Advertisement

ಉಳವಿ ಚೆನ್ನಬಸವೇಶ್ವರ ಕ್ಷೇತ್ರಕ್ಕೆಮುರುಘಾ ಶರಣರ ಭೇಟಿ

05:48 PM Aug 20, 2017 | Team Udayavani |

ಚಿತ್ರದುರ್ಗ: ಪ್ರಸಿದ್ಧ ಭಕ್ತಿಕೇಂದ್ರ ಉಳವಿಯ ಶ್ರೀ ಚೆನ್ನಬಸವೇಶ್ವರ ಕ್ಷೇತ್ರ ಮತ್ತು ಚಿತ್ರದುರ್ಗ ಶ್ರೀಮುರುಘಾ ಮಠದ ನಡುವಿನ ಸಾಂಸ್ಕೃತಿಕ ಸಂಬಂಧ 12ನೇ ಶತಮಾನದಿಂದ ನಡೆದು ಬಂದ ಪರಂಪರೆ ಲಿಂಗೈಕ್ಯ ಜಗದ್ಗುರು ಶ್ರೀ ಜಯದೇವ ಜಗದ್ಗುರುಗಳ ಕಾಲದಿಂದ ಆ ಕ್ಷೇತ್ರದಲ್ಲಿನ ರಥೋತ್ಸವ ಸಂದರ್ಭಕ್ಕೆ ಖುದ್ದಾಗಿ ಮುರುಘಾಶ್ರೀಗಳು ಚಾಲನೆ ನೀಡುವ ಸಂಪ್ರದಾಯವಿತ್ತು. ಇತ್ತೀಚೆಗೆ ಕೆಲವು ವರ್ಷಗಳಿಂದ ಈ ಸಂಪ್ರದಾಯ ನಿಂತುಹೋಗಿದ್ದು, ಮನಸ್ತಾಪಕ್ಕೆ ಎಡೆಮಾಡಿಕೊಟ್ಟಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಕೈಗಾರಿಕಾ ಮಂತ್ರಿ ಆರ್‌.ವಿ. ದೇಶಪಾಂಡೆ ನಿವಾಸದಲ್ಲಿ ಮುಜರಾಯಿ ಸಚಿವ ರುದ್ರಪ್ಪ ಲಮಾಣಿಯವರ ಸಮಕ್ಷಮದಲ್ಲಿ ನಡೆದ ಮಾತುಕತೆಯಲ್ಲಿ ತೀರ್ಮಾನಿಸಿದಂತೆ ಡಾ| ಶಿವಮೂರ್ತಿ ಮುರುಘಾ ಶರಣರು ಶುಕ್ರವಾರ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದರು. ಅಲ್ಲಿನ ಟ್ರಸ್ಟ್‌ನ ಪದಾಧಿಕಾರಿಗಳು ಶ್ರೀಗಳವರನ್ನು ಬರಮಾಡಿಕೊಂಡು ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ನಾವು ವ್ಯಕ್ತಿಗಳು ಬರುತ್ತೇವೆ, ಹೋಗುತ್ತೇವೆ. ಆದರೆ ಪರಂಪರೆ ಮತ್ತು ಸಂಸ್ಕೃತಿ ಶಾಶ್ವತವಾದುದು. ಉತ್ತಮ ಸಂಸ್ಕೃತಿಯನ್ನು ಶರಣರ ಕನಸಿನ ಸ್ವತ್ಛ ಸಮಾಜ ಕಟ್ಟಲು ಎಲ್ಲರೂ ಒಂದಾಗೋಣ ಎಂದರು. ಹಾವೇರಿ ಹೊಸಮಠದ ಶ್ರೀ ಶಾಂತಲಿಂಗ ಸ್ವಾಮೀಜಿ, ನೇಗಿನಾಳದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಉಳವಿ ಚೆನ್ನಬಸವೇಶ್ವರ ಟ್ರಸ್ಟಿನ ಅಧ್ಯಕ್ಷ ಗಂಗಾಧರ ಕಿತ್ತೂರ, ಉಪಾಧ್ಯಕ್ಷ ಸಂಜಯ ಕಿತ್ತೂರ, ಪ್ರಧಾನ ಅರ್ಚಕರು, ಟ್ರಸ್ಟಿನ ಸದಸ್ಯರು, ಧಾರವಾಡ ಬಸವಕೇಂದ್ರದ ಈಶ್ವರ ಸಾಣಿಕೊಪ್ಪ, ಸಿದ್ಧರಾಮಣ್ಣ ನಡಕಟ್ಟಿ, ಎಸ್‌.ಜೆ.ಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ| ಜಿ.ಎನ್‌. ಮಲ್ಲಿಕಾರ್ಜುನಪ್ಪ, ಶ್ರೀಮಠದ ವ್ಯವಸ್ಥಾಪಕ ಎ.ಜೆ. ಪರಮಶಿವಯ್ಯ, ಪ್ರಾಂಶುಪಾಲ ಪ್ರೊ| ಸಿ. ಬಸವರಾಜಪ್ಪ, ಹಳಿಯಾಳ ಬಸವಕೇಂದ್ರದ ಚಂದ್ರಕಾಂತ ಅಂಗಡಿ ಇತರರು ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳನ್ನು ಬಗೆಹರಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next