Advertisement

ಪುರಾಣ ಪ್ರಸಿದ್ಧ ಕ್ಷೇತ್ರ ಮುರ್ಡೇಶ್ವರದಲ್ಲಿ ಭಕ್ತರಿಂದ ಶಿವರಾತ್ರಿ ಆಚರಣೆ

03:26 PM Feb 18, 2023 | Team Udayavani |

ಭಟ್ಕಳ: ತಾಲೂಕಿನ ಶಿವ ಕ್ಷೇತ್ರ, ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುವುದರೊಂದಿಗೆ ರುದ್ರಾಭಿಷೇಕ, ಜಲಾಭಿಷೇಕ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಕೈಗೊಂಡರು.

Advertisement

ಈ ವರ್ಷ ಭಕ್ತರ ಸಂಖ್ಯೆ ಹೆಚ್ಚುವ ಸಂಭವವಿರುವ ಕಾರಣ ದೇವಸ್ಥಾನದ ವತಿಯಿಂದ ಮುಂಜಾನೆ 4.30ಕ್ಕೆ ದೇವಸ್ಥಾನದ ಬಾಗಿಲನ್ನು ತೆರೆದು ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿತ್ತು.

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಭಕ್ತರು ಕಾಲ್ನಡಿಗೆಯಲ್ಲಿ ಭಟ್ಕಳದಿಂದ ಹೊರಟಿದ್ದು, ಈ ಬಾರಿ ಇನ್ನೂ ವಿಷೇಶ ಎನ್ನುವಂತೆ ಬೆಳಗಿನ ಜಾವ 2 ಗಂಟೆಯಿಂದಲೇ ಪಾದಯಾತ್ರೆಯನ್ನು ಆರಂಭಿಸಿದ್ದ ಭಕ್ತರು ದೇವರ ಬಾಗಿಲು ತೆರೆಯುವ ಸಮಯದಲ್ಲಿಯೇ ದರ್ಶನಕ್ಕೆ ಹಾಜರಿದ್ದು, ದೇವರ ದರ್ಶನ ಪಡೆದರು.

ಬೆಳಿಗ್ಗೆಯೇ ಊರಿನ ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಬಂದಿದ್ದು, ಸರದಿಯ ಸಾಲು ಸುಮಾರು ಒಂದು ಕಿ.ಮಿ. ಗಿಂತಲೂ ಜಾಸ್ತಿಯಾಗಿದ್ದು, ಓಲಗ ಮಂಟಪದ ತನಕವೂ ಸಾಲು ಇದ್ದು ಭಕ್ತರ ಸಂಖ್ಯೆ ಪ್ರತಿ ವರ್ಷಕ್ಕಿಂದ ಎರಡು ಪಟ್ಟು ಹೆಚ್ಚು ಎಂಬುದು ಕಂಡು ಬಂತು.

ದೇವಸ್ಥಾನದಲ್ಲಿ ಬಂದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಿದ್ದು ಎಲ್ಲವೂ ಅಚ್ಚುಕಟ್ಟಾಗಿ ನಡೆದಿರುವುದುರಿಂದ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತಾಗಿತ್ತು.

Advertisement

ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನವನ್ನು ಪಡೆಯುವಲ್ಲಿ ಕೂಡಾ ಸಾಕಷ್ಟು ವ್ಯವಸ್ಥೆಯನ್ನು ಮಾಡಿದ್ದರಿಂದ ಊರಿನ ಭಕ್ತರೊಂದಿಗೆ ಪಾದಯಾತ್ರೆಯಲ್ಲಿ ಬಂದ ಸುಮಾರು 6-7 ಸಾವಿರ ಜನರು ಹಾಗೂ ಪರವೂರಿನಿಂದ ಬಂದಿದ್ದ ಪ್ರವಾಸಿ ಭಕ್ತರು ಸಹ ದೇವರ ದರ್ಶನವನ್ನು ಪಡೆಯಲು ಅನುಕೂಲವಾಗಿತ್ತು.

ಸಾವಿರಾರು ಜನರು ಸೇರಿದ್ದರು ಕೂಡಾ ಯಾವುದೇ ತೊಂದರೆಯಾಗದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು‌, ಪ್ರತಿಯೊಂದು ಹಂತದಲ್ಲಿಯೂ ಕೂಡಾ ಪೊಲೀಸರು ಸಹಕರಿಸಿದರು.

ಪುರಾಣ ಪ್ರಸಿದ್ಧ ಶಿವ ಕ್ಷೇತ್ರವಾದ ನಗರದ ಚೋಳೇಶ್ಚರದಲ್ಲಿಯೂ ಸಹ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಪೂಜೆ ಸಲ್ಲಿಸಿದರು.

ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಬರುವುದಕ್ಕೆ ಆರಂಭಿಸಿದ್ದು ಸರದಿಯ ಸಾಲು ಮುಂದುವರಿದೇ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next