Advertisement

ನಿರಾಕ್ಷೇಪಣ ಪತ್ರ ಪಡೆಯದೆ ಕಾಮಗಾರಿ ನಡೆಸಿದ ಪುರಸಭೆ

11:09 PM Jul 03, 2019 | Sriram |

ಮೂಡುಬಿದಿರೆ: ಇಲ್ಲಿನ ಪೇಟೆಯಲ್ಲಿ ನಿರ್ಮಾಣವಾಗುತ್ತಿರುವ ಮಾರುಕಟ್ಟೆ ಕಟ್ಟಡ ಸಂರಕ್ಷಿತ ಸ್ಮಾರಕದಿಂದ 190 ಮೀ. ಅಂತರದೊಳಗೆ ಇದೆ ಎಂಬುದು ಪುರಾತಣ್ತೀ ಸರ್ವೇಕ್ಷಣಾ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆಯಿಂದ ದೃಢಪಟ್ಟಿದೆ.

Advertisement

ನಿಯಮಾನುಸಾರ ನಿರಾಕ್ಷೇಪಣಾ ಪತ್ರ ಪಡೆಯದೆ ಮಾರುಕಟ್ಟೆ ಕಾಮಗಾರಿ ನಡೆಸುವಂತಿಲ್ಲ. ಆದರೆ ಪುರಾತಣ್ತೀ ಇಲಾಖೆಯ ನಿರಕ್ಷೇಪನಾ ಪತ್ರ ಪಡೆಯದೆ ಕಾಮಗಾರಿ ನಡೆಸಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹೈಕೋರ್ಟ್‌ಗೆ ಅವಕಾಶವಿದೆ.

ಸಂರಕ್ಷಿತ ಸ್ಮಾರಕ ಚೌಟರ ಅರಮನೆಯ ಸಮೀಪ ನಿರ್ಮಾಣವಾಗುತ್ತಿರುವ ಮೂಡುಬಿದಿರೆ ಮಾರುಕಟ್ಟೆ ಕಾಮಗಾರಿಗೆ ಸಂಬಂಧಪಟ್ಟಂತೆ ಜೈಸನ್‌ ತಾಕೊಡೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಮತ್ತು ನ್ಯಾ| ಎಚ್.ಟಿ. ನರೇಂದ್ರ ಪ್ರಸಾದ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಹೈಕೋರ್ಟ್‌ ಜೂ. 11ರಂದು ಮಧ್ಯಾಂತರ ತಡೆ ನೀಡಿತ್ತು.

ಸಂರಕ್ಷಿತ ಪ್ರದೇಶಗಳನ್ನು ಕಾಪಾಡುವುದು ಸಾರ್ವಜನಿಕ ಹಿತಾಸಕ್ತಿಯ ಆದ್ಯತೆಗಳಲ್ಲಿ ಒಂದು ಎಂದು ಅಭಿಪ್ರಾಯಪಟ್ಟು, ಕಾಮಗಾರಿ ನಿಲ್ಲಿಸುವಂತೆ ಮೂಡುಬಿದಿರೆ ಪುರಸಭೆಗೆ ಮಧ್ಯಂತರ ಆದೇಶ ನೀಡಿತ್ತು. ಪುರಾತಣ್ತೀ ಇಲಾಖೆಯವರು ಅನುವಾದಿತ ಪ್ರದೇಶದ ಸರ್ವೆ ಕಾರ್ಯ ನಡೆಸಿ ನಾಲ್ಕು ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸರಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಮಂಗಳವಾರ ಪುರಾತಣ್ತೀ ಸರ್ವೇಕ್ಷಣಾ ಇಲಾಖೆಯ ಬೆಂಗಳೂರು ವೃತ್ತದ ಉಪ ಪುರಾತಣ್ತೀ ಶಾಸ್ತ್ರಜ್ಞ ಅಧೀಕ್ಷಕ ಕೆ.ಪಿ. ಮೋಹನ್‌ದಾಸ್‌ ಅವರ ನೇತೃತ್ವದಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸರ್ವೇಯರ್‌ ಮುರಳಿ ಮೋಹನ್‌, ಕಾರ್ಕಳ ಸಬ್‌ಸರ್ಕಲ್ ಸಂರಕ್ಷಣಾ ಸಹಾಯಕ ಗೋಕುಲ್, ಸ್ಮಾರಕ ರಕ್ಷಕ್‌ ಆರ್‌.ಎನ್‌. ನಾಯಕ್‌ ಜಂಟಿ ಸರ್ವೆ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next