Advertisement
ಆದರೆ ಸರ್ಕಾರ ಖಾಸಗಿ ಶಾಲೆಗಳಿಗೆ ಪೈಪೋಟಿಯೊಡ್ಡುವ ರೀತಿಯಲ್ಲಿ ಸಕಲ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಆ ನಿಟ್ಟಿನಲ್ಲಿ ಮುರ್ಕಿ ಸರ್ಕಾರಿ ಶಾಲೆಯೂ ಒಂದು.
Related Articles
Advertisement
ಶಾಲೆ ಸುತ್ತ-ಮುತ್ತ ಹಸಿರುಮಯ ವಾತಾವರಣ, ಕಂಪ್ಯೂಟರ್ ಶಿಕ್ಷಣ, ವ್ಯವಸ್ಥಿತ ಆಟದ ಮೈದಾನ, ಉತ್ತಮ ಶಿಕ್ಷಣ, ಸುಸಜ್ಜಿತ ಕಟ್ಟಡ, ಶೌಚಾಲಯ ಸೇರಿ ಹಲವು ಸೌಲಭ್ಯಗಳಿವೆ. ಗುಣಮಟ್ಟದ ಶಿಕ್ಷಣ ಗಡಿಭಾಗದ ಪ್ರದೇಶದಲ್ಲಿ ಸಿಗಲು ಗ್ರಾಮಸ್ಥರ ಹಾಗೂ ಸಿಆರ್‌ಸಿ ವೆಂಕಟರಾವ್ ಭಾಲ್ಕೆ ಹಾಗೂ ಶಿಕ್ಷಕರ ಶ್ರಮವೇ ಕಾರಣ ಎನ್ನುವುದು ಸಾರ್ವಜನಿಕರ ಮಾತು.
ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಅಭ್ಯಾಸ ಮಾಡಿಸಲು ಕಂಪ್ಯೂಟರ್, ಪ್ರೊಜೆಕ್ಟರ್ ಶಾಲೆಗಳಲ್ಲಿ ದೃಶ್ಯ ಮತ್ತು ಶ್ರವ್ಯ ಸಾಧನ ಬಳಸಿ ಮಕ್ಕಳಿಗೆ ನೈಜ ಚಿತ್ರಗಳನ್ನು ತೋರಿಸುವ ಮೂಲಕ ಕಲಿಕೆ ಸುಲಭವಾಗಿಸಲಾಗುತ್ತಿದೆ.
ಮುರ್ಕಿ ಶಾಲೆ ಸುಂದರ ಶಾಲೆ. ಶಿಕ್ಷಕರು ಪ್ರಾಮಾಣಿಕ, ದಕ್ಷತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದರಿಂದ ಶಾಲೆ ತಾಲೂಕಿನಲ್ಲಿ ಉತ್ತಮ ಹೆಸರು ಗಳಿಸಿದೆ.•ವೆಂಕಟರಾವ್ ಭಾಲ್ಕೆ, ಸಿಆರ್‌ಸಿ ಸಿಆರ್‌ಸಿ ವೆಂಕಟರಾವ್ ಭಾಲ್ಕೆ ಹಾಗೂ ಗ್ರಾಮಸ್ಥರ ಸಹಕಾರದಿಂದ ಶಾಲೆ ಅಭಿವೃದ್ಧಿಯಾಗಿದೆ.
•ವಿದ್ಯಾಲತಾ, ಮುಖ್ಯ ಶಿಕ್ಷಕಿ