Advertisement

ಕೋಮಲ್‌ 2020 ಗೆ ಮುಹೂರ್ತ

03:06 PM Nov 27, 2020 | Suhan S |

ನಟ ಕೋಮಲ್‌ ಹೊಸ ಸಿನಿಮಾ “ಟ್ವೆಂಟಿ ಟ್ವೆಂಟಿ’ ಬಗ್ಗೆ ನಿಮಗೆ ಗೊತ್ತೇ ಇದೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖೀ ಗಣಪತಿ ದೇವಾಲಯದಲ್ಲಿ ಮುಹೂರ್ತವಾಗಿದೆ.

Advertisement

ಈ ತಿಂಗಳಲ್ಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗಲಿದೆ. ಇದು ಔಟ್‌ ಅಂಡ್‌  ಔಟ್‌ಕಾಮಿಡಿ ಸಿನಿಮಾ.ಕೆ.ಎಲ್‌.ರಾಜಶೇಖರ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಸಿನಿಮಾ,ಕಾಮಿಡಿ ಶೋಗಳಿಗೆ ಡೈಲಾಗ್‌ ಬರೆದು, ಸೈ ಎನಿಸಿಕೊಂಡಿರುವ ರಾಜಶೇಖರ್‌ ಈಗ “ಟ್ವೆಂಟಿ ಟ್ವೆಂಟಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಪ್ರೇಕ್ಷಕರನ್ನು ನಗಿಸಲು ಮುಂದಾಗಿದ್ದಾರೆ. ಕೋಮಲ್‌ ಕೂಡಾ ಕಥೆ ಕೇಳಿ ಫಿದಾ ಆಗಿದ್ದಾರೆ. ಈ ಚಿತ್ರವನ್ನು ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನಡಿ ಟಿ.ಆರ್‌.ಚಂದ್ರಶೇಖರ್‌ ನಿರ್ಮಿಸುತ್ತಿದ್ದಾರೆ.

ಇದನ್ನೂ ಓದಿ : ಅಟ್ಟಯ್ಯ ನಿರ್ದೇಶಕನ ಹಾಫ್ ಸ್ಟೋರಿ

ಡಿಸೆಂಬರ್‌ 4ಕ್ಕೆ ರನ್‌-2 ರಿಲೀಸ್‌ :

“ರನ್‌-2′ ಹೀಗೊಂದು ಸಿನಿಮಾ ತಯಾರಾಗಿರುವ ಬಗ್ಗೆ ನೀವು ಕೇಳಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್‌4 ರಂದು ತೆರೆಕಾಣಲಿದೆ. ಚಿತ್ರಕ್ಕೆ ಬಿ.ಎಸ್‌.ಸಂಜಯ್‌ಕತೆ, ಚಿತ್ರಕತೆ, ಸಂಕಲನ ಮತ್ತು ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

Advertisement

ಕಾಲೇಜು ದಿನಗಳನ್ನು ನೆನಪಿಸಿಕೊಂಡು ಹಾಗಯೇ ಪ್ರಯಾಣ ಮಾಡುವ ಸಂದರ್ಭದಲ್ಲಿ ಹುಡುಗಿಯೊಬ್ಬಳು ಸಹಾಯ ಕೋರುತ್ತಾಳೆ. ಅವಳ ಇಚ್ಚೆಯಂತೆ ಕರೆದುಕೊಂಡು ಹೋಗುವಾಗ ಸಮಸ್ಯೆಗಳು ಬರುತ್ತವೆ. ಅವೆಲ್ಲಾವನ್ನು ನಾಯಕ ಎದುರಿಸಿ ಹೇಗೆ ಹೊರಗೆ ಬರುತ್ತಾನೆ ಎಂಬುದು ಚಿತ್ರದ ಒನ್‌ಲೈನ್‌. ಚಿತ್ರದಲ್ಲಿ ಮಂಗಳೂರಿನ ಪವನ್‌ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ.2015ರ ಮಿಸ್ಟರ್‌ ವರ್ಲ್ಡ್ ಮತ್ತು ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಪವನ್‌ ಈಗ ಹೊಸ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. “ಪಂಟ’ ಚಿತ್ರದಲ್ಲಿ ಕುಲುಕು ಕುಲುಕು ಹಾಡಿಗೆ ಹೆಜ್ಜೆ ಹಾಕಿದ್ದ ಮುಂಬೈ ಬೆಡಗಿ ತಾರಾ ಶುಕ್ಲಾ ನಾಯಕಿ.

Advertisement

Udayavani is now on Telegram. Click here to join our channel and stay updated with the latest news.

Next