Advertisement

ಹೊಡೆಯಿರಿ, ಇಲ್ಲವೇ ಕೊಂದು ಬಿಡಿ: ವಿದ್ಯಾರ್ಥಿಗಳಿಗೆ ಉಪಕುಲಪತಿ ಉಪದೇಶ!

09:40 AM Dec 31, 2018 | Sharanya Alva |

ಗಾಜಿಯಾಬಾದ್: ನೀವು ಈ ಯೂನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದರೆ..ನೀವು ಯಾವತ್ತೂ ಅಳುತ್ತ ನನ್ನ ಬಳಿ ಬರಬೇಡಿ. ಒಂದೋ ನೀವು ನಿಮ್ಮ ಎದುರಾಳಿ ವಿರುದ್ಧ ಹೊಡೆದಾಡಿ, ಇಲ್ಲವೇ ಸಾಧ್ಯವಾದರೆ ಕೊಂದು ಬಿಡಿ..ಮುಂದೆ ಏನಾಗುತ್ತೋ ಅದನ್ನು ನಾವು ನೋಡಿಕೊಳ್ಳುತ್ತೇವೆ…ಇದು ಉತ್ತರಪ್ರದೇಶದ ಗಾಜಿಪುರ್ ಯೂನಿರ್ವಸಿಟಿ ಸಮಾರಂಭದಲ್ಲಿ ಪೂರ್ವಾಂಚಲ್ ಯೂನಿರ್ವಸಿಟಿ ಉಪ ಕುಲಪತಿಯಾದ ರಾಜಾರಾಮ್ ಯಾದವ್ ಉದುರಿಸಿದ ಅಣಿಮುತ್ತು!

Advertisement

ಯೂನಿರ್ವಸಿಟಿಯ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಯಾದವ್, ಯುವ ವಿದ್ಯಾರ್ಥಿಗಳಾದ ನೀವು ಬಂಡೆಯನ್ನು ಗುದ್ದಿ ನೀರನ್ನು ಹೊರತೆಗೆಯಬೇಕು. ನಿಮ್ಮ ಜೀವನದಲ್ಲಿ ನೀವು ಇಂತಹ ಛಲ ಸಾಧಿಸುವ ಇಚ್ಛೆ ಹೊಂದಿರಬೇಕಾಗುತ್ತದೆ ಎಂಬುದಾಗಿ ಉಪದೇಶ ನೀಡಿದ್ದಾರೆ!

ಉಪಕುಲಪತಿ ಯಾದವ್ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗತೊಡಗಿದ್ದು, ಏತನ್ಮಧ್ಯೆ ನಾನು ವಿದ್ಯಾರ್ಥಿಗಳು ಬಲಿಷ್ಠರಾಗಬೇಕು ಎಂಬರ್ಥದಲ್ಲಿ ಮಾತನಾಡಿದ್ದೇನೆ ಎಂಬುದಾಗಿ ಸಮಜಾಯಿಷಿ ನೀಡಿದ್ದಾರೆ.

ಯಾದವ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮೆಡಿಕಲ್ ಅಂಡ್ ಹೆಲ್ತ್ ಖಾತೆ ಸಚಿವ ಸಿದ್ದಾರ್ಥನಾಥ್ ಸಿಂಗ್, ಇದು ತಪ್ಪು. ಅವರು ಈ ರೀತಿಯ ಹೇಳಿಕೆಯನ್ನು ನೀಡಬಾರದು. ಅವರು ವಿದ್ಯಾರ್ಥಿಗಳಿಗೆ ಶಾಂತಿ ಮಾರ್ಗದ ಕುರಿತಂತೆ ಪಾಠ ಮಾಡಬೇಕು. ಆದರೆ ಇವರು ಗೂಂಡಾ ರಾಜ್ ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಉಪಮುಖ್ಯಮಂತ್ರಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next