Advertisement

ನೂತನ ಐಜಿಪಿ ಮುರುಗನ್‌ ಅಧಿಕಾರ ಸ್ವೀಕಾರ

10:25 AM Jan 05, 2018 | Team Udayavani |

ಕಲಬುರಗಿ: ಈಶಾನ್ಯ ವಲಯದ ನೂತನ ಐಜಿಪಿಯಾಗಿ ಎಸ್‌. ಮುರುಗನ್‌ ಗುರುವಾರ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಐಜಿಪಿ ಅಲೋಕಕುಮಾರ ಅವರಿಂದ ಕಾರ್ಯಭಾರ ವಹಿಸಿಕೊಂಡರು.

Advertisement

ನಂತರ ಮಾತನಾಡಿದ ಅವರು, ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಅಲೋಕುಮಾರ್‌ ಅವರ ಅವಧಿಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಿಕೊಂಡು ಹೋಗಿದ್ದು, ಆ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ನಾನು ಈ ಹಿಂದೆ ಹೈದ್ರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟಿರುವ ಬಳ್ಳಾರಿಯಲ್ಲಿ ಪೊಲೀಸ್‌ ಮಹಾನಿರೀಕ್ಷಕನಾಗಿ ಕಾರ್ಯನಿರ್ವಹಿಸಿದ್ದು, ಆ ಅನುಭವವು ಇಲ್ಲಿ ಹೆಚ್ಚು ಅನುಕೂಲ ಆಗಲಿದೆ. ಈಶಾನ್ಯ ವಲಯದ ಸಾರ್ವಜನಿಕರ ಸಹಕಾರ ಹಾಗೂ ಸಿಬ್ಬಂದಿ ನೆರವಿನೊಂದಿಗೆ ಕಾನೂನು, ಸುವ್ಯವಸ್ಥೆ ಕಾಪಾಡಲಾಗುವುದು. ಪ್ರಮುಖವಾಗಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದರು.

ಮೂಲತಃ ತಮಿಳ್ನಾಡು ಆಗಿದ್ದರೂ ಸಹ 1997ರಲ್ಲಿ ಕರ್ನಾಟಕದ ಕೆಡೆರ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾಗಿ ಅವರು ಹೇಳಿದರು. ಈಶಾನ್ಯ ವಲಯ ಪೊಲೀಸ್‌ ಮಹಾನಿರೀಕ್ಷಕರ ಕಚೇರಿ ವ್ಯಾಪ್ತಿಯಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಕಲಬುರಗಿಯ ಎನ್‌. ಶಶಿಕುಮಾರ್‌, ಬೀದರನ ದೇವರಾಜ ಹಾಗೂ ಯಾದಗಿರಿಯ ಯಡಾ ಮಾರ್ಟಿನ್‌ ಅವರು ಮುರುಗನ್‌ ಅವರಿಗೆ ಪುಷ್ಪಗುತ್ಛ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next