Advertisement

ಮುನಿಯಾಲು ಆಯುರ್ವೇದ ಸಂಸ್ಥೆ: ಕ್ಯಾನ್ಸರ್‌ ಔಷಧ, ಚಿಕಿತ್ಸಾ ಕ್ರಮಕ್ಕೆ ಅಮೆರಿಕದ ಪೇಟೆಂಟ್‌

10:59 PM Mar 16, 2020 | Lakshmi GovindaRaj |

ಮಣಿಪಾಲ: ಮುನಿಯಾಲು ಆಯುರ್ವೇದ ಸಂಸ್ಥೆಯ ಅಧ್ಯಕ್ಷ ಡಾ| ಎಂ. ವಿಜಯಭಾನು ಶೆಟ್ಟಿ ಅವರು ಅಭಿವೃದ್ಧಿಪಡಿಸಿರುವ ಕ್ಯಾನ್ಸರ್‌ ಔಷಧ ಮತ್ತು ಕ್ಯಾನ್ಸರ್‌ ಚಿಕಿತ್ಸಾ ಕ್ರಮಕ್ಕೆ ಎರಡು ಪ್ರತ್ಯೇಕ ಪೇಟೆಂಟ್‌ಗಳು ಅಮೆರಿಕದ ಡೈರೆಕ್ಟರ್‌ ಆಫ್ ಪೇಟೆಂಟ್‌ ಆ್ಯಂಡ್‌ ಟ್ರೇಡ್‌ ಮಾರ್ಕ್‌ ಕಚೇರಿಯಿಂದ ಲಭಿಸಿವೆ. ಮುಂದಿನ 20 ವರ್ಷಗಳ ಅವಧಿಗೆ ಸಲ್ಲುವ ಈ ಪೇಟೆಂಟ್‌ ಆಯುರ್ವೇದ ಇತಿಹಾಸದಲ್ಲಿ ಅಮೆರಿಕದಿಂದ ದೊರೆತ ಒಂದು ಅಪರೂಪದ ಮನ್ನಣೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement

600ಕ್ಕೂ ಹೆಚ್ಚು ಸಂಖ್ಯೆಯ, ವಿವಿಧ ಹಂತಗಳಲ್ಲಿ ಬಳಲುತ್ತಿದ್ದ ವಿವಿಧ ತರಹದ ಕ್ಯಾನ್ಸರ್‌ ರೋಗಿಗಳು ಈ ಔಷಧ ಮತ್ತು ಚಿಕಿತ್ಸಾ ಕ್ರಮವನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆ ಮತ್ತು ಸಂಸ್ಥೆಯ ವಿವಿಧ ಚಿಕಿತ್ಸಾಲಯ ಗಳಲ್ಲಿ ಪಡೆದಿದ್ದು, 26ಕ್ಕೂ ಅಧಿಕ ಕ್ಯಾನ್ಸರ್‌ ರೋಗಿಗಳು ಗುಣಮು ಖರಾದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಯಾವುದೇ ದುಷ್ಪರಿಣಾಮಗಳು ಇಲ್ಲದಿರುವಿಕೆ, ಎಂಟು ವಿಧದ ಸೆಲ್‌ಲೈನ್‌ಗಳಲ್ಲಿನ ಉಪಯುಕ್ತತೆ, ಶ್ವಾಸಕೋಶದ ಸೆಲ್‌ ಲೈನ್‌ಗಳ ಜೀನ್‌ ಮಟ್ಟದಲ್ಲಿ ಮುನೆಕ್ಸ್‌ನ ಯಶಸ್ವೀ ಉಪಯೋಗಗಳು ಸಂಶೋಧನೆಯಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಿರುತ್ತವೆ.

ಭಾರತ ಸರಕಾರ ಸಹಿ ಮಾಡಿರುವ P.C.T. Act (Patent Co-operation Treaty) ಸುಮಾರು 150 ರಾಷ್ಟ್ರಗಳನ್ನು ಒಳಗೊಂಡಿದ್ದು, ಮುನೆಕ್ಸ್‌ ಹಲವು ರಾಷ್ಟ್ರಗಳಲ್ಲಿ ಪೇಟೆಂಟ್‌ ಪೆಂಡಿಂಗ್‌ ಟ್ಯಾಗನ್ನು ಹೊಂದಿದೆ ಎಂದು ಡಾ| ವಿಜಯಭಾನು ಶೆಟ್ಟಿ ತಿಳಿಸಿದರು. ಮಹೋಷಧಕಲ್ಪವೆಂದು ಭಾರತ ದಲ್ಲಿ ಕರೆಯಲ್ಪಡುವ ಕ್ಯಾನ್ಸರ್‌ ಚಿಕಿತ್ಸಾ ಕ್ರಮವು ಭಗವಾನ್‌ ಬುದ್ಧನ ಉಪದೇಶ ದಿಂದ ಪ್ರೇರಣೆ ಹೊಂದಿದೆ.

ಕ್ಯಾನ್ಸರ್‌ಗೆ ಕಾರಣವಾದ ಜೀವಕಣಗಳ ಬುದ್ಧಿ ಭ್ರಮಣೆಯನ್ನು ನೀಗಿಸಿ ಜೀವಕಣಗಳ ಬುದ್ಧಿವಂತಿಕೆಯನ್ನು ಎಚ್ಚರಿಸಲು ಮುನೆಕ್ಸ್‌, ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸ್ವರ್ಣಯುಕ್ತ ಹಿರಣ್ಯಪ್ರಾಶ, ವಿಷಾಣುಗಳನ್ನು ನಿಷ್ಕ್ರಿಯ ಗೊಳಿಸುವ ಮಹೋಷಧ ಗ್ರಾನ್ಯೂಲ್ಸ್‌ ಹಾಗೂ ಮನಸ್ಸನ್ನು ಕಲ್ಮಷಗೊಳಿಸುವ ಕಾಯಿಲೆಗಳ ನಿವಾರಣೆಗೆ ಬುದ್ಧನ ಬೋಧನೆಯಾದ ತ್ರಿಪಿಟಕದ ಸಾರಂಶ ವಾದ “ಧಮ್ಮಪದ’ದ ಅಧ್ಯಯನ ಈ ಚಿಕಿತ್ಸಾಕ್ರಮದಲ್ಲಿ ಒಳಗೊಂಡಿವೆ ಎಂದು ಡಾ| ಶೆಟ್ಟಿ ವಿವರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next