Advertisement

Murdeshwar; ಭೀಕರ ಹತ್ಯೆ ನಡೆದ ಸ್ಥಳಕ್ಕೆ ಹೆಚ್ಚುವರಿ SP ಭೇಟಿ ನೀಡಿ ಪರಿಶೀಲನೆ

10:13 PM Oct 18, 2023 | Team Udayavani |

ಭಟ್ಕಳ: ಮುರ್ಡೇಶ್ವರದಲ್ಲಿ ಮಂಗಳವಾರ ನಡೆದ ಭೀಕರ ಕೊಲೆಯ ತನಿಖೆಗೆ ಮಾರ್ಗದರ್ಶನ ನೀಡಲು ಉತ್ತರ ಕನ್ನಡ ಜಿಲ್ಲಾ ಹೆಚ್ಚುವರಿ ಎಸ್.ಪಿ. ಸಿ.ಟಿ. ಜಯಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಎಸ್.ಪಿ. ಸಿ.ಟಿ. ಜಯಕುಮಾರ್ ಅವರು ‘ಮುರ್ಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆಯ ತನಿಖೆ ಮುಂದುವರಿದಿದೆ. ಮೇಲ್ನೋಟಕ್ಕೆ ಕಂಡು ಬಂದಿರುವ ಪ್ರಕಾರ ಕೊಲೆ ಮಾಡಿರುವ ಲೋಕೇಶ ನಾಯ್ಕ ಈತನು ಕಳೆದ ಸುಮಾರು 12 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಉಳ್ಳಾಲದ ನಂದಿನಿಯನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಇವರಿಗೆ ಎರಡು ಮಕ್ಕಳಿದ್ದಾರೆ. ಪತಿ-ಪತ್ನಿಯರಲ್ಲಿ ಆಗಾಗ ಜಗಳ ಆಗುತ್ತಿದ್ದು ಸುಧಾರಿಸಿಕೊಂಡು ಹೋಗುತ್ತಿದ್ದ ಪತ್ನಿ ಕಳೆದ ಕೆಲವು ಸಮಯದ ಹಿಂದೆ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದ್ದಳು. ತನಗೆ ಗಂಡನೊಂದಿಗೆ ಬಾಳುವೆ ಮಾಡಲು ಸಾಧ್ಯವಿಲ್ಲ ಎಂದು ದೂರು ಕೊಟ್ಟಿದ್ದಳು. ಪೊಲೀಸರು ಇಬ್ಬರನ್ನು ಕರೆಯಿಸಿ ರಾಜೀ ಮಾಡಿಸಿ ಮತ್ತೆ ಮನೆಗೆ ಕಳುಹಿಸಿಕೊಟ್ಟಿದ್ದರು.

ಮಂಗಳವಾರ ಕೂಡಾ ರಾತ್ರಿ ಊಟ ಬಡಿಸುವ ವಿಷಯದಲ್ಲಿ ಗಂಡ ಜಗಳ ತೆಗೆದಿದ್ದು ಹೆಂಡತಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೈಯಲ್ಲಿ ಮಚ್ಚು ಹಿಡಿದಿರುವುದನ್ನು ಕಂಡು ಹೆದರಿದ ಆಕೆ ಮನೆಯಿಂದ ಹೊರಗೆ ಓಡಿ ಬಂದಿದ್ದಾಳೆ. ಆಗ ಅಟ್ಟಿಸಿಕೊಂಡು ಬಂದ ಈತ ಆಕೆಯನ್ನು ಮಚ್ಚಿನಿಂದ ಕಡಿದಿದ್ದು ಆಕೆ ಸ್ಥಳದಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾಳೆ ಎಂದರು.

ಶಿಲ್ಪಿ (ಮೂರ್ತಿ ಕೆತ್ತನೆ ಕೆಲಸ) ಮಾಡುತ್ತಿದ್ದ ಈತ ಆಗಾಗ ಹೆಂಡತಿಯೊಂದಿಗೆ ಜಗಳ ಆಡುತ್ತಿದ್ದರು. ಮಂಗಳವಾರ ಆಕೆಯು ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವಿಷಯಕ್ಕೆ ಸಂಬಂಧ ಪಟ್ಟಂತೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಬುಧವಾರ ಬೆಳಗ್ಗೆ ಲೋಕೇಶ ನಾಯ್ಕನನ್ನ ಬಂಧಿಸಲಾಗಿದ್ದು,ನ್ಯಾಯಾಲಯಕ್ಕೆ ಹಾಜರು ಪಡಿಸಿ14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು,ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next