Advertisement
ನಗರದ ಡೀಸಿ ಕಚೇರಿ ಮುಂದೆ ಸಮಾವೇಶಗೊಂಡ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ.ಯತಿರಾಜು, ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷತೆ ಎ.ಗೋವಿಂದರಾಜು, ರವೀಶ್, ಪ್ರಾಂತ ರೈತ ಸಂಘದ ಬಿ.ಉಮೇಶ್, ಅರ್.ಕೆ.ಎಸ್ ಎಸ್.ಎನ್. ಸ್ವಾಮಿ, ಸಿಐಟಿಯು ಸೈಯದ್ ಮುಜೀಬ್, ಕಟ್ಟಡ ಕಾರ್ಮಿಕರ ಸಂಘದ ಬೆಟ್ಟಪ್ಪ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಎಸ್.ಎಸ್. ಪಾಟಿಲ್ ಅವರೊಂದಿಗೆ ಮಾತುಕತೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರ ಪತಿಗಳಿಗಳಿಗೆ ಮನವಿ ಸಲ್ಲಿಸಿದರು.
Related Articles
Advertisement
ರೈತ ಚಳವಳಿ ಮುರಿಯಲು ಅಸಾಧ್ಯ: ಸಂಘಟನೆಗಳು ಕಾರ್ಪೊàರೇಟ್ ಕಂಪನಿಗಳ ನೇತೃತ್ವದ ಬರ್ಬರ ಘಟನೆಗಳನ್ನು ಬಲವಾಗಿ ಮತ್ತು ದೊಡ್ಡ ಧ್ವನಿಯಲ್ಲಿ ಖಂಡಿಸುತ್ತದೆ. ಇಂತಹ ಯಾವುದೇ ದೌರ್ಜನ್ಯ ಹಾಗೂ ಅಧಿಕಾರದ ದುರುಪಯೋಗದ ಮೂಲಕ ರೈತ ಚಳವಳಿಯನ್ನು ಮುರಿಯಲಾಗದೆಂಬುದು ಕಳೆದೆರೆಡು ವರ್ಷಗಳಿಂದ ದೇಶದಾದ್ಯಂತ ಮತ್ತು ದೆಹಲಿ ಗಡಿಗಳ ಸುತ್ತಮುತ್ತ ಕಳೆದ ಹತ್ತು ತಿಂಗಳಿಂದ ದಶ ಲಕ್ಷಾಂತರ ಕುಟುಂಬಗಳು ನಡೆಸುತ್ತಿರುವ ಐತಿಹಾಸಿಕ ಚಳವಳಿಯೆ ಸಾಕ್ಷಿಯಾಗಿದೆ ಎಂದು ಎಚ್ಚರಿಸಿದೆ.
ಮಂತ್ರಿ ಸ್ಥಾನದಿಂದ ವಜಾ ಮಾಡಿ: ತಕ್ಷಣವೇ ರಾಷ್ಟ್ರಪತಿಗಳು ತಾವು ಮಧ್ಯ ಪ್ರವೇಶಿಸಿ ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ ಮಿಶ್ರ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು.
ಸಚಿವ ಅಜಯ ಮಿಶ್ರ ಹಾಗೂ ಆತನ ಮಗ ಆಶಿಶ್ ಮಿಶ್ರ ಮೋನು ಆತನ ಗುಂಡಾ ಪಡೆಯನ್ನು ಬಂಧಿಸಬೇಕು ಮತ್ತು ಕೊಲೆ ಪಾತಕ ಪ್ರಕರಣವೆಂದು ಮೊಕದ್ದಮೆಗಳನ್ನು ಹೂಡಬೇಕು. ಈ ಒಟ್ಟು ಪ್ರಕರಣವನ್ನು ಸುಪ್ರಿಂ ಕೋರ್ಟ್‌ನಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮವಹಿಸಬೇಕು. ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು.
ಈ ಕೊಲೆಪಾತಕ ದುಷ್ಕೃತ್ಯದಲ್ಲಿಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಗಳ ಪರಿಹಾರ ನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲಾ ಸಮಸ್ಯೆಗಳ ಬಗ್ಗೆ ಜಂಟಿ ಸಭೆ ಕರೆಯಿರಿ-
ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಸಂಘದ ಪ್ರತಿನಿಧಿಗಳು ಜಿಲ್ಲಾ ಹಂತದ ಸಮಸ್ಯೆಗಳನ್ನು ಪರಿಹಾರ ಕಾಣಲು ರೈತ ಸಂಘಟನೆಗಳ ಜೊತೆ ಜಂಟಿ ಸಭೆಯನ್ನು ನಡೆಸಲು ರೈತ ಸಂಘದ ಪ್ರತಿನಿಧಿಗಳು ಕೋರಿದರು. ನೀರಾವರಿ ಪ್ರಶ್ನೆಗಳು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯದ ಕುರಿತು ಸಹ ಸಭೆಯ ಅಗತ್ಯ ಇದೆ ಎಂದು ನಿಯೋಗದಲ್ಲಿದ್ದ ಸದಸ್ಯರು ಮನವಿ ಮಾಡಿದರು.