‌ನಿಂದ ಮುಶ್ಫಿಕರ್‌ ರಹೀಂ ದೂರ

09:43 AM Oct 29, 2019 | Team Udayavani |

ಢಾಕಾ, ಅ. 27: ಬಾಂಗ್ಲಾದೇಶದ ನಂ.1 ಕೀಪರ್‌ ವಿಕೆಟ್‌ ಕೀಪರ್‌ ಮುಶ್ಫಿಕರ್‌ ರಹೀಂ ಇನ್ನು ಮುಂದೆ ಟೆಸ್ಟ್‌ ಕ್ರಿಕೆಟ್‌ನಲ್ಲಿಕೀಪಿಂಗ್‌ ನಡೆಸುವುದಿಲ್ಲ. ತಮ್ಮ ಮೇಲಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ. ಕೋಚ್‌ ರಸೆಲ್‌ ಡೊಮಿಂಗೊ, ತಂಡದ ಆಡಳಿತ ಮಂಡಳಿ ಮತ್ತು ಸಹ ಆಟಗಾರರೊಂದಿಗೆ ಚರ್ಚಿಸಿದ ಬಳಿಕ ಮುಶ್ಫಿಕರ್‌ ರಹೀಂ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

Advertisement

“ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೀಪಿಂಗ್‌ ನಡೆಸುವ ಆಸಕ್ತಿ ನನ್ನಲ್ಲಿ ಇಲ್ಲವಾಗಿದೆ. ಮುಂದಿನ ದಿನಗಳಲ್ಲಿ ನಾನು ಎಲ್ಲ ಮಾದರಿಯ ಕ್ರಿಕೆಟ್‌ಗಳಲ್ಲೂ ಪಂದ್ಯಗಳನ್ನು ಆಡಬೇಕಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಜತೆಗೆ ಢಾಕಾ ಪ್ರೀಮಿಯರ್‌ ಲೀಗ್‌, ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲಿದ್ದೇನೆ. ಕಳೆದ ಕೆಲವು ವರ್ಷಗಳಿಂದ ಬಿಡುವಿಲ್ಲದಷ್ಟು ಪಂದ್ಯಗಳನ್ನು ಆಡುತ್ತಲೇ ಇದ್ದೇನೆ. ಈ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕಿದೆ’ ಎಂದು 32ರ ಹರೆಯದ ರಹೀಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next