Advertisement

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

11:28 PM Apr 18, 2024 | Team Udayavani |

ಹೊಸದಿಲ್ಲಿ: ಖ್ಯಾತ ಲಾಂಗ್‌ ಜಂಪರ್‌ ಮುರಳಿ ಶ್ರೀಶಂಕರ್‌ ಅವರು ತರಬೇತಿ ಪಡೆಯುವ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾದ ಕಾರಣ ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಹೊರಗುಳಿಯಲಿದ್ದಾರೆ. ಗಂಭೀರ ಗಾಯಗೊಂಡ ಕಾರಣ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಅವರು 2024ರ ಋತುವಿನಲ್ಲಿ ಯಾವುದೇ ಸ್ಫರ್ಧೆಯಲ್ಲಿ ಪಾಲ್ಗೊಳ್ಳುವುದು ಸಂಶಯ.

Advertisement

ಏಷ್ಯನ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಬೆಳ್ಳಿಯ ಪದಕ ವಿಜೇತ ಶ್ರೀಶಂಕರ್‌ ಅವರು 2023ರ ಏಷ್ಯನ್‌ ಆ್ಯತ್ಲೆಟಿಕ್‌ ಕೂಟದಲ್ಲಿ ದಾಖಲೆಯ 8.37 ಮೀ. ದೂರ ಹಾರುವ ಮೂಲಕ ಬೆಳ್ಳಿ ಪದಕ ಜಯಿಸಿದರಲ್ಲದೇ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದರು.

25ರ ಹರೆಯದ ಶ್ರೀಶಂಕರ್‌ ಎ. 27ರಂದು ಶಾಂಘಾç ಮತ್ತು ಮೇ 10ರಂದು ದೋಹಾದಲ್ಲಿ ನಡೆ ಯುವ ಡೈಮಂಡ್ಸ್‌ ಲೀಗ್‌ ಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ಈ ಋತುವಿನಲ್ಲಿ ತಮ್ಮ ಸ್ಪರ್ಧೆ ಯನ್ನು ಆರಂಭಿಸುವ ಉತ್ಸಾಹದಲ್ಲಿದ್ದರು. ಆದರೆ ಮಂಗಳ ವಾರ ತರಬೇತಿ ವೇಳೆ ಆದ ಗಾಯ ಅವರ ಒಲಿಂಪಿಕ್ಸ್‌ ನಲ್ಲಿ ಪಾಲ್ಗೊಳ್ಳುವ ಕನಸನ್ನು ನುಚ್ಚುನೂರು ಮಾಡಿದೆ. ದುರದೃಷ್ಟವಶಾತ್‌ ಇದೊಂದು ದುಃಸ್ವಪ್ನದಂತೆ ಭಾಸ ವಾಗಿದ್ದರೂ ನಿಜವಾಗಿದೆ. ಇದರಿಂದ ನನ್ನ ಪ್ಯಾರಿಸ್‌ ಕನಸು ಮುಗಿದಿದೆ ಎಂದವರು ಜಾಲತಾಣದಲ್ಲಿ ಬರೆದು ಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next