Advertisement

ವಿಶಿಷ್ಟ ಪರಿಕಲ್ಪನೆಯ ಸಾಹಿತ್ಯ ಕಾರ್ಯಕ್ರಮ ನಿರಂತರವಾಗಿ ನಡೆಯಲಿ: ನಂದಳಿಕೆ ನಾರಾಯಣ ಶೆಟ್ಟಿ

08:04 PM Dec 03, 2020 | Suhan S |

ಮುಂಬಯಿ, ಡಿ. 2: ವಿಶ್ವದ ವಿಶಿಷ್ಟ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವಶ್ರೇಷ್ಠ ಬಾಹುಬಲಿಯ ಪದತಲದಲ್ಲಿ ಮುಹೂರ್ತ ನೆರವೇರುವುದು ಒಂದು ಐತಿಹಾಸಿಕ ಕ್ಷಣ ಎಂದು ಹೆಸರಾಂತ ಮುಂಬಯಿ ಸಾಹಿತಿ, ರಂಗಕರ್ಮಿ ನಂದಳಿಕೆ ನಾರಾಯಣ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ನ. 3ರಂದು 12ನೇ ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮುಹೂರ್ತ, ಶ್ರೀ ಗೋಮಟೇಶ್ವರ ಪಾದಪೂಜೆ, ಮಕ್ಕಳ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಂಬಯಿಯಲ್ಲಿ ಹೊಟೇಲ್‌ ಕಾರ್ಮಿಕರಿಗೆ ಗೌರವ ತರುವ ಉದ್ದೇಶದಿಂದ ಅವರಿಗೆ ಸಾಂಸ್ಕೃತಿಕ ಸ್ಪರ್ಧೆ, ಕಥೆ, ಕವನ, ಪ್ರಬಂಧ ಸ್ಪರ್ಧೆಗಳನ್ನು ನಡೆಸಿ ಹೊಸತನ ಮೆರೆದಿದ್ದ ಶೇಖರ ಅಜೆಕಾರು ಅವರ ವಿಶಿಷ್ಟ ಪರಿಕಲ್ಪನೆಯ ಬೆಳದಿಂಗಳ ಸಮ್ಮೇಳನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.

ವಿಶ್ವವನ್ನು ಗೆದ್ದ ಬಾಹುಬಲಿ ಸ್ವಾಮಿ ಎಲ್ಲವನ್ನು ತ್ಯಜಿಸಿ ಯಾವುದೇ ಗರ್ವ ತೋರದೆ ನಮಗೆಲ್ಲ ಬೆಳಕಾಗಿದ್ದಾರೆ. ಇಲ್ಲಿ ಎರಡು ಬೆಳದಿಂಗಳ ಸಮ್ಮೇಳನಕ್ಕೆ ಅವಕಾಶವಾಗಿತ್ತು. ಹಾಗಾಗಿ ಮುಂದಿನ ಸಮ್ಮೇಳನದ ಮುಹೂರ್ತ ಇಲ್ಲಿ ನಡೆಸಲು ಸಂತೋಷವಾಗುತ್ತಿದೆ ಎಂದು ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ| ಶೇಖರ ಅಜೆಕಾರು ಹೇಳಿದರು.

ಸ್ವಸ್ತಿಕ್‌ ಪ್ರೊಡಕ್ಷನ್‌ನ ಸುರೇಂದ್ರ ಮೋಹನ್‌ ಮುದ್ರಾಡಿ ಮಾತನಾಡಿ, ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆಡಳಿತಾಧಿಕಾರಿ ನರೇಂದ್ರ ಎಸ್‌., ಸದಾ ಶಿವ ಶೆಟ್ಟಿ, ಲೇಖಕ ದೊರೈ ಸ್ವಾಮಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್‌. ಅಜೆಕಾರು, ಸಮಿತಿಯ ಸದಸ್ಯರಾದ ಶಶಿಕಲಾ ಜೆ.ಕೆ. ಬೆಳು ವಾಯಿ, ಸಂತೋಷ ಜೈನ್‌ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ತ್ರಿಭಾಷಾ ಕವಿ ಕಾಂತಾವರ ಶಿವಾನಂದ ಶೆಣೈ, ಗೋಮಟೇಶ್ವರ ವರ್ಣನೆಯ ಕವಿತೆ ಹಾಡಿ ದರು. ಅನೇಕ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾಗಿರುವ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಸಾಧಕ ಪುರಸ್ಕೃತ ಹೆಸರಾಂತ ಬಾಲ ಕಲಾವಿದೆ ತನುಶ್ರೀ ಮಂಗಳೂರು, ನ್ಯಾಶನಲ್‌ ಟ್ಯಾಲೆಂಟೆಡ್‌ ಡ್ಯಾನ್ಸರ್‌ ಗೌರವ ಪಡೆದಿರುವ ಶೃಜನ್ಯಾ ಜೆ. ಕೆ. ಬೆಳುವಾಯಿ, ಯಕ್ಷಗಾನದಲ್ಲಿ ಮಿಂಚುತ್ತಿರುವ ಬಾಲಪ್ರತಿಭೆ ಪ್ರಥಮ್‌ ಮಾರೂರು, ಐದರ ಹರೆಯದ ಬಾಲಪ್ರತಿಭೆ ತನಿಶಾ ಕಾರ್ಕಳ, ಸುನಿಧಿ ಎಸ್‌., ಸುನಿಜಾ ಅಜೆಕಾರು ಮತ್ತು ಆಗಮ ಜೈನ್‌ ಅವರು ಸಂಗೀತ, ನೃತ್ಯ, ಯಕ್ಷ ನೃತ್ಯ ಪ್ರದರ್ಶಿಸಿ ಗಮನಸೆಳೆದರು. ಗೋಮಟೇಶ್ವರ ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ ಪಾದಪೂಜೆ ನೆರವೇರಿಸಿದರು. ಕಾರ್ಕಳ ಜೈನ ಸಹೋದರಿಯರು ದೇವರನಾಮ ನಡೆಸಿಕೊಟ್ಟರು. ಸಮಿತಿಯ ಸದಸ್ಯ ದೀಪಕ್‌ ಎನ್‌. ದುರ್ಗಾ ಕಾರ್ಯಕ್ರಮ ನಿರ್ವಹಿಸಿದರು. ಸುನಿಧಿ ಎಸ್‌. ಅಜೆಕಾರು ವಂದಿಸಿದರು.

Advertisement

ನೂರಾರು ಮಂದಿಯನ್ನು ಬೆಳೆಸಿದೆ : ಬೆಳದಿಂಗಳು ಹೊಸ ಪ್ರತಿಭೆಗಳಿಗೆ ಅವಕಾಶದ ಆಗರವಾಗಿ, ಬೆಳೆಯುವ ಸಿರಿಗಳ ಗೌರವದ ವೇದಿಕೆಯಾಗಿ ನೂರಾರು ಮಂದಿಯನ್ನು ಬೆಳೆಸಿದೆ  ಎಂದು ಅಖೀಲ ಭಾರತೀಯ ಸಾಹಿತ್ಯ ಪರಿಷತ್‌ನ ಗೋರೂರು ಘಟಕದ ಸಂಚಾಲಕಿ ರೇಶ್ಮಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next