Advertisement

ಗಾಂಜಾ ಗುಂಗಿನಲ್ಲಿ ಹತ್ಯೆ: ಬಂಧನ

10:15 AM Oct 12, 2018 | Team Udayavani |

ಬೆಂಗಳೂರು: ಗಾಂಜಾ ನಶೆಯಲ್ಲಿ ಅಮಾಯಕ ಯುವಕನನ್ನು ಹತ್ಯೆಗೈದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ
ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಚೇತನ್‌ ಅಲಿಯಾಸ್‌ ಬಬ್ಲಿ (22) ಮತ್ತು ಮೊಹಮ್ಮದ್‌ ಮನ್ಸೂರ್‌ ಷರೀಫ್(22) ಬಂಧಿತರು. ಆರೋಪಿಗಳಿಬ್ಬರು ಯಾವುದೇ ಕೆಲಸಕ್ಕೆ ಹೋಗದೆ ನಿತ್ಯ ಮದ್ಯ ಹಾಗೂ ಗಾಂಜಾ ಅಮಲಿನಲ್ಲಿ ಇರುತ್ತಿದ್ದರು. ಆ.19ರಂದು ರಾತ್ರಿ 10 ಗಂಟೆ ಸುಮಾರಿಗೆ ಸ್ನೇಹಿತ ನಾರಾಯಣಸ್ವಾಮಿ ಜತೆ ಬೈಕ್‌ನಲ್ಲಿ ಹೋಗುತ್ತಿದ್ದ ಗೌರಿಬಿದನೂರಿನ ಚಂದ್ರಶೇಖರ್‌ ಅವರನ್ನು ಹತ್ಯೆಗೈದು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದರು.

Advertisement

ಬಂಧಿತರ ಪೈಕಿ ಚೇತನ್‌ ವಿರುದ್ಧ ಯಶವಂತಪುರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಮತ್ತೂಬ್ಬ
ಆರೋಪಿ ಮನ್ಸೂರ್‌ ಜತೆ ಸೇರಿ ಕೆಲ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ. ಜತೆಗೆ ಪೆಡ್ಲರ್‌ವೊಬ್ಬನಿಂದ
ಗಾಂಜಾ ತರಿಸುತ್ತಿದ್ದ ಆರೋಪಿಗಳು ನಿತ್ಯ ಯಶವಂತಪುರದ ನಿರ್ಜನ ಪ್ರದೇಶಗಳಲ್ಲಿ ಗಾಂಜಾ ಮತ್ತು ಮದ್ಯ ಸೇವಿಸಿ
ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು ಎಂದು ಪೊಲೀಸರು ಹೇಳಿದರು. 

ಆ.19ರಂದು ರಾತ್ರಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಚಂದ್ರಶೇಖರ್‌ ಕೆಲಸದ ನಿಮಿತ್ತ ಕೊಡಿಗೇಹಳ್ಳಿಗೆ ಹೋಗಿ
ದ್ದರು. ರಾತ್ರಿ 10 ಗಂಟೆ ಸುಮಾರಿಗೆ ಊಟ ಮಾಡಲೆಂದು ಸ್ನೇಹಿತ ನಾರಾಯಣಸ್ವಾಮಿ ಜತೆ ಭದ್ರಪ್ಪ ಲೇಔಟ್‌ನಲ್ಲಿರುವ
ಹೋಟೆಲ್‌ಗೆ ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ಚಂದ್ರಶೇಖರ್‌ ಮತ್ತು ನಾರಾಯಣಸ್ವಾಮಿ 
ಯನ್ನು ಅಡ್ಡಗಟ್ಟಿ, ತಮ್ಮ ಬಳಿ ಇರುವ ವಸ್ತುಗಳನ್ನು ನೀಡುವಂತೆ ಚಾಕು ತೋರಿಸಿ ಬೆದರಿಸಿದ್ದರು. ಹೆದರಿದ ನಾರಾಯಣಸ್ವಾಮಿ ಕೂಡಲೇ ತಮ್ಮ ಬಳಿ ಇದ್ದ ಮೊಬೈಲ್‌ನ್ನು ದುಷ್ಕರ್ಮಿಗಳಿಗೆ ಕೊಟ್ಟಿದ್ದಾರೆ. ಆದರೆ, ಚಂದ್ರಶೇಖರ್‌ ಮೊಬೈಲ್‌ ನೀಡಲು ನಿರಾಕರಿಸಿದ್ದು, ದುಷ್ಕರ್ಮಿಗಳು ಚಾಕುವಿನಿಂದ ಚಂದ್ರಶೇಖರ್‌ ತೊಡೆಗೆ ಹತ್ತಾರು ಇರಿದು
ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿ ಕುಸಿದ ಚಂದ್ರಶೇಖರ್‌ನನ್ನು ತಕ್ಷಣವೇ ಸ್ನೇಹಿತ ನಾರಾಯಣಸ್ವಾಮಿ ಆಸ್ಪತ್ರೆಗೆ ದಾಖಲಿ ಸಿದ್ದರು. ಆದರೆ, ಚಿಕಿತ್ಸೆ ಫ‌ಲಿಸದೇ ಮೃತ ಪಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗಾಂಜಾ ಮಾರಾಟ: ಮೂವರ ಸೆರೆ
ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ಗಾಂಜಾ, ಚರಸ್‌ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಮಲಪುರಂನ ಮಹಮ್ಮದ್‌ ರಿಸಾದ್‌ (26), ಮಲ್ಲಸಂದ್ರದ ಮಹಮ್ಮದ್‌ ರಹೀಸ್‌ (32) ಹಾಗೂ ವಾಲ್ಮೀಕಿ ನಗರದ ಸಾದಿಕ್‌ ಪಾಷ (31) ಬಂಧಿತರು. ಮೂವರು ಆರೋಪಿಗಳು ಪರಸ್ಪರ ಸ್ನೇಹಿತರಾಗಿದ್ದು ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next