ಹುಬ್ಬಳ್ಳಿ: ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಕೊಟ್ಟು ದಾಳಿ ಮಾಡಿಸಿದ್ದಾನೆಂದು ಸಿಟ್ಟಾಗಿ ಓರ್ವನ ಮೇಲೆ ಹಲ್ಲೆ ಮಾಡಿ, ಅಪಹರಿಸಿಕೊಂಡು ಹೋಗಿ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.
ಕುಸುಗಲ್ಲ ಗ್ರಾಮದ ರಹಿಮಾನಸಾಬ ಸೇರಿದಂತೆ ನಾಲ್ವರು ಹಾಗೂ ಹುಬ್ಬಳ್ಳಿಯ ಮೂವರು ಸೇರಿ ವೇ ಬ್ರಿಜ್‌ನಲ್ಲಿ ಕೆಲಸ ಮಾಡುತ್ತಿರುವ ಕುಸುಗಲ್ಲ ಗ್ರಾಮದ ಮೌಲಾಸಾಬ ಆರ್. ಶೇಖಸನದಿ ಎಂಬಾತನ ಕೊಲೆಗೆ ಯತ್ನಿಸಿದ್ದಾರೆ.ಜೂಜಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ದಾಳಿ ಮಾಡಿಸಿದ್ದಾನೆ ಎಂದು ಏಳು ಜನರು ಗುರುವಾರ ರಾತ್ರಿ ಮನೆಯಿಂದ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಲ್ಲದೆ, ಕಾರಿನಲ್ಲಿ ಅಪಹರಿಸಿಕೊಂಡು ಎಪಿಎಂಸಿ ರಸ್ತೆಗೆ ಕರೆದೊಯ್ದಿದ್ದಾರೆ. ಅಲ್ಲಿಯೂ ಹಲ್ಲೆ ಮಾಡಿ, ಮೈಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಇಲ್ಲಿನ ಬೆಂಗೇರಿಯ ಆಟೋರಿಕ್ಷಾ ಚಾಲಕ ದಾದಾ ಖಲಂದರ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವವರ ಪತ್ತೆ ನಡೆಸಿದ್ದಾರೆ. ಮನೆಯಲ್ಲೇ ಮದ್ಯ ಮಾರುತ್ತಿದ್ದವನ ಸೆರೆ ನಗರದ ವಿವಿಧ ಬಾರ್‌ಗಳಿಂದ ಮದ್ಯ ಖರೀದಿಸಿ ಇಲ್ಲಿನ ಸೋನಿಯಾ ಗಾಂಧಿ ನಗರದ ಮನೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆಟೋರಿûಾ ಚಾಲಕನನ್ನು ಬೆಂಡಿಗೇರಿ ಪೊಲೀಸರು ಬಂ ಧಿಸಿ, ಆತನಿಂದ 25,737 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಸೋನಿಯಾ ಗಾಂ ಧಿನಗರದ ಅಶ್ವಿನ ವೈ. ಕಲಾಲ ಬಂಧಿತ. ಈತ ವಿವಿಧ ಬಗೆಯ ಟೆಟ್ರಾ ಪ್ಯಾಕೆಟ್ಸ್, ಬಾಟಲ್ಸ್, ಬಿಯರ್ ಗಳನ್ನು ಸ್ಟೇಶನ್ ರಸ್ತೆಯ ನರ್ತಕಿ ಬಾರ್ ಮತ್ತು ಶಿಂಪಿಗಲ್ಲಿಯ ಗುರುದತ್ತ ಬಾರ್‌ಗಳಲ್ಲಿ ಖರೀದಿಸಿ ಅಕ್ರಮವಾಗಿ ತನ್ನ ಮನೆಯಲ್ಲಿ ಮಂಗಳವಾರ ರಾತ್ರಿ ಮಾರಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿ, ಮದ್ಯದ ಟೆಟ್ರಾ ಪಾಕೆಟ್ಸ್, ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮದ್ಯ ಅಕ್ರಮ ಸಾಗಾಟ: ಓರ್ವನ ಬಂಧನ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಆಟೋ ರಿಕ್ಷಾ ಚಾಲಕನನ್ನು ಬೆಂಡಿಗೇರಿ ಪೊಲೀಸರು ಗುರುವಾರ ಬಂಧಿಸಿ, 2,462ರೂ. ಮೌಲ್ಯದ ಮದ್ಯವನ್ನು ಆತನಿಂದ ವಶಪಡಿಸಿಕೊಂಡಿದ್ದಾರೆ.
ಸೆಟ್ಲಮೆಂಟ್ ಗಂಗಾಧರ ನಗರದ ಕೃಷ್ಣ ಎ. ರೋಣ ಬಂ ಧಿತ. ಸ್ಟೇಶನ್ ರಸ್ತೆಯ ಶೃಂಗಾರ ಬಾರ್‌ನಿಂದ ವಿವಿಧ ಬಗೆಯ ಟೆಟ್ರಾ ಪಾಕೆಟ್ ಗಳನ್ನು ಖರೀದಿಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದಾಗ ಗಂಗಾಧರ ನಗರದಲ್ಲಿ ಸಿಕ್ಕಿ ಬಿದ್ದಿದ್ದಾನೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಸ್ಟಮರ್ ಕೇರ್ ಸೋಗಿನಲ್ಲಿ ವಂಚನೆ ಸಿಮ್ ಕಾರ್ಡ್ ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತೇನೆಂದು ನಂಬಿಸಿ ಅಪರಿಚಿತನೊಬ್ಬ ಮೂಲತಃ ಬೆಂಗಳೂರಿನ ಇಲ್ಲಿನ ನವನಗರದ ನಿವೃತ್ತ ನೌಕರರೊಬ್ಬರ ಬ್ಯಾಂಕ್ ಖಾತೆಯಿಂದ 30,010 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ನಿತೀಶ ಶರ್ಮಾ ಎಂಬಾತ ಬಿಎಸ್‌ಎನ್‌ಎಲ್ ಕಸ್ಟಮರ್ ಕೇರ್ ದವನೆಂದು ನಂಬಿಸಿ, ನಿಮ್ಮ ಸಿಮ್ ಕಾರ್ಡ್ ಡಾಕ್ಯುಮೆಂಟ್ ವೆರಿಫಿಕೇಶನ್ ಪೆಂಡಿಂಗ್ ಇದೆ ಎಂದು ಹೇಳಿ ಆಧಾರ ಕಾರ್ಡ್, ಎಟಿಎಂ ಕಾರ್ಡ್ ಮಾಹಿತಿ ಮತ್ತು ಒಟಿಪಿ ಸಂಖ್ಯೆ ಪಡೆದುಕೊಂಡು ಅವರ ಎಸ್‌ಬಿಐ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ಆನ್ ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.