Advertisement

ಗರ್ಲ್ ಫ್ರೆಂಡ್ ಸಖ್ಯ ಕೊಲೆಯಲ್ಲಿ ಅಂತ್ಯ; ಪ್ರೇಯಿಸಿ ಸೇರಿ 4 ಮಂದಿ ಬಂಧನ

10:03 PM Sep 14, 2020 | mahesh |

ಚಿಕ್ಕಬಳ್ಳಾಪುರ: ನಗರದ ಪ್ರಶಾಂತ ನಗರದಲ್ಲಿ ಕೋರ್ಟ್ ಅಟೆಂಡರ್ ನವೀನ್ ಎಂಬಾತನನ್ನು ಹತ್ಯೆ ಮಾಡಿದ 4 ಆರೋಪಿಗಳನ್ನು ಬಂಧಿಸುವುದರಲ್ಲಿ ನಗರ ಪೋಲಿಸರು ಯಶಸ್ವಿಯಾಗಿದ್ದಾರೆ ಗರ್ಲ್ ಫ್ರೇಂಡ್ ಸಖ್ಯದಿಂದ ಕೊಲೆಯಾಗಿರುವ ಅಂಶ ಬೆಳಕಿಗೆ ಬಂದಿದೆ.

Advertisement

ನವೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಿಸಿ ದೀಪಾ ಈಕೆಯ ಮತ್ತೊರ್ವ ಪ್ರೇಮಿ ವಕೀಲ ನವೀನ್ ಮತ್ತು ಆತನ ಇಬ್ಬರು ಕ್ಲೈಂಟ್‍ಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಆಗಷ್ಟ್ 17ರಂದು ಚಿಕ್ಕಬಳ್ಳಾಪುರ ಪ್ರಶಾಂತ ನಗರದ ಬಾಡಿಗೆ ಕೊಠಡಿಯೊಂದರಲ್ಲಿ ನಗರದ ಸಿವಿಲ್ ನ್ಯಾಯಾಲಯದ ಅಟೆಂಡರ್ ನವೀನ್ ಎಂಬಾತನನ್ನು ಜೀನ್ಸ್ ಪ್ಯಾಂಟಿನಿಂದ ಕತ್ತು ಹಿಸುಕಿ ಸಾಯಿಸಿ ಪರಾರಿಯಾಗಿದ್ದರು ಕುತೂಹಲ ಕೆರಳಿಸಿದ ಕೊಲೆ ಪ್ರಕರಣದ ತನಿಖೆ ನಡೆಸಿ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಪ್ರಶಾಂತ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಏನಿದು ಘಟನೆ?: ಕೊಲೆಯಾದ ನವೀನ್ ಇದೆ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ದೀಪಾ ಎನ್ನುವವಳ ಜತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದ ಎನ್ನಲಾಗಿದ್ದು ಚಿಕ್ಕಬಳ್ಳಾಫುರ ವಾಸಿ ವಕೀಲ ಮತ್ತೊಬ್ಬ ನವೀನ್ ಎಂಬಾತ ಯಲಹಂಕದಲ್ಲಿದ್ದುಕೊಂಡು ಉಚ್ಚನ್ಯಾಯಾಲಯದಲ್ಲಿ ಪ್ರಾಕ್ಟೀಸ್ ಮಾಡ್ತಾ ಇರ್ತಾನೆ ಕೆಲವು ಕೇಸುಗಳ ವಿಚಾರವಾಗಿ ಚಿಕ್ಕಬಳ್ಳಾಪುರ ನ್ಯಾಯಾಲಯಕ್ಕೂ ಬಂದು ಹೋಗುವ ವೇಳೆ ಇದೇ ದೀಪಾಳೊಂದಿಗೆ ಪರಿಚಯವಾಗಿ ಸ್ನೇಹ ಬೆಳೆಯುತ್ತದೆ. ಒಂದು ದಿನ ದೀಪಾಳ ಮನೆಯಲ್ಲಿ ಇಬ್ಬರೂ ನವೀನ್‍ರು ಮುಖಾಮುಖಿಯಾಗುತ್ತಾರೆ ಆಗ ಇಬ್ಬರ ನಡುವೆ ಜಗಳ ನಡೆದು ಒಬ್ಬರ ಮೇಲೋಬ್ಬರು ದ್ವೇಶ ಬೆಳೆಸಿಕೊಂಡಿರುತ್ತಾರೆ ಇದಾದ ನಂತರ ದೀಪಾ ವಕೀಲ ನವೀನ್ ನೊಂದಿಗೆ ಗುಡ್ ವೀಲ್ ಬೆಳೆಸಿಕೊಂಡು ಅಟೆಂಡರ್ ನವೀನ್ ಮೇಲೆ ಇಲ್ಲಸಲ್ಲದ ದೂರುಗಳು ಹೇಳಿ ಅವನ ಬಳಿ ಒಳ್ಳೆಯವಳಂತೆ ನಟಿಸುತ್ತಾಳೆ ವಕೀಲ ನವೀನ್ ಇವಳ ಮಾತುಗಳನ್ನು ನಂಬಿ ತನ್ನ ಕ್ಲೈಂಟ್ಸ್ ಯಲಹಂಕದ ಕೃಷ್ಣಮೂರ್ತಿ ಮತ್ತು ಅನಿಲ್ ಎಂಬುವರೊಂದಿಗೆ ನವೀನ್ ಕೊಲೆ ಮಾಡಲು ಸಂಚು ರೂಪಿಸುತ್ತಾನೆ ಅವನ ಇಚ್ಚೆಯಂತೆ ಕೊಲೆಗಡುಕರಿಬ್ಬರು ಚಿಕ್ಕಬಳ್ಳಾಫುರ ನಗರಕ್ಕೆ ಆಗಮಿಸಿ ಅಟೆಂಡರ್ ನವೀನ್ ಚಲನವಲನ ಗಮನಿಸಿ ಅಂದು ರಾತ್ರಿ ಅವನಿದ್ದ ಕೊಠಡಿಗೆ ನುಗ್ಗಿ ಆತನ ಕತ್ತು ಹಿಸುಕಿ ನಂತರ ಜೀನ್ಸ್ ಪ್ಯಾಂಟಿನಿಂದಲೆ ಕೊಲೆ ಮಾಡಿ ಪರಾರಿಯಾಗುತ್ತಾರೆ.

