Advertisement
ಹೋರಾಟ ಮಾಡಿದ್ದಕ್ಕೆ ಕೇಸು: ನನ್ನ ಮೇಲೆ ಠಾಣೆಗಳಲ್ಲಿ ಕೇಸ್‌ಗಳಿವೆ ನಿಜ. ಆದರೆ, ಆ ಕೇಸ್ ಗಳು ನನ್ನ ಕ್ಷೇತ್ರದಲ್ಲಿ ಬಡವರಿಗಾಗಿ ನೀರಾವರಿಗಾಗಿ, ಚರಂಡಿ ಮಾಡುವುದಕ್ಕೆ, ರಸ್ತೆ ಮಾಡುವುದಕ್ಕೆ, ಫ್ಲೈಒವರ್ ಮಾಡುವುದಕ್ಕೆ ಹಾಗೂ ಬಡವರ ಸಮಸ್ಯೆ ನೀಗಿಸುವುದಕ್ಕೆ ಹೋರಾಟಗಳು ಮಾಡಿರುವುದಕ್ಕೆ ಎಂದು ಹೇಳಿದರು.
ಹಾಗೂ ಕೆ.ಎಚ್.ಮುನಿಯಪ್ಪ ಏನೆಂದು ಈಗಾಗಲೇ ನಿಮಗೆ ಗೊತ್ತಿದೆ. ಈ ಕ್ಷೇತ್ರಕ್ಕೆ ಬಂದಾಗಿನಿಂದ ಎಷ್ಟು ಬರಗಾಲ ಬಂದಿದೆ ಎಂದು ನಿಮಗೆ ಗೊತ್ತಿದೆ. ಯಾರು ಯಾರಿಗೆ ಎಷ್ಟೆಷ್ಟೂ ಜಮೀನು ಮಾಡಿಕೊಟ್ಟಿದ್ದಾರೆ ಎಂಬುದು ನೀವು ಪ್ರತಿನಿತ್ಯ ಮಾಧ್ಯಮಗಳಲ್ಲಿ ನೋಡುತ್ತಿದ್ದಿರಿ ಎಂದು ಹೇಳಿದರು. ನರೇಂದ್ರ ಮೋದಿ ಅವರು ರೈತರ ಪರವಾಗಿ ಹಲವು ಸೇವೆ ಮಾಡಿದ್ದಾರೆ. ಅದನ್ನು ಮನೆ ಮನೆಗೂ ಈಗಾಗಲೇ ಪಕ್ಷದವರು ತಲುಪಿಸಿದ್ದಾರೆ, ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ತಿಳಿಸಿದರು. ಸಿಂಗಪೂರು ಗೋವಿಂದಪ್ಪ ಮತನಾಡಿ, ಈಗಾಗಲೇ ಬಿಜೆಪಿ ಅಭ್ಯರ್ಥಿ ಮುನಿಸ್ವಾಮಿಗೆ ದೊಡ್ಡ ಲೀಡರ್‌ಗಳೆಲ್ಲ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಮೊದಲ ಬಾರಿಗೇ ವೇಮಗಲ್ ಗ್ರಾಮಕ್ಕೆ ಬಂದಾಗ ಹೋಬಳಿಯಾದ್ಯಂತ ಅಭಿಮಾನಿಗಳು ಜಮಾಯಿಸಿದ್ದರು. ಬಿಜೆಪಿ ಸೇರ್ಪಡೆ: ವೇಮಗಲ್, ನರಸಾಪುರ ಮತ್ತು ಕ್ಯಾಲನೂರು ಕ್ಷೇತ್ರದಲ್ಲಿ ಹಲವು ಹಿರಿಯ ಮುಖಂಡರು ಮುನಿಸ್ವಾಮಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು. ವೇಮಗಲ್ ಗ್ರಾಪಂ ಸದಸ್ಯರು, ಎಸ್‌ಎಫ್ಎಸ್ ಸಿಎಸ್ ಅಧ್ಯಕ್ಷರಾದ ಶೈಲಜಾ ವೆಂಕಟೇಶ್, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ, ಗ್ರಾಮಾಂತರ ಉಪಾಧ್ಯಕ್ಷ ಪೊಲೀಸ್ ಚಲಪತಿ. ರಾಜಕಲ್ಲಹಳ್ಳಿ ದಿನಕರ್, ಕುರುಗಲ್ ಆನಂದ್, ವೇಮಗಲ್ ಓಹಿಲೇಶ್, ಚನ್ನಸಂದ್ರ ಸಿ.ಡಿ. ರಾಮಚಂದ್ರಪ್ಪ, ಎಲ್ಲಾ ಯುವಕರು, ಮಹಿಳೆಯರು ಪ್ರಚಾರದಲ್ಲಿ ತೊಡಗಿದ್ದರು.