ಸಂಬಂಧ ಸುದ್ದಿಗೋಷ್ಠಿ ನಡೆಸಿದ ಯಶ್, ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಯಶ್, “ಸುಪಾರಿ ಪ್ರಕರಣದಲ್ಲಿ ನನ್ನ ಹೆಸರೇ ಇಲ್ಲ, ನನಗೂ ಇದಕ್ಕೂ ಸಂಬಂಧವಿಲ್ಲ. ಈ ವಿಷಯದಲ್ಲಿ ಕೆಲವು ಮಾಧ್ಯಮಗಳಲ್ಲಿ ವಿನಾ ಕಾರಣ ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ.ಈ ಸುದ್ದಿ ನೋಡಿದ ಮೇಲೆ ಸ್ವತಃ ನಾನೇ ಗೃಹ ಸಚಿವರ ಬಳಿ ಹಾಗೂ ಪೊಲೀಸ್ ಅಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಫ್ಐಆರ್ ಅಥವಾ ಈ ಪ್ರಕರಣದಲ್ಲಿ ನನ್ನ ಹೆಸರಿಲ್ಲ ಎಂದು ಅವರೇ ಖಚಿತ ಪಡಿಸಿದ್ದಾರೆ’ ಎಂದು ತಿಳಿಸಿದ್ದಾರೆ.
ಯಾವುದೇ ಘಟನೆ ನಡೆದಿಲ್ಲ. ಇದೆಲ್ಲ ಎಲ್ಲಿಂದ ಆರಂಭವಾಗಿದೆ, ಹೇಗೆ ಹರಡುತ್ತಿದೆ ಎಂಬುದು ಗೊತ್ತಿಲ್ಲ. ದಯವಿಟ್ಟು ಯಾರೂ ಇಂತಹ ಸುದ್ದಿಗಳಿಗೆ ಕಿವಿಕೊಡಬೇಡಿ’ ಎಂದು ಯಶ್ ಮನವಿ ಮಾಡಿದರು. ನಮ್ಮ ಇಂಡಸ್ಟ್ರಿಯಲ್ಲಿ ಅಂಥವರಿಲ್ಲ: ಸಾಮಾಜಿಕ ಜಾಲತಾಣದಲ್ಲಿ ಇದು ಕೆಟ್ಟ ಪರಿಣಾಮ ಬೀರುತ್ತಿದೆ. ಇನ್ನೊಬ್ಬ ನಟ ಯಾರೋ ಸುಪಾರಿ ಕೊಟ್ಟಿರಬಹುದು ಎಂಬ ಮಾತುಗಳು ಚರ್ಚೆಯಾಗ್ತಿದೆ. ಇದೆಲ್ಲ ನಮ್ಮ ಇಂಡಸ್ಟ್ರಿಯಲ್ಲಿ ಇಲ್ಲ. ನಮ್ಮಲ್ಲಿ ಯಾರೂ ಆ ರೀತಿ ಯೋಚನೆ ಕೂಡ ಮಾಡಲ್ಲ. ಆ ರೀತಿ ಇದ್ದರೇ ದಾಖಲೆ ಕೊಡಿ ಎಂದರು.