ಪುಣೆ: ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಶವವು ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಪೊಲೀಸರ ಕಾರ್ಯಾರಣೆ ಇದು ಆತ್ಮಹತ್ಯೆ ಅಲ್ಲ, ಹತ್ಯೆಗೈದಿರುವುದಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಸಂಶಯದ ಮೇಲೆ ಮೂವರನ್ನು ಬಂಧಿಸಿದ್ದಾರೆ.
ಸಿಂಹಗಡ್ ರಸ್ತೆಯ ಮಾಣಿಕ್ ಬಾಗ್ ಪ್ರದೇಶದಲ್ಲಿ ಈ ಪ್ರಕರಣ ನಡೆದಿತ್ತು. ಯುವತಿ ಎಂಬಿಎ ಪದವೀಧರರಾಗಿದ್ದರು. ಅವರು ಕುಟುಂಬದೊಂದಿಗೆ ವಾಸಿಸುತ್ತಿದ್ದು, ಕಳೆದ ವಾರ, ಆಕೆಯ ಕುಟುಂಬದ ಸದಸ್ಯರೆಲ್ಲ ಊರಿಗೆ ಹೋಗಿದ್ದರು. ಆದರೆ ಯುವತಿಯು ಸಂದರ್ಶನವಿರುವುದಾಗಿ ಹೇಳಿ ಊರಿನಿಂದ ಪುಣೆಗೆ ಹಿಂದಿರುಗಿದ್ದಳು.
ಪುಣೆಯಲ್ಲಿ ನಡೆದ ತೇಜಸಾ ಪಾಯಾಲ್ ಹತ್ಯೆಪ್ರಕರಣದಲ್ಲಿ ಮೂವರು ಶಂಕಿತರನ್ನು ಸಿಂಘಗಡ್ ಪೊಲೀಸರು ಬಂಧಿಸಿದ್ದಾರೆ. ಯುವಕರ ಬದಲಾಗುತ್ತಿರುವ ಜೀವನಶೈಲಿ, ಆಕರ್ಷಕ ಗ್ಲಾಮರ್ ಮೋಡಿಗೆ ತೇಜಸಾ ಬಲಿಯಾಗಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನು ಪಿಯೂಷ್ ಸಂಚೆತಿ, ವಸಂತ್ ಕುಮಾರ್ ಗೌಡ ಮತ್ತು ಸೋನಾಲ್ ಸದರೆ ಎಂದು ಗುರುತಿಸಲಾಗಿದೆ.
ಘಟನೆಯ ಹಿಂದಿನ ರಾತ್ರಿ, ಆರೋಪಿಗಳು ತೇಜಸಾ ಅವರ ಜೊತೆಯಲ್ಲಿದ್ದರು, ಅವರು ಒಟ್ಟಿಗೆ ಪಾರ್ಟಿ ನಡೆಸಿದರು. ತೇಜಸಾ ಅವರ ಅನುಮಾನಾಸ್ಪದ ದೇಹ ಮನೆಯಲ್ಲಿ ಪತ್ತೆಯಾಗಿದೆ. ಘಟನೆಯ ಪರಿಚಯವಿರುವ ಜನರಿಗೆ ಸಂಬಂಧವಿದೆ ಎಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ತೇಜಸಾ ಮನೆಯಲ್ಲಿ ಮದ್ಯದ ಬಾಟಲಿಗಳು ಮತ್ತು ಹುಕ್ಕಾಗಳು ಪತ್ತೆಯಾಗಿವೆ. ಘಟನೆ ನಡೆದಾಗ ಆ ರಾತ್ರಿ ಅವಳು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು.
ಈ ಸ್ನೇಹಿತರ ಪರಿಚರ ಒಂದು ಪಾರ್ಟಿಯಲ್ಲಿ ಆಯಿತು. ತೇಜಸಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರು. ಸ್ವತ: ವೀಡಿಯೊಗಳನ್ನು ಮಾಡಿ ಮತ್ತು ಅವುಗಳನ್ನು ಇಂಸ್ಟಾಗ್ರಾಮದಲ್ಲಿ ಪೋಸ್ಟ್ ಮಾಡಿದರು. ಪಾರ್ಟಿ ಮಾಡುವುದು ಮತ್ತು ಸಾಮಾಜಿಕ ಮಾಧ್ಯಮಗಳ ಕಡೆಗೆ ಆಕೆ ಹೆಚ್ಚು ಆಕರ್ಷಿತಳಾಗಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರಿಗೆ ಸಂಶಯ ಉಂಟಾಯಿತು.
ತೇಜಸಾ ಸಾವಿಗೆ ಸಂಬಂಧಿಸಿದಂತೆ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿದ್ದಾರೆ. ಆದರೆ, ಆಕೆಯನ್ನು ಕೊಲೆ ಮಾಡಲಾಗಿದೆಯೇ ಮತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿದ್ದಾರೆ. ನ್ಯಾಯಾಲಯವು ಮೂವರಿಗೆ ಡಿ.10ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪೊಲೀಸರು ಶಂಕಿತ ಆರೋಪಿಗಳು ಮತ್ತು ಅವರ ಸಂಬಂಧಿಕರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.