ಫೋನ್ ಮತ್ತು ಸಿಮ್‍ನಿಂದ ಬಯಲಾಯಿತು ಕೊಲೆ ರಹಸ್ಯ: ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದ ನವೀನ್ ಎಂಬಾತನನ್ನು ಉಪಾಯದಿಂದ ಕೊಲೆ ಮಾಡಲು ಸ್ಕೆಚ್‍ಹಾಕಿ ವಕೀಲ ನವೀನ್ ಆಗಸ್ಟ್ 8 ರಂದು ಹೊಸ ಫೋನ್ ಮತ್ತು ಸಿಮ್ ಖರೀದಿಸಿ ಕೊಲೆಯಾದ ಬಳಿಕ ಆಗಸ್ಟ್17 ರ ನಂತರ ಸಿಮ್‍ಡೀ ಆಕ್ಟೀವೇಟ್ ಮಾಡಿರುವುದನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವೃತ್ತ ನಿರೀಕ್ಷಕ್ ಪ್ರಶಾಂತ್ ಮತ್ತು ಅವರ ತಂಡ ತನಿಖೆ ನಡೆಸಿ ವಕೀಲ ನವೀನ್ ಆತನ ಪ್ರೇಯಿಸಿ ದೀಪಾ ಸಹಿತ 4ಜನರನ್ನು ಬಂಧಿಸಿದ್ದಾರೆ.

Advertisement

ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ವೃತ್ತ ನಿರೀಕ್ಷಕ ಪ್ರಶಾಂತ್ ಹಾಗೂ ಪಿಎಸ್‍ಐ ಹೊನ್ನೇಗೌಡ ಅವರಿಗೆ ಬಹುಮಾನ ಘೋಷಿಸಿರುವುದಾಗಿ ಎಸ್.ಪಿ.ಮಿಥುನ್ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next