Advertisement
ಕಲ್ಲಕ್ಕಿ ಎಸ್ಟೇಟ್ ಲೈನಿನಲ್ಲಿ ದಾವಣಗೆರೆ ಮೂಲದ ಕಾರ್ಮಿಕ ಶಿವ ಹಾಗೂ ಪತ್ನಿ ಲೀಲಾಬಾಯಿ ಕಾರ್ಮಿಕರಾಗಿ ಎರಡು ವರ್ಷದಿಂದ ತೋಟದ ಕೆಲಸಕ್ಕೆ ಸೇರಿದ್ದರು.ಆಕೆಯ ಪತಿ ಕುಡಿದ ಅಮಲಿನಲ್ಲಿ ಮನೆಯಲ್ಲಿ ಪತ್ನಿಯೊಂದಿಗೆ ಜಗಳವಾಡಿ ದೊಣ್ಣೆಯಿಂದ ಪತ್ನಿಯ ತಲೆಗೆ ಹೊಡಿದಿದ್ದು ಪತ್ನಿ ಲೀಲಾಬಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
Related Articles
Advertisement
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್,ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ, ಬಾಳೂರು ಪಿಎಸ್ಐ ವಿ.ಶ್ರೀನಾಥ್ ರೆಡ್ಡಿ, ಎಎಸ್ಐ ರಾಜು,ವಿಶ್ವನಾಥ್,ಹೆಡ್ ಕಾನ್ ಸ್ಟೇಬಲ್ ಶ್ರೀಧರ್,ಸಿಬ್ಬಂದಿಗಳಾದ ಗಿರೀಶ್,ಮನು,ಅಭಿಷೇಕ್,ಮಹೇಶ್, ಸತೀಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶವವನ್ನು ಶವಾಗಾರಕ್ಕೆ ಸಾಗಿಸಲು ಜಾವಳಿಯ ಧರ್ಮಸ್ಥಳ ಶೌರ್ಯ ರಾಷ್ಟ್ರೀಯ ವಿಪತ್ತು ಘಟಕದ ಸದಸ್ಯರು ಸಹಕರಿಸಿದರು.