ಬೆಳ್ವೆ ಗ್ರಾಮದ ಸೂರ್ಗೋಳಿ ಸಮೀಪದ ಸೆಟ್ಟೋಳಿಯ ನಿವಾಸಿ ಸೂರ್ಯನಾರಾಯಣ ಭಟ್ ಅಳೆÕ (50) ಆತ್ಮಹತ್ಯೆ ಮಾಡಿಕೊಂಡ ವರು. ಪತ್ನಿ ಮಾನಸ (45), ಮಕ್ಕಳಾದ ಸುಧೀಂದ್ರ (14) ಮತ್ತು ಸುದೇಶ್ (8) ಹತ್ಯೆಗೀಡಾದವರು.
Advertisement
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ. ಪತ್ನಿ ಮತ್ತು ಮಕ್ಕಳಿಬ್ಬರ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದರೆ, ಪತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೃಷಿಕರಾಗಿದ್ದ ಸೂರ್ಯನಾರಾಯಣ ಕ್ಯಾಟರಿಂಗ್ ಕೆಲಸ ಹಾಗೂ ಮಂದಾರ್ತಿ ದೇವಸ್ಥಾನಕ್ಕೂ ಅಡುಗೆ ಕೆಲಸಕ್ಕೂ ಹೋಗುತ್ತಿದ್ದರು. ಸ್ಥಳೀಯವಾಗಿಯೂ ಸಭೆ, ಸಮಾರಂಭದ ಅಡುಗೆ ಕೆಲಸಕ್ಕೆ ಹೋಗು ತ್ತಿದ್ದರು. ಪತ್ನಿ ಮೂಲತಃ ಮೈಸೂರಿನವಾಗಿದ್ದು ಗೃಹಿಣಿಯಾಗಿದ್ದರು. ಮಕ್ಕಳಾದ ಸುಧೀಂದ್ರ 5ನೇ ತರಗತಿ, ಸುಕೇಶ್ 3ನೇ ತರಗತಿಯನ್ನು ಹೆಬ್ರಿಯ ಖಾಸಗಿ ಶಾಲೆಯಲ್ಲಿ ಓದುತ್ತಿದ್ದರು.
Related Articles
Advertisement
ಕಾರಣ ನಿಗೂಢಸೂರ್ಯನಾರಾಯಣ ಅಡುಗೆ ಕೆಲಸ ಜತೆಗೆ ಕೃಷಿಕರಾಗಿದ್ದು, ಅನುಕೂಲಸ್ಥರಾಗಿದ್ಧರು ಎಂದು ಸ್ಥಳೀಯರು ಹೇಳುತ್ತಾರೆ. ಕೃತ್ಯಕ್ಕೆ ಕಾರಣ ಮಾತ್ರ ನಿಗೂಢವಾಗಿದೆ. ಮಂಗಳವಾರ ರಾತ್ರಿಯ ಕೃತ್ಯ?
ಮೃತದೇಹಗಳನ್ನು ಪರಿಶೀಲಿಸಿರುವ ಪೊಲೀಸರು ಮಂಗಳವಾರ ರಾತ್ರಿ ಅಥವಾ ಹಗಲಿನಲ್ಲಿ ಈ ಕೃತ್ಯ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಬೆಳಕಿಗೆ ಬಂದಿದ್ದು ಹೇಗೆ?
ಸೂರ್ಯನಾರಾಯಣ ಅವರ ತಮ್ಮ ಪ್ರಕಾಶ್ ಅವರು ಅಲ್ಲೇ ಸಮೀಪದ ಮನೆಯಲ್ಲಿ ನೆಲೆಸಿದ್ದು, ರಾತ್ರಿಯಾದರೂ ಯಾಕೆ ಲೈಟ್ ಹಾಕಿಲ್ಲ ಎಂದು ಅನುಮಾನಗೊಂಡು ಸ್ಥಳೀಯರೊಬ್ಬರೊಟ್ಟಿಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತತ್‌ಕ್ಷಣ ಶಂಕರನಾರಾಯಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ಬಂಟ್ವಾಳದ ದುರ್ಘಟನೆ ನೆನಪು
2015ರ ಸೆ. 24ರಂದು ಬಂಟ್ವಾಳದಲ್ಲಿ ಇಂತಹದ್ದೇ ಪ್ರಕರಣ ಸಂಭವಿಸಿತ್ತು. ಗ್ರಾ.ಪಂ. ಸದಸ್ಯ ಪದ್ಮನಾಭ ನಾಯಕ್ ಅವರು ಪತ್ನಿ, ಮಕ್ಕಳಿಬ್ಬರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.