Advertisement

ವಿಜೃಂಭಣೆಯ ಮುರುಘಾಮಠ ರಥೋತ್ಸವ

09:15 AM May 24, 2020 | Suhan S |

ಧಾರವಾಡ: ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹದಿಂದಲೇ ನಾಡಿನ ಗಮನ ಸೆಳೆದಿರುವ ಇಲ್ಲಿನ ಮುರುಘಾ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ವಿಜೃಂಭಣೆಯ ರಥೋತ್ಸವ ನಡೆಯಿತು.

Advertisement

ಸಂಜೆ 4 ಗಂಟೆಗೆ ಶ್ರೀಮದಥಣಿ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವಕ್ಕೆ ಚಿತ್ರದುರ್ಗದ ಬೃಹನ್ಮಠದ ಡಾ| ಶಿವಮೂರ್ತಿ ಮುರಘಾ ಶರಣರು ಚಾಲನೆ ನೀಡಿದರು. ಮಠದ ಆವರಣದಿಂದ ಡಿಪೋ ವೃತ್ತದ ವರೆಗೂ ಸಾಗಿಬಂದ ರಥಕ್ಕೆ ಹರ ಹರ ಮಹಾದೇವ ಘೋಷದೊಂದಿಗೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಾವಿರಾರು ಜನರು ಮುರುಘಾ ಮಠದ ಮೂಲ ಗದ್ದುಗೆಗೂ ವಿಶೇಷ ಪೂಜೆ ಸಲ್ಲಿಸಿದರು.

ಸವಣೂರಿನ ಶ್ರೀ ಮಹಾಂತ ಸ್ವಾಮೀಜಿ, ಶಿರಾಳಕೊಪ್ಪದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಹೊಸರಿತ್ತಿಯ ಶ್ರೀ ಗುದೆಶ್ವರ ಸ್ವಾಮೀಜಿ, ಸವದತ್ತಿ ಸ್ವಾಧಿಮಠದ ಶವಿಬಸವ ಸ್ವಾಮೀಜಿ, ಉಗರಗೋಳದ ಮಹಾಂತ ಸ್ವಾಮೀಜಿ, ಅಥಣಿಯ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸೇರಿದಂತೆ ಅನೇಕ ಸ್ವಾಮೀಜಿಗಳು ಸಮ್ಮುಖ ವಹಿಸಿದ್ದರು.

ಜಾನಪದ ಕಲರವ: ಜಾನಪದ ಮೇಳಗಳು, ಭಜನೆ ಮೇಳಗಳು, ಕುಣಿತ, ಕೋಲಾಟಗಳ ವೈಭವ ಜಾತ್ರೆಯ ಮೆರಗನ್ನು ಹೆಚ್ಚಿಸಿತ್ತು. ರಥೋತ್ಸವದ ಮುಂದೆ ಮತ್ತು ಜಾತ್ರೆಯಲ್ಲಿ ಜಾನಪದ ವಾದ್ಯಗಳ ಕಲರವ ನೋಡುಗರ ಕಣ್ಮನ ಸೆಳೆಯಿತು. ಜಿಲ್ಲೆ ಮಾತ್ರವಲ್ಲದೆ ಗದಗ, ಹಾವೇರಿ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಿಂದಲೂ ಭಕ್ತರ ದಂಡು ಹರಿದು ಬಂದಿತ್ತು. ಭಕ್ತರಿಗೆ ಹುಗ್ಗಿ ಮತ್ತು ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next